ಕೊರೋನಾ ವೈರಸ್ ಪರಿಣಾಮ: ದೆಹಲಿಯಲ್ಲಿ ನಡೆಯಬೇಕಿದ್ದ ಐಎಸ್ಎಸ್ಎಫ್ ಶೂಟಿಂಗ್ ವಲ್ಡ್​ಕಪ್​ ಮುಂದಕ್ಕೆ

ದೆಹಲಿಯ ಡಾಕ್ಟರ್ ಕರ್ಣಿ ಸಿಂಗ್ ಶೂಟಿಂಗ್ ರೇಂಜ್​ನಲ್ಲಿ ನಡೆಯ ಬೇಕಾಗಿದ್ದ ಶೂಟಿಂಗ್ ವರ್ಲ್ಡ್ ಕಪ್ ಕೊರೋನ ವೈರಸ್ ಕಾರಣದಿಂದ ಮುಂದೂಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಶುಕ್ರವಾರ ನಡೆಯಬೇಕಿದ್ದ ಶೂಟಿಂಗ್ ವರ್ಲ್ಡ್ ಕಪ್ ಅನ್ನು ಮುಂದೂಡಲಾಗಿದೆ. ಟೋಕಿಯೋದಲ್ಲಿ ನಡೆಯಬೇಕಿದ್ದ ಓಲಿಂಪಿಂಕ್ ಟೆಸ್ಟ್ ಅನ್ನು ಸಹ ರದ್ದುಗೊಳಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋಟ್ಸ್ ಫೆಡರೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯು ಮಾರ್ಚ್​ 15 ರಿಂದ 25ರವರೆಗೆ ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್​ನಲ್ಲಿ ನಡೆಯಬೇಕಿತ್ತು. ಆದರೆ ದೆಹಲಿಯಲ್ಲಿ ಕೊರೋನಾ ವೈರಸ್​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ತಳೆಯಲಾಗಿದೆ.

  ಈ ಬಾರಿಯ ಓಲಿಂಪಿಕ್ ಟೆಸ್ಟ್​ ಅನ್ನು ಏಪ್ರಿಲ್ 16ಕ್ಕೆ ನಿಗದಿಪಡಿಸಲಾಗಿತ್ತು. ಈ ಸ್ಪರ್ಧೆಯನ್ನು ದೆಹಲಿಯಲ್ಲಿ ಎರಡು ಭಾಗಗಳಾಗಿ ಮೊದಲು ವಿಗಂಡಿಸಿ ಏರ್ಪಡಿಸಲಾಗುವುದು ಮತ್ತು ದಿನಾಂಕವನ್ನು ಬೇಗನೆ ಪ್ರಕಟಿಸಲಾಗುವುದು ಎಂದು ನ್ಯಾಷನಲ್ ರೈಫಲ್ ಅಸೋಸಿಯೆಷನ್ ಆಫ್ ಇಂಡಿಯಾ ಹೇಳಿದೆ.

  ದೆಹಲಿ ಸರ್ಕಾರವು ಚೀನಾ, ಇಟಲಿ, ಸೌತ್ ಕೋರಿಯಾ, ಜಪಾನ್ ಮತ್ತು ಇರಾನ್​ನಿಂದ ಬರುವ ಪ್ರವಾಸಿಗರಿಗೆ ಕೆಲವು ನಿಬಂಧನೆಗಳನ್ನು ವಿಧಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

  ಉಳಿದ 22 ದೇಶಗಳು ಸಹ ಸ್ಪರ್ಧೆಯಿಂದ ಹಿಂದುಳಿದಿವೆ ಎಂದು NRAI ಪಿಟಿಐಗೆ ತಿಳಿಸಿದೆ.
  ಕಳೆದ ರಾತ್ರಿಯವರೆಗೆ 22 ದೇಶಗಳು ಎಂದು ಹೇಳಲಾಗುತ್ತಿದೆ. ಆದರೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕೆಲ ದೇಶಗಳು ವೀಸಾ ಕೇಳಿವೆ ಎಂದು ಮೂಲಗಳು ಹೇಳಿವೆ. ಸರ್ಕಾರದ ನಿಯಮಗಳ ಪ್ರಕಾರ 2020ರಲ್ಲಿ ವೈರಸ್ ಸೋಂಕಿತ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದ ಜನರು ಇದುವರೆಗೂ ಭಾರತಕ್ಕೆ ವಾಪಸ್ ಆಗದಿದ್ದರೆ ಅವರ ವೀಸಾವನ್ನು ರದ್ದುಗೊಳಿಸಲಾಗುತ್ತದೆ.

  ಇದನ್ನೂ ಓದಿ: ಮಾರ್ಚ್ 31ರವರೆಗೆ ದೆಹಲಿಯ ಎಲ್ಲ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ

  ಈ ದೆಹಲಿ ಕಾರ್ಯಕ್ರಮವು ರೈಫಲ್ ಮತ್ತು ಪಿಸ್ತೂಲ್ ವರ್ಲ್ಡ್ ಕಪ್​ಗಾಗಿ ನಡೆಸಲಾಗುತ್ತಿತ್ತು.
  ಚೀನಾದ ವುಹಾನ್​ ಪ್ರದೇಶದಿಂದ ಆರಂಭವಾಗಿ ಪ್ರಪಂಚದಾದ್ಯಂತ ಹರಡುತ್ತಿರುವ ಕೊರೋನ ವೈರಸ್​ನಿಂದ ಹಲವಾರು ಕ್ರೀಡಾ ಸ್ಪರ್ಧೆಗಳು ರದ್ದಾಗಿವೆ ಅಥವಾ ಮುಂದೂಡಲಾಗಿದೆ.

  ಇದನ್ನೂ ಓದಿ: YES Bank Crisis: ಯೆಸ್ ಬ್ಯಾಂಕ್ ಬಿಕ್ಕಟ್ಟು; ಫೋನ್ ಪೇಗೆ ಸಂಕಷ್ಟ; ಸ್ವಿಗ್ಗಿ, ಫ್ಲಿಪ್​ಕಾರ್ಟ್ ವಹಿವಾಟಿಗೂ ತೊಂದರೆ; ಗೂಗಲ್ ಪೇ, ಪೇಟಿಎಂ ಅಬಾಧಿತ

  ಕಳೆದ ವಾರ ಸಿಪ್ರಸ್​ನಲ್ಲಿ ನಡೆದಿದ್ದ ಐಎಸ್ಎಸ್ಎಫ್ ವರ್ಲ್ಡ್ ಕಪ್​ನಿಂದ ಭಾರತ ಹಿಂದೆ ಸರಿದಿತ್ತು.

  ಈ ಭಯಾನಕ ಮಹಾಮಾರಿ ಈಗಾಗಲೇ 300 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 1000ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದಾರೆ.

  ಇದನ್ನೂ ಓದಿ: ಕೊರೋನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 31ಕ್ಕೇರಿಕೆ; ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಸೋಂಕು ಏರಿಕೆ

  ದೆಹಲಿಯಲ್ಲಿ ನಡೆಯಬೇಕಿದ್ದ ವರ್ಲ್ಡ್ ಕಪ್ ಅನ್ನು ಮುಂದೂಡಲಾಗಿದೆ ಎಂದು ದಿ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋಟ್ಸ್ ಫೆಡರೇಷನ್ ಬುಧವಾರ ಹೇಳಿದೆ.

  (ವರದಿ: ಸಂಧ್ಯಾ ಎಂ)
  First published: