Fact Check | ಜೂನ್ 15ರಿಂದ ದೇಶಾದ್ಯಂತ ಮತ್ತೆ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ ಸುದ್ದಿ ನಿಜವೇ?

ಕೊರೋನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡು ಸಾಂಕ್ರಾಮಿಕವಾಗಿ ಹರಡಲು ಆರಂಭವಾದಾಗ ಕೇಂದ್ರ ಸರ್ಕಾರ ಮಾರ್ಚ್ 24ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಿತು. ಲಾಕ್​ಡೌನ್​ ಜಾರಿಯಲ್ಲಿದ್ದರೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದಾಗ ಐದು ಹಂತಗಳಲ್ಲಿ ಲಾಕ್​ಡೌನ್​ ವಿಸ್ತರಣೆ ಮಾಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ದೇಶಾದ್ಯಂತ ಅನ್​ಲಾಕ್​-1ರಲ್ಲಿ ಅಂಗಡಿಗಳು, ವ್ಯಾಪಾರ ವಹಿವಾಟು, ಉದ್ದಿಮೆಗಳು ಮರುಆರಂಭಗೊಂಡಿವೆ. ಏತನ್ಮಧ್ಯೆ ಕೇಂದ್ರ ಗೃಹ ಸಚಿವಾಲಯ ಜೂನ್ 15ರಿಂದ ಮತ್ತೆ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳಿಸಲಿದೆ ಎಂಬ ಸುತ್ತೋಲೆಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ದೇಶೀಯ ವಿಮಾನ ಓಡಾಟ, ರೈಲುಗಳು ಸೇರಿದಂತೆ ಮತ್ತೆ ದೇಶಾದ್ಯಂತ ಜೂನ್ 15ರಿಂದ ಕಟ್ಟುನಿಟ್ಟಾಗಿ ಲಾಕ್​ಡೌನ್ ಜಾರಿಗೊಳಿಸುವತ್ತ ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ ಎಂಬ ಹಿಂದಿ ಸುದ್ದಿವಾಹಿನಿ ವರದಿಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ​

  ಹಿಂದಿ ಸುದ್ದಿವಾಹಿನಿಯ ವರದಿಯ ಸ್ನಿಪ್ ಶಾಟ್ ಫೋಟೋ ನಕಲಿ ಮತ್ತು ಸುಳ್ಳುಸುದ್ದಿಯಾಗಿದೆ. ಜೂನ್ 15ರಿಂದ ಮತ್ತೆ ಲಾಕ್​ಡೌನ್ ಜಾರಿಗೊಳಿಸುವ ಸಂಬಂಧ ಸರ್ಕಾರದಿಂದ ಯಾವ ಘೋಷಣೆಯೂ ಅಧಿಕೃತವಾಗಿ ಹೊರಬಂದಿಲ್ಲ. ಇಂತಹ ಸುದ್ದಿಯನ್ನು ಯಾವ ಸುದ್ದಿವಾಹಿನಿಗಳೂ ಸಹ ಪ್ರಸಾರ ಮಾಡಿಲ್ಲ.  ಜೂನ್ 1ರಿಂದ ಅನ್​ಲಾಕ್-1 ಹಂತ ಜಾರಿಯಾಗಿದ್ದು, ಒಟ್ಟು ಮೂರು ಹಂತಗಳಲ್ಲಿ ಲಾಕ್​ಡೌನ್​ಅನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಜೂನ್ 8ರೊಳಗೆ ಮೂರು ಹಂತಗಳು ಮುಕ್ತಾಯಗೊಂಡಿದ್ದು, ಮಾಲ್​ಗಳು, ರೆಸ್ಟೋರೆಂಟ್​ಗಳು ಹಾಗೂ ಧಾರ್ಮಿಕ ಕೇಂದ್ರಗಳು ಸೇರಿದಂತೆ ಎಲ್ಲ ರೀತಿಯ ವಹಿವಾಟುಗಳು ದೇಶವ್ಯಾಪಿ ಆರಂಭಗೊಂಡಿವೆ.  ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದೇಶೀಯ ವಿಮಾನಗಳು ಮತ್ತು ರೈಲುಗಳು ಓಡಾಟ ಆರಂಭಿಸಿವೆ. ಕೇಂದ್ರ ಗೃಹ ಸಚಿವಾಲಯ ಮತ್ತೆ ದೇಶದಲ್ಲಿ ಲಾಕ್​ಡೌನ್​ ಜಾರಿಗೊಳಿಸಲಿದೆ ಎಂಬ ಯಾವುದೇ ಸುದ್ದಿ ಈವರೆಗೂ ಬಂದಿಲ್ಲ.

  ಇದನ್ನು ಓದಿ: ದೆಹಲಿಯಲ್ಲಿ ಹೆಚ್ಚಾದ ಕೊರೋನಾ ಸೋಂಕಿತರ ಸಂಖ್ಯೆ; ಅಮಿತ್ ಶಾ ಭೇಟಿಯಾದ ಸಿಎಂ ಕೇಜ್ರಿವಾಲ್; ಸಹಾಯದ ಭರವಸೆ ನೀಡಿದ ಕೇಂದ್ರ

  ಕೊರೋನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡು ಸಾಂಕ್ರಾಮಿಕವಾಗಿ ಹರಡಲು ಆರಂಭವಾದಾಗ ಕೇಂದ್ರ ಸರ್ಕಾರ ಮಾರ್ಚ್ 24ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಿತು. ಲಾಕ್​ಡೌನ್​ ಜಾರಿಯಲ್ಲಿದ್ದರೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದಾಗ ಐದು ಹಂತಗಳಲ್ಲಿ ಲಾಕ್​ಡೌನ್​ ವಿಸ್ತರಣೆ ಮಾಡಿತ್ತು. ಜೂನ್ 1ರಿಂದ ಕಂಟೈನ್​ಮೆಂಟ್ ವಲಯದ ಹೊರತುಪಡಿಸಿ ಎಲ್ಲೆಡೆ ಲಾಕ್​ಡೌನ್​ ಸಡಿಲಿಕೆ ಮಾಡಲಾಗಿದೆ. ಆದರೆ, ಕಂಟೈನ್​ಮೆಂಟ್ ವಲಯದಲ್ಲಿ ಜೂನ್ 30ರವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ.
  First published: