• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾಗೆ ಇಡೀ ಇಟಲಿ ತತ್ತರ: ಸಾವು ನೋವುಗಳ ಮಧ್ಯೆಯೂ ಬಾಲಿವುಡ್​​ ಹಾಡಿಗೆ ಕುಣಿದ ಸ್ಥಳೀಯರು; ಯಾಕೆ ಗೊತ್ತೇ?

ಕೊರೋನಾಗೆ ಇಡೀ ಇಟಲಿ ತತ್ತರ: ಸಾವು ನೋವುಗಳ ಮಧ್ಯೆಯೂ ಬಾಲಿವುಡ್​​ ಹಾಡಿಗೆ ಕುಣಿದ ಸ್ಥಳೀಯರು; ಯಾಕೆ ಗೊತ್ತೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜನಸಂಖ್ಯೆಯಲ್ಲಿ ಸಣ್ಣದಾದ ಇಟಲಿಯಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. 50 ವರ್ಷ ದಾಟಿದವರೇ ಸೋಂಕು ಪೀಡಿತರಲ್ಲಿ ಹೆಚ್ಚಾಗಿದ್ದಾರೆ. ಇಟಲಿಯಲ್ಲಿ ಏಪ್ರಿಲ್​ 5ರಿಂದ ಈಸ್ಟರ್​ ವಾರವನ್ನು ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಇದನ್ನು ಕೊರೋನಾ ವೈರಸ್​ ಕಾರಣದಿಂದಲೇ ರದ್ದು ಮಾಡಲಾಗಿದೆ.

ಮುಂದೆ ಓದಿ ...
  • Share this:

    ನವದೆಹಲಿ(ಮಾ.17): ಕೊರೋನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನೇ ಇಟಲಿ ಸರ್ಕಾರ ಬಂದ್​​ ಮಾಡಿದೆ. ಸಾಕಷ್ಟು ಕ್ರಮಗಳ ಹೊರತಾಗಿಯು ವೈರಸ್​​ಗೆ ಬಲಿಯಾಗುತ್ತಿರುವ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೇರುತ್ತಲೇ ಇದೆ. ಈ ಮಹಾಮಾರಿಗೆ ಭಾನುವಾರ ಒಂದೇ 368 ಜನರು ಮೃತಪಟ್ಟಿದ್ದರು. ಇದರೊಂದಿಗೆ ಇಟಲಿಯಲ್ಲಿ ಸೋಂಕು ಪೀಡಿತರ ಸಂಖ್ಯೆ 19 ಸಾವಿರ ದಾಟಿದ್ದು, ಸಾವಿನ ಸಂಖ್ಯೆ 2158ಕ್ಕೆ ಏರಿದೆ. ಇದರಿಂದ ಇಟಲಿ ಸರ್ಕಾರ ಕಂಗಾಲಾಗಿದ್ದರೆ, ಇಲ್ಲಿನ ಜನ ಮಾತ್ರ ತಮ್ಮ ಈ ಮಹಾಮಾರಿ ಚಿಂತೆಯಿಂದ ಪಾರಾಗಲು ಹಾಡುತ್ತಾ ಖಷಿಯಾಗಿದ್ದಾರೆ.


    ಜನಸಂಖ್ಯೆಯಲ್ಲಿ ಸಣ್ಣದಾದ ಇಟಲಿಯಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. 50 ವರ್ಷ ದಾಟಿದವರೇ ಸೋಂಕು ಪೀಡಿತರಲ್ಲಿ ಹೆಚ್ಚಾಗಿದ್ದಾರೆ. ಇಟಲಿಯಲ್ಲಿ ಏಪ್ರಿಲ್​ 5ರಿಂದ ಈಸ್ಟರ್​ ವಾರವನ್ನು ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಇದನ್ನು ಕೊರೋನಾ ವೈರಸ್​ ಕಾರಣದಿಂದಲೇ ರದ್ದು ಮಾಡಲಾಗಿದೆ. ಕೇವಲ ಫುಡ್​​ ಸ್ಟೋರ್ಸ್​​ ಮತ್ತು ಮೆಡಿಕಲ್​ ಶಾಪ್​​ಗಳು ಬಿಟ್ಟರೆ ಬಹುತೇಕ ಎಲ್ಲವೂ ಬಂದ್​ ಆಗಿದೆ. ಜನರನ್ನು ಸರ್ಕಾರವೇ ಗೃಹಬಂಧನದಲ್ಲಿ ಇರಿಸಿದೆ. ಹೀಗಿರುವಾಗ ಸ್ಥಳೀಯರು ಇದ್ಯಾವುದನ್ನು ಲೆಕ್ಕಿಸದೆ ಕೊರೋನಾ ವೈರಸ್​​ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಆದ್ದರಿಂದಲೇ ವಿನೂತನವಾಗಿ ಹಾಡು ಹಾಡುವ ಮೂಲಕ ಕೊರೋನಾ ವಿರುದ್ಧ ಒಂದು ರೀತಿಯ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇಟಲಿ ದೇಶದ ಸಾಂಪ್ರದಾಯಿಕ ಮತ್ತು ಜಾನಪದದಿಂದ ಹಿಡಿದು ಬಾಲಿವುಡ್​​ ಸಾಂಗುಗಳನ್ನು ಹಾಡುವ ಮೂಲಕ ಜೀವಂತವಾಗಿ ನೆಮ್ಮದಿಂದ ಇರಲು ಯತ್ನಿಸುತ್ತಿದ್ದಾರೆ.


    ಹೀಗೆ ಇಟಲಿಯನ್ನರು ತಮ್ಮ ಅಪಾರ್ಟುಮೆಂಟುಗಳಲ್ಲಿ ಬಾಲ್ಕನಿಯಲ್ಲಿ ನಿಂತು ನೂರಾರು ಜನ ಒಟ್ಟಿಗೆ ಹಾಡು ಹಾಡುವುದನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯಲಾಗಿದೆ. ಇದರಲ್ಲಿ ಬಾಲಿವುಡ್​​​ ಸಾಂಗ್ಸ್​​ ಕೇಳಿ ಬಂದಿದೆ. ಇನ್ನೊಂದಷ್ಟು ಜನ ಇದನ್ನು ಎಡಿಟ್​​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


    ಸಾಮಾಜಿಕ ಜಾತಲಾಣದಲ್ಲಿ ಹಂಚಿಕೊಂಡ ಕೆಲವೊಂದು ವಿಡಿಯೋ ತುಣುಕುಗಳನ್ನು ನೀವೇ ನೋಡಿ...


    ಎಡಿಟ್​​ ಮಾಡಿರುವ ವಿಡಿಯೋಗಳು:











    ಒರಿಜಿನಲ್​​​ ವಿಡಿಯೋ ತುಣುಕುಗಳು...










    !function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");

    Loading...

    Published by:Ganesh Nachikethu
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು