HOME » NEWS » Coronavirus-latest-news » INTERNATIONAL YOGA DAY FREE COVID 19 VACCINATION FOR ADULTS FROM TODAY NEW VACCINE POLICY DETAILS SCT

Free Vaccine: 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಇಂದಿನಿಂದ ಉಚಿತ ಕೊರೋನಾ ಲಸಿಕೆ; ಯೋಗ ದಿನಕ್ಕೆ ಮೋದಿ ಕೊಡುಗೆ

Free Covid-19 Vaccine for Adults: ಇಂದಿನಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

Sushma Chakre | news18-kannada
Updated:June 21, 2021, 9:24 AM IST
Free Vaccine: 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಇಂದಿನಿಂದ ಉಚಿತ ಕೊರೋನಾ ಲಸಿಕೆ; ಯೋಗ ದಿನಕ್ಕೆ ಮೋದಿ ಕೊಡುಗೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜೂನ್ 21): ಅಂತಾರಾಷ್ಟ್ರೀಯ ಯೋಗ ದಿನವಾದ ಇಂದಿನಿಂದ ಕೇಂದ್ರ ಸರ್ಕಾರದ ಭಾರತದಾದ್ಯಂತ ಹೊಸ ಕೊರೋನಾ ಲಸಿಕಾ ನೀತಿಯನ್ನು ಜಾರಿಗೆ ತಂದಿದೆ. ಇಂದಿನಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಕೊರೋನಾ ಲಸಿಕಾ ನೀತಿಯನ್ನೇ (Covid Vaccine Policy) ಬದಲಾಯಿಸಲಾಗಿದ್ದು, ಇನ್ನು ಮುಂದೆ ಕೊರೋನಾ ಲಸಿಕೆ ಪಡೆಯಲು ಕೋವಿನ್ ಆ್ಯಪ್​ನಲ್ಲಿ (CoWin App) ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಕಡ್ಡಾಯವೇನಲ್ಲ ಎಂದು ಕೂಡ ಸರ್ಕಾರ ತಿಳಿಸಿದೆ.

ಇಂದಿನಿಂದ ಭಾರತದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ (Free Covid-19 Vaccine) ನೀಡಲಾಗುತ್ತದೆ. ಈ ಮೂಲಕ ರಾಜ್ಯ ಸರ್ಕಾರಗಳ ಮೇಲಿದ್ದ ಲಸಿಕೆಯ ಖರ್ಚಿನ ಹೊರೆಯನ್ನು ಕೇಂದ್ರ ಸರ್ಕಾರ ಇಳಿಸಿದೆ. ಇಂದಿನಿಂದ ಯಾವ ರಾಜ್ಯ ಸರ್ಕಾರವೂ ಕೊರೋನಾ ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಮೊದಲು 45 ವರ್ಷ ಮೇಲ್ಪಟ್ಟವರು ಉಚಿತ ಲಸಿಕೆಗಳನ್ನು ಪಡೆಯುತ್ತಿದ್ದರು. ಇನ್ನು 18 ವರ್ಷ ಮೇಲ್ಪಟ್ಟವರಿಗೂ ಅದು ಅನ್ವಯವಾಗಲಿದೆ.




ಹಾಗಿದ್ದರೆ, ನೂತನ ಕೊರೋನಾ ಲಸಿಕಾ ನೀತಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ... ಮೇ 1ರಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೊರೋನಾ ಲಸಿಕಾ ನೀತಿಯ ಅನುಸಾರ ಶೇ. 50ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿ ನೀಡುತ್ತಿತ್ತು. ಈ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರಿಗೆ, ಹೆಲ್ತ್​ ಕೇರ್, ಫ್ರಂಟ್​ಲೈನ್ ವರ್ಕರ್​ಗಳಿಗೆ ನೀಡಲಾಗುತ್ತಿತ್ತು. ಈ ವಲಯದವರು ಉಚಿತವಾಗಿ ಕೊರೋನಾ ಲಸಿಕೆ ಪಡೆಯಬಹುದಾಗಿತ್ತು. ಹಾಗೇ, ಉಳಿದ ಶೇ.50ರಷ್ಟು ಲಸಿಕೆಗಳಲ್ಲಿ ಶೇ. 25ರಷ್ಟು ಲಸಿಕೆಗಳನ್ನು ಉತ್ಪಾದನಾ ಸಂಸ್ಥೆಗಳು ನೇರವಾಗಿ ರಾಜ್ಯ ಸರ್ಕಾರಗಳಿಗೆ ಹಾಗೂ ಇನ್ನುಳಿದ ಶೇ. 25ರಷ್ಟು ಲಸಿಕೆಗಳನ್ನು ಖಾಸಗಿಯವರಿಗೆ ನೀಡಬಹುದಾಗಿತ್ತು.ಇದನ್ನೂ ಓದಿ: International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ

ಆದರೆ, ಹೊಸ ಲಸಿಕಾ ನೀತಿಯ ಪ್ರಕಾರ ಕೇಂದ್ರ ಸರ್ಕಾರವೇ ಇನ್ನುಮುಂದೆ ರಾಜ್ಯ ಸರ್ಕಾರಗಳಿಗೆ ಕೊರೋನಾ ಲಸಿಕೆಗಳನ್ನು ಪೂರೈಕೆ ಮಾಡಲಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲಿನ ಲಸಿಕಾ ವೆಚ್ಚದ ಹೊರೆ ಇಳಿದಂತಾಗಿದೆ. ಜೊತೆಗೆ, ಶೇ. 25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಪೂರೈಕೆ ಮಾಡುತ್ತದೆ. ಆ ಆಸ್ಪತ್ರೆಗಳು ನಿಗದಿತ ಹಣಕ್ಕಿಂತ ಹೆಚ್ಚು ದರವನ್ನು ಪಡೆಯುವಂತಿಲ್ಲ.



ಇಂದಿನಿಂದ (ಜೂನ್ 21) 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಕೊರೋನಾ ಲಸಿಕೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ರಾಜ್ಯ ಸರ್ಕಾರಗಳು ಇನ್ನು ಲಸಿಕೆಗಾಗಿ ಖರ್ಚು ಮಾಡಬೇಕಾಗಿಲ್ಲ. ಈ ಲಸಿಕಾ ಯೋಜನೆ ದೀಪಾವಳಿಯವರೆಗೂ ಮುಂದುವರೆಯಲಿದೆ. ಅಷ್ಟರೊಳಗೆ ದೇಶದಲ್ಲಿನ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಗಳನ್ನು ಹಾಕಲಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಲಸಿಕಾ ನೀತಿಯ ಪ್ರಕಾರ, ಭಾರತದ ಶೇ. 75ರಷ್ಟು ಜನರ ಕೊರೋನಾ ಲಸಿಕೆಗಳ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. ಲಸಿಕೆ ಉತ್ಪಾದನಾ ಸಂಸ್ಥೆಗಳು ಉತ್ಪಾದಿಸುವ ಶೇ. 75ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿಸಿ ಅದನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಲಿದೆ.

ಇದನ್ನೂ ಓದಿ: Karnataka Weather Today: ಮಲೆನಾಡು, ಕರಾವಳಿಯಲ್ಲಿ ಇನ್ನೆರಡು ದಿನ ಮಳೆಯ ಆರ್ಭಟ; ಬೆಂಗಳೂರಿನ ಹವಾಮಾನ ಹೀಗಿದೆ

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗಳನ್ನು ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗೆಂದು ಖಾಸಗಿ ಆಸ್ಪತ್ರೆಗಳಿಗೂ ಶೇ. 25ರಷ್ಟು ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗೆ 150 ರೂ.ಗಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಇದರಿಂದ ಎಲ್ಲ ವರ್ಗದವರಿಗೂ ಕೈಗೆಟುಕುವ ದರದಲ್ಲಿ ಲಸಿಕೆ ಸಿಗಲಿದೆ.

7 ಕಂಪನಿಗಳಿಂದ ಲಸಿಕೆ ತಯಾರಿಕೆ:
ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ. ಈಗ ದೇಶದಲ್ಲಿ ಏಳು ಕಂಪನಿ ವಿಭಿನ್ನ ಪ್ರಕಾರದ ಲಸಿಕೆ ತಯಾರಿಸುತ್ತಿವೆ. 3 ಲಸಿಕೆ ಅಡ್ವಾನ್ಸ್ ಹಂತದಲ್ಲಿ ಪ್ರಯೋಗ ನಡೆಯುತ್ತಿದೆ. ನಮ್ಮ ದೇಶದ ಜನರಿಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಬೇರೆ ದೇಶಗಳಿಂದಲೂ ಖರೀದಿಸಲಾಗುತ್ತಿದೆ. ಈಗಾಗಲೇ ಕೊರೋನಾ ಲಸಿಕೆ ಉತ್ಪಾದನೆ ಶೇ. 90ರಷ್ಟು ಹೆಚ್ಚಾಗಿದೆ. ಶೀಘ್ರದಲ್ಲೇ ಇನ್ನೆರಡು ಲಸಿಕೆಗಳು ಸಿಗಲಿವೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಸಿದ್ಧತೆಗಳು ನಡೆಯುತ್ತಿವೆ. ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದ್ದು, ಇದನ್ನು ಮೂಗಿನ ಮೂಲಕ ಸ್ಪ್ರೇ ಮಾಡಲಾಗುತ್ತದೆ.

ಆನ್​ಲೈನ್ ರಿಜಿಸ್ಟ್ರೇಷನ್ ಕಡ್ಡಾಯವಲ್ಲ:
ಇದುವರೆಗೂ ಕೊರೋನಾ ಲಸಿಕೆ ಪಡೆಯಲು ಕೋವಿನ್ (CoWin)  ಆ್ಯಪ್​ನಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಲೇಬೇಕಾಗಿತ್ತು. ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರು ಎಲ್ಲರೂ ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿ ಕೊರೋನಾ ಲಸಿಕೆ ಪಡೆಯಬಹುದು. ಇದಕ್ಕೆ ಆನ್​ಲೈನ್ ಬುಕಿಂಗ್ ಅಥವಾ ಅಪಾಯಿಂಟ್​ಮೆಂಟ್ ಬೇಕೆಂಬುದು ಕಡ್ಡಾಯವಲ್ಲ.
Youtube Video

18 ಅಥವಾ 18 ವರ್ಷ ಮೇಲ್ಪಟ್ಟವರೆಲ್ಲರೂ ತಮ್ಮ ಹತ್ತಿರದ ಕೊರೋನಾ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬಹುದು. ಆನ್​ಲೈನ್ ರಿಜಿಸ್ಟರ್ ಮಾಡಿಸಲೇಬೇಕೆಂಬುದು ಕಡ್ಡಾಯವೇನಿಲ್ಲ. ಲಸಿಕಾ ಕೇಂದ್ರದಲ್ಲಿಯೇ ತಮ್ಮ ಹೆಸರು ಬರೆಸಿ, ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೋವಿನ್ ಆ್ಯಪ್ ಕೊರೋನಾ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿಸಿಕೊಳ್ಳಲು ಒಂದು ಮಾರ್ಗವಷ್ಟೆ. ಅದರಲ್ಲಿ ರಿಜಿಸ್ಟರ್ ಮಾಡಿಸಿದರೆ ಮಾತ್ರ ಲಸಿಕೆ ಸಿಗುತ್ತದೆ ಎಂಬುದು ಸತ್ಯವಲ್ಲ. ಕೋವಿನ್ ಮೂಲಕವೂ ಮುಂಚಿತವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ನಿಗದಿ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Published by: Sushma Chakre
First published: June 21, 2021, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories