ಪೊಲೀಸ್ ಸಿಬ್ಬಂದಿಗಳ ಜೊತೆಗೆ ಐಪಿಎಸ್ ಅಧಿಕಾರಿಗೂ ಕೊರೋನಾ ಸೋಂಕು!

ಐಪಿಎಸ್ ಅಧಿಕಾರಿ ಬಳಿ ಪ್ರಾಥಮಿಕ ಮಾಹಿತಿ ಪಡೆದು, ಟ್ರಾವೆಲ್ ಹಿಸ್ಟರಿ ಪಡೆಯಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದಿದ್ದ ಅಧಿಕಾರಿಗಳು ಸ್ವತ: ಸ್ವಾಬ್ ಟೆಸ್ಟ್  ಮಾಡಿಸಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ಗಂಟಲು ನೋವಿನ ಸಮಸ್ಯೆ ಹಿನ್ನಲೆ ತಪಾಸಣೆ ಮಾಡಿಸಿದಾಗ ಪಾಸಿಟಿವ್ ಪತ್ತೆಯಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ.26): ಪೊಲೀಸ್ ಇಲಾಖೆಯಲ್ಲಿ ಕೊರೋನಾ ಪಾಸಿಟಿವ್​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.‌ ಈ ನಡುವೆ ಬರೀ ಪೊಲೀಸ್ ಸಿಬ್ಬಂದಿಗಳಲ್ಲದೆ ಐಪಿಎಸ್ ಅಧಿಕಾರಿಗೂ ಪಾಸಿಟಿವ್ ಪತ್ತೆಯಾಗಿದ್ದು, ಮೂರು ದಿನ ಕಳೆದರೂ ಇನ್ನೂ ಸೋಂಕಿನ ಮೂಲ‌ ಅಧಿಕಾರಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಸೋಂಕಿನ ಮೂಲ ಪತ್ತೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಐಎಲ್​​​​​ಐ (ಇನ್ಪುಲೆನ್ಜಾ ಲೈಕ್ ಇನ್ಪೆಕ್ಷನ್ ) ಅಡಿಯಲ್ಲಿ ತನಿಖೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸೋಂಕಿನ ಮೂಲ‌ ಇನ್ನೂ ಪತ್ತೆಯಾಗದ ಹಿನ್ನಲೆ ಐಎಲ್​​​ಎ ಅಡಿಯಲ್ಲಿ ಮೂಲ ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ.

ಐಪಿಎಸ್ ಅಧಿಕಾರಿ ಬಳಿ ಪ್ರಾಥಮಿಕ ಮಾಹಿತಿ ಪಡೆದು, ಟ್ರಾವೆಲ್ ಹಿಸ್ಟರಿ ಪಡೆಯಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದಿದ್ದ ಅಧಿಕಾರಿಗಳು ಸ್ವತ: ಸ್ವಾಬ್ ಟೆಸ್ಟ್  ಮಾಡಿಸಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ಗಂಟಲು ನೋವಿನ ಸಮಸ್ಯೆ ಹಿನ್ನಲೆ ತಪಾಸಣೆ ಮಾಡಿಸಿದಾಗ ಪಾಸಿಟಿವ್ ಪತ್ತೆಯಾಗಿತ್ತು.

ಇನ್ನು ಕೆಎಸ್ಆರ್​ಪಿ ಕ್ವಾಟ್ರಸ್​​​ಗಳಿಗೂ ಸೋಂಕಿತ ಅಧಿಕಾರಿ ಭೇಟಿ ಕೊಟ್ಟಿದ್ದರು.  ಕೆ ಎಸ್​​ ಆರ್​ ಪಿ ಒಂದನೇ ಕಮಾಂಡೆಂಟ್ ಆಗಿರೋ ಐಪಿಎಸ್ ಅಧಿಕಾರಿಯ ಸೋಂಕಿನ ಮೂಲದ ಬಗ್ಗೆ ಆರೋಗ್ಯ ಸಿಬ್ಬಂದಿಗೆ ಗೊಂದಲವಾಗಿದೆ. ಯಾರ ಮೂಲಕ ಅಧಿಕಾರಿಗೆ ಸೋಂಕು ಬಂದಿದೆ ಎಂಬುದು ಗೊಂದಲವಾಗಿದ್ದು, ಸದ್ಯ ಅಧಿಕಾರಿಯ ಪಿಎ ಹಾಗೂ ಕಾರ್ ಡ್ರೈವರ್ ರನ್ನ ಕ್ವಾರಂಟೈನ್ ಮಾಡಕಾಗಿದೆ.

ಯಾವ ಮೂಲದಿಂದ ಸೋಂಕು ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗೇ ಗೊಂದಲವಾಗಿದೆ. ಸದ್ಯ ಬೆಂಗಳೂರಿನಲ್ಲಿ ಓರ್ವ ಕೆಎಸ್ಆರ್​​​ಪಿ ಸಿಬ್ಬಂದಿ ಪಾಸಿಟಿವ್ ಬಂದ‌ ಹಿನ್ನಲೆ‌ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಇದುವರೆಗೂ ಕೆಎಸ್ಆರ್​​​ಪಿ ತುಕಡಿಯಲ್ಲಿ ಹದಿಮೂರು ಕೇಸ್ ಪತ್ತೆಯಾಗಿವೆ.

Flipkart: ಕನ್ನಡ ಭಾಷೆಯಲ್ಲಿ ಫ್ಲಿಪ್​ಕಾರ್ಟ್​; ಇನ್ಮುಂದೆ ವಸ್ತುಗಳ ಖರೀದಿ ಮತ್ತಷ್ಟು ಸುಲಭ

 
First published: