• ಹೋಂ
  • »
  • ನ್ಯೂಸ್
  • »
  • Corona
  • »
  • ಇಸ್ರೇಲ್‌ನಲ್ಲಿ Pfizer ಲಸಿಕೆ ಪರಿಣಾಮ ಬೀರುತ್ತಿಲ್ಲವೇ? ಡೆಲ್ಟಾ ರೂಪಾಂತರದ ಕಪಿಮುಷ್ಟಿಯಲ್ಲಿ ಜನತೆ

ಇಸ್ರೇಲ್‌ನಲ್ಲಿ Pfizer ಲಸಿಕೆ ಪರಿಣಾಮ ಬೀರುತ್ತಿಲ್ಲವೇ? ಡೆಲ್ಟಾ ರೂಪಾಂತರದ ಕಪಿಮುಷ್ಟಿಯಲ್ಲಿ ಜನತೆ

ಇಸ್ರೇಲ್​ನಲ್ಲಿ ಲಸಿಕೆ ಪಡೆಯುತ್ತಿರುವ ಜನ.

ಇಸ್ರೇಲ್​ನಲ್ಲಿ ಲಸಿಕೆ ಪಡೆಯುತ್ತಿರುವ ಜನ.

ಇಸ್ರೇಲ್‌ನ ವೈಜ್ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಡೇಟಾ ವಿಜ್ಞಾನಿ ಎರಾನ್ ಸೆಗಲ್ ಹೇಳುವಂತೆ ದೇಶದಲ್ಲಿ ವರ್ಷದ ಆರಂಭದಲ್ಲಿ ಕಂಡುಬಂದ ಹೆಚ್ಚಿನ ಆಸ್ಪತ್ರೆ ದಾಖಲಾತಿ ಪ್ರಖರಣಗಳು ಈ ವರ್ಷ ಕಡಿಮೆಯಾಗಲಿದೆ.

  • Share this:

    Pfizer/BioNTech ಲಸಿಕೆಯು ಕೋವಿಡ್-19 ಲಸಿಕೆಯು ಸೋಂಕುಗಳು ಹಾಗೂ ರೋಗಲಕ್ಷಣದ ಕಾಯಿಲೆ ಅಂದರೆ ಗಂಭೀರ ಅನಾರೋಗ್ಯವನ್ನು ತಡೆಗಟ್ಟುವಲ್ಲಿ ಈ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದ್ದರೂ ಲಸಿಕೆಯ ಪ್ರಭಾವವು ಕ್ಷೀಣಿಸುತ್ತದೆ ಎಂದು ಇಸ್ರೇಲ್ ವರದಿ ಮಾಡಿದೆ. ಲಸಿಕೆಯು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಡೆಲ್ಟಾ ರೂಪಾಂತರದ ಹರಡುವಿಕೆ ಮತ್ತು ಇಸ್ರೇಲ್‌ನಲ್ಲಿ ಸಾಮಾಜಿಕ ಅಂತರ ನಿರ್ಬಂಧಗಳನ್ನು ಕೈಬಿಟ್ಟ ನಂತರವಾಗಿದೆ. ಕೋವಿಡ್ ಪ್ರಕರಣಗಳು ಇಳಿಮುಖವಾದ ನಂತರ ಕೋವಿಡ್ ನಿಯಮಗಳಲ್ಲಿ ಇಸ್ರೇಲ್ ಸಡಿಲಿಕೆಯನ್ನು ಮಾಡಿತ್ತು. ಆದರೆ ಇದೇ ಸಮಯದಲ್ಲಿ ಕೊರೋನಾ ರೂಪಾಂತರ ಡೆಲ್ಟಾ ತನ್ನ ದಾಳಿಯನ್ನು ನಡೆಸಿದ್ದರ ಜೊತೆಗೆ ನಿಯಮಗಳಲ್ಲಿ ಉಂಟಾದ ಸಡಿಲಿಕೆಯು ಕೋವಿಡ್‌ ಅನ್ನು ಕ್ಷಿಪ್ರವಾಗಿ ಹರಡಲು ಕಾರಣವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ವರದಿ ಮಾಡಿದೆ.


    ಜೂನ್ 6 ರಿಂದ ಸೋಂಕು ಹಾಗೂ ರೋಗಲಕ್ಷಣದ ವಿರುದ್ಧ ಲಸಿಕೆಯ ಪರಿಣಾಮವು 64% ಗೆ ಕುಸಿದಿದೆ ಎಂಬುದಾಗಿ ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಅದೇ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು ಕೊರೋನಾ ವೈರಸ್‌ನ ಸೋಂಕಿಗೆ ತೀವ್ರ ತುತ್ತಾಗುವುದನ್ನು ಲಸಿಕೆಯು 93% ದಷ್ಟು ತಡೆದಿದೆ ಎಂಬುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.


    ಸಚಿವಾಲಯವು ಈ ಹಿಂದಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಫೈಜರ್ ಲಸಿಕೆಯ ಎರಡು ಡೋಸ್ ಆಸ್ಪತ್ರೆಗೆ ದಾಖಲಾಗುವುದು, ಸೋಂಕಿಗೆ ತುತ್ತಾಗುವುದು ಮತ್ತು ತೀವ್ರ ಕಾಯಿಲೆಯಿಂದ 95% ದಷ್ಟು ಸುರಕ್ಷತೆಯನ್ನು ಒದಗಿಸಿದೆ. ಫೈಜರ್ ವಕ್ತಾರರು ಇಸ್ರೇಲ್‌ನ ದತ್ತಾಂಶದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು, ಆದರೆ ಲಸಿಕೆಯಿಂದ ಹೊರಹೊಮ್ಮಿದ ಪ್ರತಿಕಾಯಗಳು ಡೆಲ್ಟಾ ಸೇರಿದಂತೆ ಎಲ್ಲಾ ಪರೀಕ್ಷಿತ ರೂಪಾಂತರಗಳನ್ನು ತಟಸ್ಥಗೊಳಿಸಲು ಇನ್ನೂ ಸಮರ್ಥವಾಗಿವೆ ಎಂದು ತೋರಿಸುವ ಇತರ ಸಂಶೋಧನೆಗಳನ್ನು ಉಲ್ಲೇಖಿಸಿ, ಪ್ರತಿಕಾಯಗಳು ಕಡಿಮೆ ಶಕ್ತಿಯನ್ನು ಹೊಂದಿದ್ದರೂ ಸಹ ರೋಗದ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲವು ಎಂಬುದನ್ನು ತಿಳಿಸಿದ್ದಾರೆ.


    ಇಸ್ರೇಲ್‌ನ 9.3 ಮಿಲಿಯನ್ ಜನಸಂಖ್ಯೆಯಲ್ಲಿ 60% ದಷ್ಟು ಜನರು ವ್ಯಾಕ್ಸಿನ್‌ನ ಕನಿಷ್ಠ ಒಂದು ಡೋಸ್‌ ಅನ್ನು ಸ್ವೀಕರಿಸಿದ್ದಾರೆ. ಜನವರಿಗೆ ಹೋಲಿಸಿದಾಗ ದಿನದ ಕೇಸ್‌ನಲ್ಲಿ 10,000 ದಷ್ಟು ಇಳಿಮುಖಗೊಂಡು ಕಳೆದ ತಿಂಗಳು ಒಮದಂಕಿಗೆ ಕುಸಿದಿತ್ತು ಎಂಬುದನ್ನು ಸಮೀಕ್ಷೆಯು ಖಾತ್ರಿಪಡಿಸಿದೆ.


    ಇದನ್ನೂ ಓದಿ: Mekedatu Project| ಮೇಕೆದಾಟು ಯೋಜನೆಯನ್ನು ಕೂಡಲೇ ನಿಲ್ಲಿಸಿ; ಕೇಂದ್ರ ಜಲ ಸಂಪನ್ಮೂಲ ಸಚಿವರ ಬಳಿ ತಮಿಳುನಾಡು ದೂರು!

    ಈ ಇಳಿಮುಖವನ್ನು ಕಂಡುಕೊಂಡ ನಂತರ ಸರಕಾರವು ಕೋವಿಡ್ ನಿಯಮಾವಳಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿತು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಮೊದಲಾದ ನಿಯಮಗಳನ್ನು ಸಲಡಿಗೊಳಿಸಿತು. ಇದೇ ಸಮಯದಲ್ಲಿ ಕೊರೋನಾ ವೈರಸ್‌ನ ರೂಪಾಂತರವಾಗಿರುವ ಡೆಲ್ಟಾದ ಆಳ್ವಿಕೆ ಆರಂಭವಾಗಿ ದೈನಂದಿನ ಪ್ರಕರಣಗಳಲ್ಲಿ ಏರಿಕೆಯಾಯಿತು. ಭಾನುವಾರ ಪ್ರಕರಣಗಳ ಸಂಖ್ಯೆ 343 ಕ್ಕೆ ಏರಿಕೆಯಾಗಿದೆ. ತೀವ್ರ ಅನಾರೋಗ್ಯವು 21 ರಿಂದ 35 ಕ್ಕೆ ಏರಿಕೆಯಾಯಿತು. ಆದರೂ, ಲಸಿಕೆಯಿಂದ ತೀವ್ರ ಅನಾರೋಗ್ಯ ಇಳಿಮುಖವಾಗುತ್ತಿದೆ.


    ಇದನ್ನೂ ಓದಿ: Petrol Price Today | ದಿನನಿತ್ಯ ಏರುತ್ತಲೇ ಇದೆ ತೈಲ ಬೆಲೆ; ದೆಹಲಿ, ಮುಂಬೈ, ಪುಣೆ, ಬೆಂಗಳೂರಿನಲ್ಲಿ ಇಂದಿನ ಬೆಲೆ ಎಷ್ಟು?

    ಇಸ್ರೇಲ್‌ನ ವೈಜ್ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಡೇಟಾ ವಿಜ್ಞಾನಿ ಎರಾನ್ ಸೆಗಲ್ ಹೇಳುವಂತೆ ದೇಶದಲ್ಲಿ ವರ್ಷದ ಆರಂಭದಲ್ಲಿ ಕಂಡುಬಂದ ಹೆಚ್ಚಿನ ಆಸ್ಪತ್ರೆ ದಾಖಲಾತಿ ಪ್ರಖರಣಗಳು ಈ ವರ್ಷ ಕಡಿಮೆಯಾಗಲಿದೆ. ಏಕೆಂದರೆ ಸಮೀಕ್ಷೆ ಪ್ರಕಾರ ಕೋವಿಡ್ ಪ್ರಕರಣಗಳು ಕಡಿಮೆ ಇದೆ. ಜನಜೀವನವನ್ನು ಹಿಂದಿನಂತೆ ಯಾವುದೇ ನಿರ್ಬಂಧಗಳಿಲ್ಲದೆ ನಡೆಸಬಹುದು ಎಂಬುದಾಗಿ ವಿಜ್ಞಾನಿ ದೃಢಪಡಿಸಿದ್ದಾರೆ. ದೇಶದಲ್ಲಿ ಲಸಿಕೆ ನೀಡುವುದು ಮತ್ತು ಹೊರದೇಶದಿಂದ ಸ್ವದೇಶಕ್ಕೆ ಮರಳುತ್ತಿರುವವರ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರವೇ ಕೋವಿಡ್ ನಿಯಮಗಳಲ್ಲಿ ಸಡಿಲಿಕೆ ಮಾಡಬಹುದು ಎಂಬುದಾಗಿ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    top videos
      First published: