Yoga Day 2021: ಕೋವಿಡ್‌ನಿಂದ ಚೇತರಿಸಿಕೊಳ್ಳಲು ಸರಳವಾದ ವ್ಯಾಯಾಮಗಳು ಇಲ್ಲಿವೆ...

ದೇಹದ ಕೊಬ್ಬು ಕರಗಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಉನ್ನತೀಕರಣಕ್ಕೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮಾನಸಿಕ ಸ್ವಾಸ್ಥ್ಯವನ್ನು ಉದ್ದೀಪನಗೊಳಿಸಲು ಬೇರೆ ಬೇರೆ ರೀತಿಯ ವ್ಯಾಯಾಮಗಳಿವೆ.

ದೇಹದ ಕೊಬ್ಬು ಕರಗಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಉನ್ನತೀಕರಣಕ್ಕೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮಾನಸಿಕ ಸ್ವಾಸ್ಥ್ಯವನ್ನು ಉದ್ದೀಪನಗೊಳಿಸಲು ಬೇರೆ ಬೇರೆ ರೀತಿಯ ವ್ಯಾಯಾಮಗಳಿವೆ.

ದೇಹದ ಕೊಬ್ಬು ಕರಗಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಉನ್ನತೀಕರಣಕ್ಕೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮಾನಸಿಕ ಸ್ವಾಸ್ಥ್ಯವನ್ನು ಉದ್ದೀಪನಗೊಳಿಸಲು ಬೇರೆ ಬೇರೆ ರೀತಿಯ ವ್ಯಾಯಾಮಗಳಿವೆ.

  • Share this:

ವ್ಯಾಯಾಮವು ನಮ್ಮ ದೇಹವನ್ನು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ದೈನಂದಿನ ಚಟುವಟಿಕೆಗೂ ಸಹಕಾರಿಯಾಗಿದೆ. ನಿಮ್ಮ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯಕ್ಕೂ ವ್ಯಾಯಾಮ ಇತ್ತೀಚಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಪುನಶ್ಚೇತನಗೊಳಿಸಲು ವ್ಯಾಯಾಮವು ಸಹಕಾರಿಯಾಗಿದೆ. ಸಂಶೋಧನೆಗಳ ಪ್ರಕಾರ ದಿನನಿತ್ಯ ಅರ್ಧಗಂಟೆ ವ್ಯಾಯಾಮ ಮಾಡುವುದು ನಿಮ್ಮ ಸಂಪೂರ್ಣ ಸ್ವಾಸ್ಥ್ಯಕ್ಕೆ ಕಾರಣವಾಗಿದೆ ಎಂದಾಗಿದೆ. ಹೀಗೆ ನಾವು ಪಟ್ಟಿ ಮಾಡುತ್ತಾ ಹೋದರೆ ವ್ಯಾಯಾಮದ ಮಹತ್ವವವನ್ನು ತಿಳಿಸಲು ಸಮಯವೇ ಸಾಕಾಗದೇ ಹೋಗಬಹುದು. ಯೋಗ ಮತ್ತು ವ್ಯಾಯಾಮದ ಮಹತ್ವವವನ್ನು ತಿಳಿಸಲು ಜೂನ್ 21ರಂದು ಭಾರತದಾದ್ಯಂತ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ದೇಹದ ಕೊಬ್ಬು ಕರಗಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಉನ್ನತೀಕರಣಕ್ಕೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮಾನಸಿಕ ಸ್ವಾಸ್ಥ್ಯವನ್ನು ಉದ್ದೀಪನಗೊಳಿಸಲು ಹೀಗೆ ಬೇರೆ ಬೇರೆ ರೀತಿಯ ವ್ಯಾಯಾಮಗಳಿವೆ.


ಇಂದು ಪ್ರಪಂಚವೇ ಕೋವಿಡ್-19 ಎಂಬ ಮಾರಕ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ನಲುಗಿ ಹೋಗಿದೆ. ಇನ್ನೂ ಕೂಡ ಚೇತರಿಕೆ ನಿಧಾನವಾಗಿ ನಡೆಯುತ್ತಿದೆ. ಲಸಿಕೆಯನ್ನು ನೀಡುತ್ತಿದ್ದರೂ ಇನ್ನೂ ಕೆಲವೆಡೆ ಲಸಿಕೆಗಳ ಲಭ್ಯತೆ ನಿಧಾನವಾಗಿ ನಡೆಯುತ್ತಿದೆ. ಇಂತಿಪ್ಪ ಸಮಯದಲ್ಲಿ ನಮ್ಮ ಆರೋಗ್ಯ ಸಂರಕ್ಷಣೆಯನ್ನು ನಾವು ಮಾಡಬೇಕಾಗುತ್ತದೆ. ಕೋವಿಡ್‌ನಿಂದ ಗುಣಮುಖರಾದವರು ಕೂಡ ನಿಯಮಿತ ವ್ಯಾಯಾಮವನ್ನು ನಡೆಸಬೇಕು. ನೀವು ಯೋಗವನ್ನು ಅಭ್ಯಸಿಸುವ ಮುನ್ನ ವೈದ್ಯರ ಇಲ್ಲವೇ ಯೋಗ ಪರಿಣಿತರ ಸಲಹೆಯನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ. ಹಾಗಿದ್ದರೆ ಕೋವಿಡ್‌ನಿಂದ ನಷ್ಟಗೊಂಡ ಶಕ್ತಿಯನ್ನು ಮರುಪಡೆದುಕೊಳ್ಳಲು ಮಾಡಬೇಕಾದ ಕೆಲವೊಂದು ಸರಳ ಆಸನಗಳನ್ನು ನೀಡುತ್ತಿದ್ದು ಇದನ್ನು ಕುರಿತು ಮಾಹಿತಿ ಅರಿತುಕೊಳ್ಳೋಣ.


ಇದನ್ನೂ ಓದಿ: International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ

ದಂಡಾಸನ


ಪ್ರಯೋಜನ: ಇದು ದೇಹದ ಆಂತರಿಕ ಅಂಗಗಳಿಗೆ ವಿಶೇಷವಾಗಿ ಅಂಗಗಳ ಜೀರ್ಣಾಂಗ ವ್ಯೂಹವನ್ನು ಬಲಪಡಿಸುತ್ತದೆ. ಇದು ಸ್ನಾಯುಗಳಿಗೆ ಬಲವನ್ನು ನೀಡಿ ಶಕ್ತಿಯನ್ನು ಹೆಚ್ಚಿಸುತ್ತದೆ.


ಮುನ್ನೆಚ್ಚರಿಕೆಗಳು: ನೀವು ಕೋಡ್‌ನಿಂದ ಗುಣಮುಖರಾಗಿ ಒಂದು ವಾರದ ಬಳಿಕ ಈ ವ್ಯಾಯಾಮವನ್ನು ಮಾಡಬಹುದಾಗಿದೆ. ನಿಮ್ಮ ಬೆನ್ನು ಮತ್ತು ಮಣಿಗಂಟಿಗೆ ಗಾಯವುಂಟಾಗದಂತೆ ಈ ವ್ಯಾಯಾಮವನ್ನು ಅಭ್ಯಾಸ ಮಾಡಿ.


ಮಾಡುವುದು ಹೇಗೆ:


90 ಡಿಗ್ರಿ ಭಂಗಿಯಲ್ಲಿ ಕುಳಿತುಕೊಳ್ಳಿ


ಕೈಗಳನ್ನು ದೇಹದ ಸಮೀಪ ಇರಿಸಿಕೊಳ್ಳಿ ಮತ್ತು ಅಂಗೈ ನೆಲದ ಮೇಲಿರಲಿ


ತೊಡೆಯ ಸ್ನಾಯುಗಳನ್ನು ಬಲಗೊಳಿಸಿ ಮತ್ತು ಪಾದಗಳನ್ನು ನೇರವಾಗಿಸಿ


ಉಸಿರನ್ನು ಒಳಗೆ ಮತ್ತು ಹೊರಗೆ ನಿಧಾನವಾಗಿ ತೆಗೆದುಕೊಳ್ಳಿ


5 ದೀರ್ಘ ಉಸಿರಾಟದವರೆಗೆ ಈ ಭಂಗಿಯಲ್ಲಿರಿ.


ಅಧೋಮುಖ ಶ್ವಾನಾಸನ


ಇದು ದೇಹಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿಯನ್ನು ಒದಗಿಸುತ್ತದೆ. ಇದು ಮೆದುಳಿಗೆ ರಕ್ತಪ್ರಸರಣವನ್ನು ಮಾಡುತ್ತದೆ ಹಾಗೂ ಆಯಾಸ ಮತ್ತು ಸುಸ್ತನ್ನು ನಿವಾರಿಸುತ್ತದೆ


ಮುನ್ನೆಚ್ಚರಿಕೆ: ದೇಹವು ನಡುಗುತ್ತಿದ್ದರೆ, ದೇಹವು ಹಿಂದಿನ ಭಂಗಿಗೆ ಬರುವವರೆಗೆ ಕಾಯಿರಿ ಮತ್ತು ದೇಹವು ಬಲಗೊಂಡಿದ್ದರೆ ಮಾತ್ರವೇ ಈ ಆಸನವನ್ನು ಮುಂದುವರಿಸಿ


ಮಾಡುವುದು ಹೇಗೆ:


ಕಾಲು ಮತ್ತು ಕೈಗಳನ್ನು ನೆಲದ ಮೇಲಿರಿಸಿ


ಉಸಿರಾಡುತ್ತಾ ನಿಮ್ಮ ಹಿಂಭಾಗವನ್ನು ಮೇಲಕ್ಕೆ ಎತ್ತರಿಸಿ ಮತ್ತು ಪಾದ ಹಾಗೂ ಮುಂಗೈಯನ್ನು ನೇರವಾಗಿಸಿ


ಕೈಗಳು ಮತ್ತು ಕಾಲುಗಳು ಪರಸ್ಪರ ಸಮನಾಂತರವಾಗಿರಬೇಕು


ದೀರ್ಘ ಉಸಿರನ್ನು ಒಳಕ್ಕೆ ತೆಗೆದುಕೊಂಡು ನಂತರ ಉಸಿರನ್ನು ಹೊರಗೆ ಬಿಡಿ


ಒಂದು ನಿಮಿಷ ಈ ಭಂಗಿಯಲ್ಲಿರಿ.


ಇದನ್ನೂ ಓದಿ: Yoga Day 2021: ಜಲ ಯೋಗದ ಮೂಲಕ ಆರೋಗ್ಯದ ಸಂದೇಶ ಸಾರುತ್ತಿರುವ ಕೊಪ್ಪಳ, ಕಲಬುರ್ಗಿಯ ಯೋಗಪಟುಗಳು

ವಫೆಯ ಉಸಿರಾಟ


ಇದು ಡಯಾಫ್ರಾಮ್ ಅನ್ನು ಬಳಸಿಕೊಂಡು ಶ್ವಾಸಕೋಶದ ಕೆಲಸವನ್ನು ಸ್ಟೋರ್ ಮಾಡುತ್ತದೆ ಮತ್ತು ನರಮಂಡಲವನ್ನು ವಿಶ್ರಾಂತಿ ಮತ್ತು ಪುನಃಸ್ಥಾಪಿಸಲು ಪ್ರೋತ್ಸಾಹಿಸುತ್ತದೆ.


ಮುನ್ನೆಚ್ಚರಿಕೆಗಳು: ಕೋವಿಡ್‌ನಿಂದ ಚೇತರಿಕೆ ಹೊಂದುತ್ತಿರುವಂತೆಯೇ ವ್ಯಾಯಾಮವನ್ನು ಆರಂಭಿಸಬೇಡಿ ಮತ್ತು ಉಸಿರಾಟದ ಪರಿಚಲನೆ ಇಲ್ಲದೆ ವೈಯಕ್ತಿಕ ಸಾಮರ್ಥ್ಯದ ಮೇಲೆ ಈ ವ್ಯಾಯಾಮವನ್ನು ಮಾಡಿ.


ನೆಲದ ಮೇಲೆ ಮಲಗಿರುವಾಗ ಆಳವಾಗಿ ಉಸಿರಾಡಿ: ನೆಲದ ಮೇಲೆ ಮಲಗಿ, ಮಂಡಿ ಬಗ್ಗಿಸಿ, ಹೊಟ್ಟೆಯ ಮೇಲೆ ಕೈಗಳನ್ನು ಇರಿಸಿ ಮತ್ತು ತುಟಿಗಳನ್ನು ಮುಚ್ಚಿ


ಹೊಟ್ಟೆಯ ಮೇಲೆ ಮಲಗಿ ದೀರ್ಘ ಉಸಿರಾಡಿ: ನಿಮ್ಮ ಹೊಟ್ಟೆಯ ಮೇಲೆ ಮಲಗಿ, ನಿಮ್ಮ ಮುಖದ ಕೆಳಗೆ ನಿಮ್ಮ ಕೈಗಳನ್ನು ಇರಿಸಿ ಮತ್ತು ತುಟಿಗಳನ್ನು ಮುಚ್ಚಿ


ಕುಳಿತಿರುವಾಗ ದೀರ್ಘ ಉಸಿರಾಟ: ಹಾಸಿಗೆಯ ತುದಿಯಲ್ಲಿ ಅಥವಾ ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ ಹೊಟ್ಟೆಯ ಬದಿಯಲ್ಲಿ ಕೈಗಳನ್ನು ಇರಿಸಿ ಮತ್ತು ತುಟಿಗಳನ್ನು ಮುಚ್ಚಿ


ನಿಲ್ಲುವಾಗಿ ಆಳವಾದ ಉಸಿರಾಟ: ನೇರವಾಗಿ ನಿಲ್ಲಿ ಹೊಟ್ಟೆಯ ಬದಿಯಲ್ಲಿ ಕೈಗಳನ್ನು ಇರಿಸಿ ತುಟಿಗಳನ್ನು ಮುಚ್ಚಿ.
ಸೂಚನೆ: ಈ ವ್ಯಾಯಾಮಗಳನ್ನು ನೀವು ಕೋವಿಡ್‌ನಿಂದ ಪೂರ್ಣ ಚೇತರಿಕೆಯನ್ನು ಪಡೆದುಕೊಂಡು ಅಭ್ಯಾಸ ಮಾಡಲು ಪ್ರಾರಂಭಿಸಿ. ಮೈಕೈ ನೋವು, ಉಸಿರಾಟ ಸಮಸ್ಯೆಗಳಿದ್ದಲ್ಲಿ ಯಾವುದೇ ವ್ಯಾಯಾಮಗಳನ್ನು ಮಾಡದಿರಿ. ಆದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿ.


Published by:Sushma Chakre
First published: