ಸಾಮಾಜಿಕ ಅಂತರದ ಕಾನೂನು ಜನರಿಗಷ್ಟೇನಾ?; ಸಚಿವ ಶ್ರೀರಾಮುಲು-ಬೆಂಬಲಿಗರಿಗೆ ಅನ್ವಯವಾಗಲ್ವಾ?

ಜನ ಜಂಗುಳಿಯಿಂದ ಮಾರಣಾಂತಿಕ ಕೊರೋನಾ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್ ಘೋಷಿಸಲಾಗಿದೆ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸರ್ಕಾರವೇ ಮನವಿ ಮಾಡಲಾಗುತ್ತಿದೆ. ಅಲ್ಲದೆ, ರಸ್ತೆಗಿಳಿಯುತ್ತಿರುವ ಜನರ ಮೇಲೆ ಪೊಲೀಸರು ಅಲ್ಲಲ್ಲಿ ಲಾಠಿ ಬೀಸಿದ ಘಟನೆಯೂ ನಡೆಯುತ್ತಿದೆ.

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

 • Share this:
  ಚಿತ್ರದುರ್ಗ (ಮಾರ್ಚ್‌ 26); ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ಕಾನೂನು ಕಟ್ಟುನಿಟ್ಟು ಕೇವಲ ಸಾಮಾನ್ಯ ಜನರಿಗೆ ಮಾತ್ರವೇನಾ? ಸಚಿವರು ಮತ್ತು ಅವರ ಬೆಂಬಲಿಗರಿಗೆ ಇದು ಅನ್ವಯ ಆಗಲ್ವಾ? ಎಂದು ಚಿತ್ರದುರ್ಗದ ಜನ ಕಿಡಿಕಾರುವಂತಾಗಿದೆ.

  ಇಂದು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಬಾಗಿಯಾಗುವುದು ನಿಗದಿಯಾಗಿತ್ತು. ಹೀಗಾಗಿ ಶ್ರೀರಾಮುಲು ಬರುತ್ತಾರೆಂದು ಡಿಸಿ ಕಚೇರಿ ಬಳಿ ರಾಮುಲು ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

  ಜನ ಜಂಗುಳಿಯಿಂದ ಮಾರಣಾಂತಿಕ ಕೊರೋನಾ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್ ಘೋಷಿಸಲಾಗಿದೆ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸರ್ಕಾರವೇ ಮನವಿ ಮಾಡಲಾಗುತ್ತಿದೆ. ಅಲ್ಲದೆ, ರಸ್ತೆಗಿಳಿಯುತ್ತಿರುವ ಜನರ ಮೇಲೆ ಪೊಲೀಸರು ಅಲ್ಲಲ್ಲಿ ಲಾಠಿ ಬೀಸಿದ ಘಟನೆಯೂ ನಡೆಯುತ್ತಿದೆ.

  ಆದರೆ, ಚಿತ್ರದುರ್ಗದಲ್ಲಿ ಸಚಿವರ ಬೆಂಬಲಿಗರು ಮಾತ್ರ ಯಾವುದೇ ಎಗ್ಗಿಲ್ಲದೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಕೇವಲ ಜನರಿಗೆ ಮಾತ್ರವೇನಾ? ಆರೋಗ್ಯ ಸಚಿವರಿಗೆ ಆ ನಿಯಮ ಅನ್ವಯಿಸುವುದಿಲ್ಲವೇ? ಹೀಗೆ ಗುಂಪು ಗುಂಪಾಗಿ ಜಮಾಯಿಸಿದವರ ವಿರುದ್ಧ ಕ್ರಮವೇನು? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಉತ್ತರಿಸಬೇಕಾದ ಉತ್ತರದಾಯಿತ್ವ ಸಚಿವ ಶ್ರೀರಾಮಲು ಅವರಿಗೆ ಇದೆ ಎಂಬುದು ಉಲ್ಲೇಖಾರ್ಹ.

  ಇದನ್ನೂ ಓದಿ: ಲಾಕ್‌ಡೌನ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಕೇಂದ್ರ ಸರಿಯಾದ ದಿಕ್ಕಿನೆಡೆ ಹೆಜ್ಜೆ ಇಟ್ಟಿದೆ; ರಾಹುಲ್ ಗಾಂಧಿ ಪ್ರಶಂಶೆ
  First published: