Coronavirus: ಡೆಲ್ಟಾ ರೂಪಾಂತರ ಮಕ್ಕಳಿಗೆ ಅಪಾಯಕಾರಿನಾ..? ತಜ್ಞರು ಹೇಳುವುದು ಹೀಗೆ..

Coronavirus Effects On Children: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಲ್ಟಾ ರೂಪಾಂತರವನ್ನು ಕನಿಷ್ಠ 180 ದೇಶಗಳಲ್ಲಿ ಗುರುತಿಸಲಾಗಿದ್ದು, ಈ ಪೈಕಿ ಹಲವು ದೇಶಗಳಲ್ಲಿ ಚಿಕ್ಕ ಮಕ್ಕಳು ಹಾಗೂ ಹದಿ ಹರೆಯದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಹೆಚ್ಚುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೊರೊನಾ ವೈರಸ್‌ಗೆ(Coronavirus) ದೇಶದಲ್ಲೇ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ಅದರಲ್ಲೂ ಕೊರೊನಾ ಎರಡನೇ ಅಲೆ, ಡೆಲ್ಟಾ ರೂಪಾಂತರ ವಯಸ್ಕರ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಕೋಟ್ಯಂತರ ಮಂದಿ ಸೋಂಕಿಗೀಡಾಗಿದ್ದರು. ಆದರೀಗ ಹೊಸ ಸೋಂಕಿತರ ಸಂಖ್ಯೆ ದೇಶದಲ್ಲಿ ಕೆಲ ತಿಂಗಳಿಂದ ಕಡಿಮೆಯೇ ಇದೆ. ಆದರೂ, ಕೋವಿಡ್‌ ಮೂರನೇ ಅಲೆಗೂ ಮುನ್ನವೇ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಕೊರೊನಾವೈರಸ್‌ನ ಡೆಲ್ಟಾ(Delta) ರೂಪಾಂತರ ಮಕ್ಕಳಿಗೆ ಕೆಟ್ಟದಾಗಿದೆಯೇ..? ಆತಂಕಕಾರಿಯಾಗಿದೆಯೇ..? ಎಂಬ ಪ್ರಶ್ನೆಗಳು ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ..


ಕೊರೊನಾವೈರಸ್‌ನ ಡೆಲ್ಟಾ ರೂಪಾಂತರ ಮಕ್ಕಳಿಗೆ ಆತಂಕಕಾರಿಯಾಗಿದೆಯೇ..?


ಇಲ್ಲ, ತಜ್ಞರು ಹೇಳುವಂತೆ ಇದು ವೈರಸ್‌ನ ಹಿಂದಿನ ಆವೃತ್ತಿಗಳಿಗಿಂತ ಮಕ್ಕಳು ಮತ್ತು ಹದಿಹರೆಯದವರನ್ನು ರೋಗಿಗಳನ್ನಾಗಿಸುತ್ತದೆ ಎಂಬುದಕ್ಕೆ ಇನ್ನೂ ಬಲವಾದ ಪುರಾವೆಗಳಿಲ್ಲ. ಆದರೂ, ಡೆಲ್ಟಾ ರೂಪಾಂತರ ಮಕ್ಕಳಲ್ಲಿ ಸೋಂಕು ಹೆಚ್ಚಾಗಲು ಕಾರಣ ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.


ಹೆಚ್ಚು ಸುಲಭವಾಗಿ ಹರಡುವ ಡೆಲ್ಟಾದ ಸಾಮರ್ಥ್ಯವು ಮಕ್ಕಳಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ ಮತ್ತು ಶಾಲೆಗಳಲ್ಲಿ ಮಾಸ್ಕ್‌ಗಳು ಹಾಗೂ ಹದಿಹರೆಯ ವಯಸ್ಸಿನವರಿಗಾದರೂ ಲಸಿಕೆಗಳ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಅಮೆರಿಕದ ಫ್ಲೋರಿಡಾದ ಸೆಂಟ್‌ ಪೀಟರ್ಸ್‌ಬರ್ಗ್‌ನ ಸೇಂಟ್‌ ಜಾನ್ಸ್ ಹಾಪ್ಕಿನ್ಸ್ ಎಲ್ಲಾ ಮಕ್ಕಳ ಆಸ್ಪತ್ರೆಯ ಮಕ್ಕಳ ಸಾಂಕ್ರಾಮಿಕ ರೋಗ ವೈದ್ಯ ಡಾ. ಜುವಾನ್ ಡುಮೋಯಿಸ್ ಹೇಳಿದರು.

ಇದನ್ನೂ ಓದಿ: ಇನ್ಮೇಲೆ ವ್ಯಾಕ್ಸಿನ್ ಸರ್ಟಿಫಿಕೇಟ್​ನಲ್ಲಿ ಹುಟ್ಟಿದ ದಿನಾಂಕ ಕಡ್ಡಾಯ, ಎಲ್ಲೆಲ್ಲಿ ಇದರ ಅವಶ್ಯಕತೆ ಇದೆ?

ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಅಂಡ್ ಚಿಲ್ಡ್ರನ್ ಹಾಸ್ಪಿಟಲ್ ಅಸೋಸಿಯೇಶನ್‌ನ ಮಾಹಿತಿಯ ಪ್ರಕಾರ, ಈ ತಿಂಗಳ ಆರಂಭದಲ್ಲಿ ಯುಎಸ್ ಮಕ್ಕಳಲ್ಲಿ ಕಳೆದ ಒಂದು ವಾರದಲ್ಲಿ ಸೋಂಕಿನ ಪ್ರಮಾಣವು 250,000ಕ್ಕಿಂತ ಹೆಚ್ಚಿತ್ತು. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಯುಎಸ್‌ನಲ್ಲಿ 5 ಮಿಲಿಯನ್‌ಗೂ ಅಧಿಕ ಮಕ್ಕಳಲ್ಲಿ ಕೋವಿಡ್‌-19 ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿರುವುದು ಆತಂಕಕಾರಿಯಾದ ವಿಚಾರವೇ ಸರಿ.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಲ್ಟಾ ರೂಪಾಂತರವನ್ನು ಕನಿಷ್ಠ 180 ದೇಶಗಳಲ್ಲಿ ಗುರುತಿಸಲಾಗಿದ್ದು, ಈ ಪೈಕಿ ಹಲವು ದೇಶಗಳಲ್ಲಿ ಚಿಕ್ಕ ಮಕ್ಕಳು ಹಾಗೂ ಹದಿ ಹರೆಯದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಹೆಚ್ಚುತ್ತಿದೆ.


ಯುಎಸ್‌ನಲ್ಲಿ ಕೋವಿಡ್‌-19ಗಾಗಿ ಆಸ್ಪತ್ರೆಗೆ ದಾಖಲಾಗುವ ದರವು ಆಗಸ್ಟ್ ಅಂತ್ಯದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ 100,000 ಮಕ್ಕಳಿಗೆ 2ಕ್ಕಿಂತ ಕಡಿಮೆಯಿತ್ತು. ಇದು ಕಳೆದ ಚಳಿಗಾಲದ ಉತ್ತುಂಗದಂತೆಯೇ ಇತ್ತು ಎಂದು ಅಮೆರಿಕದ ಸಿಡಿಸಿ ಹೇಳಿದೆ. ಈಗಲೂ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದರೂ ತೀವ್ರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ಮಕ್ಕಳ ಪ್ರಮಾಣ ಗಮನಾರ್ಹವಾಗಿ ಬದಲಾಗಿಲ್ಲ.


ಮಕ್ಕಳು ಡೆಲ್ಟಾ ರೂಪಾಂತರದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವಂತೆ ಸಂಖ್ಯೆಗಳು ತೋರುತ್ತದೆಯಾದರೂ, ಹಾಗೆ ಕಾಣುತ್ತಿಲ್ಲ ಎಂದು ತಜ್ಞರು ಹೇಳುತ್ತಾರೆ. ಹೆಚ್ಚಿನ ಸೋಂಕಿತ ಮಕ್ಕಳು ಸೌಮ್ಯ ಸೋಂಕುಗಳನ್ನು ಹೊಂದಿರುತ್ತಾರೆ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಮತ್ತು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ ಎಂದಿದ್ದಾರೆ.


ಇದನ್ನೂ ಓದಿ: ಮಕ್ಕಳ ಶಿಕ್ಷಣದ ಮೇಲೆ ಕೊರೊನಾ ಕರಿ ನೆರಳು- ASER ವರದಿಯಲ್ಲಿ ರಾಜ್ಯದ ಶಿಕ್ಷಣ ಪರಿಸ್ಥಿತಿ ಬಹಿರಂಗ..

COVID-19 ಲಸಿಕೆಗಳು ಡೆಲ್ಟಾ ವಿರುದ್ಧ ರಕ್ಷಣೆ ನೀಡುವುದನ್ನು ಮುಂದುವರಿಸಿದೆ. ಇನ್ನು, 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಅಮೆರಿಕದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅರ್ಹವಾಗಿದ್ದು, ಈ ಪೈಕಿ ಜುಲೈನಲ್ಲಿ ಸಾಪ್ತಾಹಿಕ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಲಸಿಕೆ ಹಾಕಿಸದ ಮಕ್ಕಳಿಗಿಂತ ಅಥವಾ ಹದಿಹರೆಯದವರಿಗಿಂತ 10 ಪಟ್ಟು ಹೆಚ್ಚಾಗಿದೆ ಎಂದು ಸಿಡಿಸಿ ಡೇಟಾ ವರದಿ ನೀಡಿದೆ.


First published: