ಮೈಸೂರು ದಸರಾ ಆಚರಣೆಗಾಗಿ ಕೇಂದ್ರದ ಮಾರ್ಗಸೂಚಿಗೆ ಕಾಯುತ್ತಿದ್ಯಾ ರಾಜ್ಯ‌ ಸರ್ಕಾರ?

ಕೇಂದ್ರದ ಅನ್‌ಲಾಕ್ ಮಾರ್ಗಸೂಚಿಯಲ್ಲಿ ಕೊರೋನಾ ನಿಯಮಗಳು ಮತ್ತಷ್ಟು ಸಡಿಲಗೊಳ್ಳಲಿರುವ ಸಾಧ್ಯತೆ ಇದೆ. ಶಾಲಾ‌ ಕಾಲೇಜು, ಸಭೆ ಸಮಾರಂಭ, ಚಿತ್ರಮಂದಿರ ಹಾಗೂ ಇತರೆ ಜನಸಂದಣಿ ಪ್ರದೇಶಗಳ ಮೇಲೆ ಇರುವ ನಿಷೇಧ ತೆರವಾಗುವ ನಿರೀಕ್ಷೆ ಇದೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ಮೈಸೂರು(ಆ.16): ವಿಶ್ವವಿಖ್ಯಾತ ಮೈಸೂರು ದಸರಾ 2020ರ  ಆಚರಣೆಗಾಗಿ ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿಗೆ ಕಾಯುತ್ತಿದ್ಯಾ ಅನ್ನೋ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕೇಂದ್ರದಿಂದ ಅನ್‌ಲಾಕ್ ಮಾರ್ಗಸೂಚಿಗೆ ಕಾಯುತ್ತಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಈವರೆಗೆ ಚಿತ್ರಮಂದಿರಾ, ಸಭೆ ಸಮಾರಂಭ, ವೇದಿಕೆ ಕಾರ್ಯಕ್ರಮಗಳಿಗೆ ಇನ್ನು ಅನುಮತಿ ನೀಡಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಂದು ಹಂತದ ಅನ್‌ಲಾಕ್ ವ್ಯವಸ್ಥೆ ಜಾರಿ ಮಾಡಲಿದೆ. ಆ ಸಂದರ್ಭದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಅದೆ ನಿರೀಕ್ಷೆಯಲ್ಲಿ ದಸರಾ ಆಚರಣೆ ಬಗ್ಗೆ ತೀರ್ಮಾನ ಮಾಡಲಿರುವ ರಾಜ್ಯ ಸರ್ಕಾರ. ಇದೆ ಕಾರಣಕ್ಕೆ ಇನ್ನು ಸಹ ಹೈಪವರ್ ಕಮಿಟಿ ಮೀಟಿಂಗ್ ನಡೆಸಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ. 

ದಸರಾ ಹೈಪವರ್ ಕಮಿಟಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರು. ವಿಧಾನ ಸೌಧದಲ್ಲಿ ಪ್ರತಿ ವರ್ಷ ದಸರಾದ ಮೂರು ತಿಂಗಳ ಮುನ್ನವೇ ನಡೆಸುವ ಹೈಪವರ್ ಕಮಿಟಿ ಮೀಟಿಂಗ್ ಈ ಬಾರಿ ನಡೆಸಿಲ್ಲ. ದಸರಾಗೆ ಬಾಕಿ ಇರೋದು ಕೇವಲ 70 ದಿನವಷ್ಟೆ. ಅಲ್ಲದೆ ದಸರಾ ಅನುದಾನ, ಕಾರ್ಯಕ್ರಮ ವಿವರ, ಆನೆಗಳ ಆಯ್ಕೆ ಬಗ್ಗೆ ಅಲ್ಲದೇ ಪ್ರಮುಖ ನಿರ್ಧಾರವಾದ ದಸರಾ ಉದ್ಘಾಟಕರ ಆಯ್ಕೆಯೂ ಹೈಪವರ್ ಕಮಿಟಿಯಲ್ಲೆ ಆಗುವುದು. ಈ ಸಭೆಯೂ ಮೈಸೂರು ಜಿಲ್ಲಾಧಿಕಾರಿ, ಮೈಸೂರಿನ ಜನಪ್ರತಿನಿಧಿಗಳ ಸಮ್ಮುಖದಲ್ಲಿ‌ ನಡೆಯಲಿದೆ. ಹೈಪವರ್ ಕಮಿಟಿ ಮೀಟಿಂಗ್ ನಂತರವೇ ದಸರಾದ ರೂಪುರೇಷೆಗಳು ಸಿದ್ದವಾಗಲಿದೆ. ಆದರೆ ಈವರೆಗೆ ಹೈಪವರ್ ಕಮಿಟಿ ಮೀಟಿಂಗ್ ನಡೆಸದೆ ಇರೋದು ಇದೆ ಕಾರಣಕ್ಕೆ ಅನ್ನೋ ಬಗ್ಗೆ ಚರ್ಚೆಗಳು‌ ಆರಂಭವಾಗಿದೆ.

ಕೇಂದ್ರದ ಅನ್‌ಲಾಕ್ ಮಾರ್ಗಸೂಚಿಯಲ್ಲಿ ಕೊರೋನಾ ನಿಯಮಗಳು ಮತ್ತಷ್ಟು ಸಡಿಲಗೊಳ್ಳಲಿರುವ ಸಾಧ್ಯತೆ ಇದೆ. ಶಾಲಾ‌ ಕಾಲೇಜು, ಸಭೆ ಸಮಾರಂಭ, ಚಿತ್ರಮಂದಿರ ಹಾಗೂ ಇತರೆ ಜನಸಂದಣಿ ಪ್ರದೇಶಗಳ ಮೇಲೆ ಇರುವ ನಿಷೇಧ ತೆರವಾಗುವ ನಿರೀಕ್ಷೆ ಇದೆ. ಅಲ್ಲದೆ ವಿದೇಶಗಳಲ್ಲಿ ಕೊರೋನಾ‌ ವ್ಯಾಕ್ಸಿನ್ ಸಹ ಸಿಕ್ಕಿರುವುದರಿಂದ ದಸರಾ ವೇಳೆಗೆ ದೇಶದಲ್ಲು ವ್ಯಾಕ್ಸಿನ್ ಬಳಕೆಗೆ ಸಿಗುವ ವಿಶ್ವಾಸ ಇದೆ. ಇದೆ ಕಾರಣದಿಂದ ದಸರಾ ಆಚರಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗೆ ಕಾಯುತ್ತಿರುವ ರಾಜ್ಯ ಸರ್ಕಾರ ಮೈಸೂರು ಜಿಲ್ಲಾಡಳಿತದಿಂದಲೂ ಸಲಹೆ ಸೂಚನೆ ಪಡೆದಿದೆ. ಇದೆ ಕಾರಣಕ್ಕೆ ದಸರಾ ಬಗ್ಗೆ ವಿಳಂಬವಾಗಿದೆ ಅನ್ನೋ ಮಾಹಿತಿಗಳು ಲಭ್ಯವಾಗುತ್ತಿವೆ.

ಇದನ್ನೂ ಓದಿ: ಗಲಭೆ ಘಟನೆ: ಅಖಂಡ ಮತ್ತವರ ಭೋವಿ ಸಮಾಜದವರಿಂದಲೂ ಸಿಬಿಐ ತನಿಖೆಗೆ ಆಗ್ರಹ; ಶಾಸಕರ ಮನೆಗೆ ತಮಿಳುನಾಡು ಸಂಸದ ಭೇಟಿ
Published by:Ganesh Nachikethu
First published: