ಇಂದು ಅಂತರಾಷ್ಟ್ರೀಯ ಲೆಫ್ಟ್ ಹ್ಯಾಂಡರ್ಸ್ ಡೇ. ವಿಶ್ವದ ಖ್ಯಾತ ನಾಯಕರು, ಸಿನಿಮಾ ನಟ-ನಟಿಯರು ಲೆಫ್ಟ್ ಹ್ಯಾಂಡೆಡ್ ಆಗಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಆರ್ಟಿಕಲ್ ಪ್ರಕಾರ, ಜಗತ್ತಿನ ಶೇ.10 ರಷ್ಟು ಜನರು ಲೆಫ್ಟ್ ಹ್ಯಾಂಡೆಡ್ ಆಗಿರುತ್ತಾರೆ ಎಂದು ತಿಳಿದು ಬಂದಿದೆ.
ಪ್ರತೀ ವರ್ಷ ಆಗಸ್ಟ್ 13ರ ವಿಶೇಷ ದಿನವನ್ನು ವಿಶ್ವ ಲೆಫ್ಟ್ ಹ್ಯಾಂಡರ್ಸ್ ಡೇ ಎಂದು ಆಚರಿಸಲಾಗುತ್ತದೆ.
ಆಗಸ್ಟ್ 13ನ್ನು ಲೆಫ್ಟ್ ಹ್ಯಾಂಡರ್ಸ್ಗಳಿಗೇ ಮೀಸಲಾಗಿ ಇರಿಸಲಾಗಿದೆ. ಮೊದಲ ಬಾರಿಗೆ 1976ರಲ್ಲಿ ಡೀನ್ ಆರ್.ಕ್ಯಾಂಪ್ಬೆಲ್ ಅವರು ವಿಶ್ವ ಲೆಫ್ಟ್ ಹ್ಯಾಂಡರ್ಸ್ ಡೇ ಆಚರಣೆಯನ್ನು ಪ್ರಾರಂಭ ಮಾಡಿದರು. ಅಂದಿನಿಂದ ವಿಶ್ವ ಲೆಫ್ಟ್ ಹ್ಯಾಂಡರ್ಸ್ ಡೇಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
Coronavirus India Updates: ದೇಶದಲ್ಲಿ ನಿಲ್ಲದ ಕೊರೋನಾ ಉಪಟಳ; ಬುಧವಾರ 66,999 ಪ್ರಕರಣಗಳು ಪತ್ತೆ
ಈ ಲೆಫ್ಟ್ ಹ್ಯಾಂಡರ್ಸ್ ಸಾಮಾನ್ಯವಾಗಿ ಎಲ್ಲಾ ಕೆಲಸಗಳಿಗೂ ಹೆಚ್ಚಾಗಿ ಎಡಗೈ ಬಳಸುತ್ತಾರೆ. ಲೆಫ್ಟ್ ಹ್ಯಾಂಡೆಡ್ ಬಗೆಗಿನ ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಲೆಫ್ಟ್ ಹ್ಯಾಂಡರ್ಸ್ ದಿನವನ್ನು ಆಚರಿಸಲಾಗುತ್ತದೆ.
ಬರಾಕ್ ಒಬಾಮ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಬ್ರಿಯಾನ್ ಲಾರಾ, ಚಿತ್ರನಟರಾದ ಅಮಿತಾಬ್, ಅಭಿಷೇಕ್ ಬಚ್ಚನ್, ಕನ್ನಡದ ವಿಷ್ಣುವರ್ಧನ್, ಸಾಫ್ಟ್ವೇರ್ ದಿಗ್ಗಜ ಬಿಲ್ ಗೆಟ್ಸ್, ವಿಜ್ಞಾನಿಗಳಾದ ಐಸಾಕ್ ನ್ಯೂಟನ್, ಮೇರಿಕ್ಯೂರಿ, ಸುಂದರಿ ಮರ್ಲಿನ್ ಮನ್ರೋ, ತತ್ವಜ್ಞಾನಿ ಅರಿಸ್ಟಾಟಲ್, ನೆಲ್ಸನ್ ಮಂಡೆಲಾ, ಹೀಗೆ ಎಡಚ ಸೆಲೆಬ್ರಿಟಿಗಳ, ಪ್ರಸಿದ್ಧ ವ್ಯಕ್ತಿಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ.
ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಎಡಗೈ ಕ್ರಿಕೆಟಿಗರು ಅಮೋಘ ಪ್ರದರ್ಶನದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದರಲ್ಲೂ ಭಾರತೀಯ ಕ್ರಿಕೆಟ್ ಲೋಕಕ್ಕೆ ಎಡಗೈ ದಾಂಡಿಗರ ಕೊಡುಗೆ ಕೂಡ ಅಪಾರವಾಗಿದೆ.
ವಿಶ್ವದ ಪ್ರಸಿದ್ಧ ಲೆಫ್ಟ್ ಹ್ಯಾಂಡರ್ಸ್ಗಳು
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ
ಖ್ಯಾತ ಉದ್ಯಮಿ ಬಿಲ್ ಗೇಟ್ಸ್
ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್
ಲೇಡಿ ಗಾಗಾ
ಜೂಲಿಯಾ ರಾಬರ್ಟ್ಸ್
ಜ್ಯೂಡಿ ಗಾರ್ಲ್ಯಾಂಡ್
ವೂಪಿ ಗೋಲ್ಡ್ ಬರ್ಗ್
ಆರ್ಫ್ ವಿನ್ಫ್ರೈ
ಪೌಲ್ ಮ್ಯಾಕ್ಕಾರ್ಟನಿ
ಮೇರಿ ಕ್ಯೂರಿ
ಆಲ್ಬರ್ಟ್ ಐನ್ಸ್ಟೀನ್
ಹೆಲೆನ್ ಕೆಲೆರ್
ಲಿಯೋನಾರ್ಡೋ ಡಾವಿಂಚಿ
ಅರಿಸ್ಟಾಟಲ್
ಅಮಿತಾಬ್ ಬಚ್ಚನ್
ಸಚಿನ್ ತೆಂಡೂಲ್ಕರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ