IRCTC Booking: ಮೇ 12ರಿಂದ ರೈಲು ಸಂಚಾರ ಆರಂಭ: ಇಂದಿನಿಂದ ಆನ್‌ಲೈನ್ ಬುಕಿಂಗ್ ಶುರು

Indian Railways: ರೈಲಿನಿಂದ ಇಳಿದ ಮೇಲೆ ಪ್ರಯಾಣಿಕರಿಗೆ ಸ್ಕ್ರೀನಿಂಗ್​ ಟೆಸ್ಟ್​ ಮಾಡಲಾಗುತ್ತದೆ. ಜತೆಗೆ ಕೇಂದ್ರದ ಆದೇಶದ ಮೇರೆಗೆ ಸಾಮಾಜಿಕ ಅಂತರ ಕಡ್ಡಾಯ ಪಾಲನೇ ಮಾಡಬೇಕಾಗುತ್ತದೆ.

ರೈಲು

ರೈಲು

  • Share this:
    ನವದೆಹಲಿ(ಮೇ.10): ಕೊರೋನಾ ಲಾಕ್​ಡೌನ್​​ ನಡುವೆಯೂ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಇದೇ ತಿಂಗಳು ಮೇ 12ನೇ ತಾರೀಕಿನಿಂದ ವಿಶೇಷ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದೆ. ಲಾಕ್​​ಡೌನ್ ಸಂಕಷ್ಟದಲ್ಲಿರುವ ಜನರಿಗಾಗಿ ಕೇಂದ್ರ ದೆಹಲಿಯಿಂದ 15 ಸ್ಥಳಗಳಿಗೆ ರೈಲು ಸಂಚಾರ ಪ್ರಾರಂಭ ಮಾಡಲಿದೆ. ಕೇಂದ್ರ ಸರ್ಕಾರವೂ ದೆಹಲಿಯಿಂದ ಬೇರೆ ಪ್ರದೇಶಗಳಿಗೆ 15 ವಿಶೇಷ ರೈಲುಗಳ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರು, ಮುಂಬೈ, ಅಹಮದಾಬಾದ್, ತಿರುವನಂತಪುರ, ಚೆನ್ನೈ, , ಅಗರ್ತಾಲಾ, ಪಾಟ್ನಾ, ಭುವನೇಶ್ವರ್, ಕೊಚ್ಚಿ, ಸೇರಿದಂತೆ ಹಲವು ಸ್ಥಳಗಳಿಗೆ ರೈಲು ಸೇವೆ ಲಭ್ಯವಾಗಲಿದೆ. ಪ್ರಯಾಣಿಕರು ಆನ್​​ಲೈನ್ ಮೂಲಕ ಮಾತ್ರ ಟಿಕೆಟ್​ ಬುಕ್​​ ಮಾಡಲು ಅವಕಾಶವಿರುತ್ತದೆ.

    ಇಂದು ಸಂಜೆ 4 ಗಂಟೆಯಿಂದ ಟಿಕೆಟ್​​ ಬುಕ್ಕಿಂಗ್​​ ಶುರುವಾಗಲಿದೆ. ಪ್ರಯಾಣಿಕರು ಆನ್​​ಲೈನ್​​ ಮೂಲಕ ಮಾತ್ರ ಟಿಕೆಟ್​ ಬುಕ್​​ ಮಾಡಬೇಕು. ಕಡ್ಡಯವಾಗಿ ಮಾಸ್ಕ್​ ಧರಿಸಿ ಪ್ರಯಾಣ ಮಾಡಬೇಕು ಎಂದು ಆದೇಶಿಸಲಾಗಿದೆ.

    ಇನ್ನು, ರೈಲಿನಿಂದ ಇಳಿದ ಮೇಲೆ ಪ್ರಯಾಣಿಕರಿಗೆ ಸ್ಕ್ರೀನಿಂಗ್​ ಟೆಸ್ಟ್​ ಮಾಡಲಾಗುತ್ತದೆ. ಜತೆಗೆ ಕೇಂದ್ರದ ಆದೇಶದ ಮೇರೆಗೆ ಸಾಮಾಜಿಕ ಅಂತರ ಕಡ್ಡಾಯ ಪಾಲನೇ ಮಾಡಬೇಕಾಗುತ್ತದೆ.
    First published: