ಕೊರೋನಾ ಎಫೆಕ್ಟ್​: ಗುಂಡಿಗಾಗಿ ಗಡಿ ಮೀರಿ ಆನೇಕಲ್​​ಗೆ ದಾಂಗುಡಿಯಿಟ್ಟ ತಮಿಳರು?

ನಮ್ಮ ರಾಜ್ಯದಲ್ಲಿ ನೆಲೆಸಿ ತಮಿಳುನಾಡು ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅಲ್ಲಿಯೇ ವಸತಿ ಸೌಲಭ್ಯ ಕಲ್ಪಿಸುವುದೋ? ಹೀಗೆ ಯಾವುದು ಸೂಕ್ತ ಎಂಬುದನ್ನು ತಿರ್ಮಾನಿಸಬೇಕಿದೆ. ಇಲ್ಲವಾದರೆ ತಮಿಳುನಾಡು ಗಡಿ ಗ್ರಾಮಗಳ ಜನರಿಗೆ ಕೊರೋನಾ ಭೀತಿ ಮಾತ್ರ ತಪ್ಪಿದ್ದಲ್ಲ.

news18-kannada
Updated:May 23, 2020, 3:38 PM IST
ಕೊರೋನಾ ಎಫೆಕ್ಟ್​: ಗುಂಡಿಗಾಗಿ ಗಡಿ ಮೀರಿ ಆನೇಕಲ್​​ಗೆ ದಾಂಗುಡಿಯಿಟ್ಟ ತಮಿಳರು?
ಕೊರೋನಾ ಎಫೆಕ್ಟ್​: ಗುಂಡಿಗಾಗಿ ಗಡಿ ಮೇರಿ ಆನೇಕಲ್​​ಗೆ ದಾಂಗುಡಿ ಇಟ್ರಾ ತಮಿಳರು?
  • Share this:
ಆನೇಕಲ್(ಮೇ.23): ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು. ಪೊಲೀಸರು ಹಗಲಿರುಳು ಗಸ್ತು ಸುತ್ತಿದ್ದರು. ತಮಿಳರು ಅಕ್ರಮವಾಗಿ ರಾಜ್ಯ ಪ್ರವೇಶಿಸುತ್ತಿರುವುದು ಮಾತ್ರ ನಿಂತಿಲ್ಲ. ಪೊಲೀಸರಿಗೆ ಒಂದು ದಾರಿಯಾದರೆ ಕಳ್ಳರಿಗೆ ನೂರು ದಾರಿ, ಅದರಲ್ಲೂ ಕುಡುಕರಿಗೆ ನೂರಾರು ದಾರಿ..

ನಿಜ, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿ ಗ್ರಾಮಗಳಾದ ಅತ್ತಿಬೆಲೆ, ಬಳ್ಳೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ತಮಿಳುನಾಡು ಕಡೆಯಿಂದ ಜನ ರಾಜ್ಯ ಪ್ರವೇಶ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ಬಳಿಕ ತಾಲ್ಲೂಕು ಆಡಳಿತ ಸಹ ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ಸಂಪರ್ಕ ರಸ್ತೆ, ಕಾಲು ದಾರಿ, ಬಂಡಿ ದಾರಿ ಸೇರಿದಂತೆ ಸಣ್ಣ ಪುಟ್ಟ ದಾರಿಗಳನ್ನು ಕಂದಕ ತೆಗೆಯುವ ಮೂಲಕ ದಾರಿಗೆ ಅಡ್ಡಲಾಗಿ ಮರ ಗಿಡ ಪೊದೆಗಳನ್ನು ಅಡ್ಡಗಟ್ಟಿ ಬಂದ್ ಮಾಡಿದ್ದರು. ಪರಿಣಾಮವಾಗಿ ಅಷ್ಟಾಗಿ ಯಾರೂ ಸಹ ಅಕ್ರಮವಾಗಿ ರಾಜ್ಯ ಗಡಿ ದಾಟುತ್ತಿರಲಿಲ್ಲ.

ಲಾಕ್ ಡೌನ್ ನಡುವೆಯು ಯಾವಾಗ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ದೊರೆಯಿತೋ ಅಂದಿನಿಂದ ಗುಂಡುಗಾಗಿ ತಮಿಳರು ರಾಜ್ಯದತ್ತ ದಾಂಗುಡಿಯಿಡುವುದು ಶುರುವಾಗಿದ್ದು, ಇಲ್ಲಿಯವೆರೆಗೆ ನಿಂತಿಲ್ಲ. ಪ್ರಮುಖವಾಗಿ ಆನೇಕಲ್ ತಾಲ್ಲೂಕಿನ ಗಡಿ  ಬಳ್ಳೂರು ಗ್ರಾಮವೊಂದರಲ್ಲಿಯೇ ಬರೋಬ್ಬರಿ 6 ಬಾರ್ ಗಳಿದ್ದಾವೆ. ಬಾರ್ ಗಳ ಪ್ರಮುಖ ಆದಾಯ ಮೂಲ ತಮಿಳುನಾಡಿನ ಸಿಪ್ ಕಾಟ್ ಕೈಗಾರಿಕಾ ಪ್ರದೇಶದ ಕಾರ್ಮಿಕರು. ಸಿಪ್ ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕೈಗಾರಿಕೆಗಳು ಇವೆ. ಜೊತೆಗೆ ಸಾವಿರಾರು ಮಂದಿ ಕಾರ್ಮಿಕರು ಇದ್ದಾರೆ. ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ತುಂಬಾ ಕಠಿಣವಾದ ಕಾನೂನುಗಳ ಜಾರಿಯಲ್ಲಿವೆ. ಹಾಗಾಗಿ ತಮಿಳುನಾಡಿನಲ್ಲಿ ಮದ್ಯ ಮಾರಾಟ ಮತ್ತು ಮದ್ಯಪಾನ ಸುಲಭ ಸಾದ್ಯವಾದುದಲ್ಲ. ಹಾಗಾಗಿ ರಾಜ್ಯಕ್ಕೆ ಹೊಂದಿಕೊಂಡಂತಿರುವ ತಮಿಳುನಾಡು ಗ್ರಾಮಗಳ ಕುಡುಕರು ರಾಜ್ಯದ ಗಡಿ ಬಾರ್ಗಳಿಗೆ ಬರಲು ಕಳ್ಳ ಮಾರ್ಗಗಳ ಮೂಲಕ ಬರ್ತಾರೆ. ಮದ್ಯ ಖರೀದಿಸಿ ವಾಪಾಸ್ ಹೋಗ್ತಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹೊಸ ದಾಖಲೆ: 1939ಕ್ಕೆ ಏರಿದ ಕೊರೋನಾ ಪ್ರಕರಣ

ಇನ್ನೂ ರಾಜ್ಯದ ಗಡಿ ಗ್ರಾಮ ಬಳ್ಳೂರಿಗೆ ಹೊಂದಿಕೊಂಡಂತೆ ತಮಿಳುನಾಡಿನ ಸಿಪ್ ಕಾಟ್ ಕೈಗಾರಿಕಾ ಪ್ರದೇಶ ಇದೆ. ಕೇವಲ ಒಂದು ರಸ್ತೆ ಮಾತ್ರ ಕರ್ನಾಟಕ ಮತ್ತು ತಮಿಳುನಾಡು ಗಡಿಯನ್ನು ಬೇರ್ಪಡಿಸುತ್ತದೆ. ರಸ್ತೆಯ ಆ ಕಡೆ ಬದಿ ತಮಿಳುನಾಡು ಈ ಕಡೆ ಕರ್ನಾಟಕ. ಹಾಗಾಗಿ ಅದೆಷ್ಟೋ ಮಂದಿ ಕಾರ್ಮಿಕರು ಸಿಪ್ ಕಾಟ್ ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿದ್ದರು ಕಡಿಮೆ ಬಾಡಿಗೆಗೆ ಮನೆಗಳು ದೊರೆಯುತ್ತದೆ ಎಂದು ಬಳ್ಳೂರು ಗ್ರಾಮದಲ್ಲಿ ಬಾಡಿಗೆಗೆ ವಾಸವಿದ್ದಾರೆ. ನಿತ್ಯ ಕೆಲಸಕ್ಕೆ ಹೋಗಲು ಹತ್ತಿರದ ಅಡ್ಡದಾರಿಗಳನ್ನು ಬಳಸುತ್ತಾರೆ ಎನ್ನಲಾಗಿದೆ.

ಅಲ್ಲದೆ ಎರಡು ರಾಜ್ಯದ ರೈತರ ಜಮೀನುಗಳ ಸಹ ಅಕ್ಕಪಕ್ಕದಲ್ಲಿ ಇರುವುದರಿಂದ ಓಡಾಟ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಜಿಲ್ಲಾಡಳಿತ ಕಾಟಚಾರಕ್ಕೆ ಕ್ರಮ ಕೈಗೊಳ್ಳುವುದು ಬಿಟ್ಟು ಕೂಲಂಕಷವಾಗಿ ಪರಿಶೀಲನೆ ನಡೆಸಿ, ಗಡಿಯಲ್ಲಿನ ಬಾರ್ಗಳನ್ನು ಬಂದ್ ಮಾಡಬೇಕೋ...?  ನಮ್ಮ ರಾಜ್ಯದಲ್ಲಿ ನೆಲೆಸಿ ತಮಿಳುನಾಡು ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಅಲ್ಲಿಯೇ ವಸತಿ ಸೌಲಭ್ಯ ಕಲ್ಪಿಸುವುದೋ? ಹೀಗೆ ಯಾವುದು ಸೂಕ್ತ ಎಂಬುದನ್ನು ತಿರ್ಮಾನಿಸಬೇಕಿದೆ. ಇಲ್ಲವಾದರೆ ತಮಿಳುನಾಡು ಗಡಿ ಗ್ರಾಮಗಳ ಜನರಿಗೆ ಕೊರೋನಾ ಭೀತಿ ಮಾತ್ರ ತಪ್ಪಿದ್ದಲ್ಲ.

(ವರದಿ: ಆದೂರು ಚಂದ್ರು)
First published: May 23, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading