ರಾಜ್ಯದಲ್ಲಿ ಪುನಾರಂಭಗೊಂಡ ರೈಲು ಸೇವೆ; ಬೆಳಗಾವಿ ರೈಲಿಗೆ ಚಾಲನೆ ನೀಡಿದ ಪೌರ ಕಾರ್ಮಿಕ ಮಹಿಳೆ ಮುನಿಯಮ್ಮ

ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇವತ್ತು ರೈಲು ಸಂಚಾರ ನಡೆಸಲಾಗುತ್ತಿದೆ. ಪ್ರಯಾಣಿಕರಿಂದ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಇತ್ಯಾದಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಒಳಗೆ ಬಿಡಲಾಗುತ್ತಿದೆ.

ಬೆಂಗಳೂರಿನಿಂದ ಬೆಳಗಾವಿಗೆ ಹೊರಟ ರೈಲಿಗೆ ಚಾಲನೆ ನೀಡಿದ ಮುನಿಯಮ್ಮ

ಬೆಂಗಳೂರಿನಿಂದ ಬೆಳಗಾವಿಗೆ ಹೊರಟ ರೈಲಿಗೆ ಚಾಲನೆ ನೀಡಿದ ಮುನಿಯಮ್ಮ

 • Share this:
  ಬೆಂಗಳೂರು(ಮೇ 22): ಲಾಕ್​ಡೌನ್ ಘೋಷಣೆಯಾದ ಮಾರ್ಚ್ 22ರಿಂದಲೂ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಅಂತರಜಿಲ್ಲಾ ಪ್ರಯಾಣಿಕ ರೈಲು ಸೇವೆ ಇವತ್ತು ಪುನಾರಂಭಗೊಂಡಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ರೈಲು ಹೊರಟಿದೆ. ಪ್ರಾರಂಭಿಕ ಹಂತವಾಗಿ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೆಂಗಳೂರಿಂದ ಮೈಸೂರಿಗೆ; ಹಾಗೂ ಬೆಂಗಳೂರಿಂದ ಬೆಳಗಾವಿಗೆ ಎರಡೆರಡು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.

  ಮೇ 31ರವರೆಗೆ ಲಾಕ್​ಡೌನ್ ಇದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಂತರಜಿಲ್ಲಾ ರೈಲು ಸಂಚಾರಕ್ಕೆ ಅವಕಾಶ ಕೊಡುವುದಾಗಿ ಮಾರ್ಚ್ 18ರಂದು ತಿಳಿಸಿದ್ದರು. ಅದರಂತೆ, ಸೌತ್ ವೆಸ್ಟರ್ನ್ ರೈಲ್ವೆ ವಿಭಾಗವು ರೈಲು ಸಂಚಾರಕ್ಕೆ ಕ್ರಮ ತೆಗೆದುಕೊಂಡಿದೆ.

  ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇವತ್ತು ರೈಲು ಸಂಚಾರ ನಡೆಸಲಾಗುತ್ತಿದೆ. ಪ್ರಯಾಣಿಕರಿಂದ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಇತ್ಯಾದಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಒಳಗೆ ಬಿಡಲಾಗುತ್ತಿದೆ. ಇವತ್ತು 8ಗಂಟೆಗೆ ಬೆಳಗಾವಿಗೆ ಹೊರಟ ರೈಲಿನಲ್ಲಿ 14 ಬೋಗಿಗಳನ್ನ ಜೋಡಿಸಲಾಗಿತ್ತು.

  ಇದನ್ನೂ ಓದಿ: KKR-Jio Platforms deal: ಜಿಯೋದಲ್ಲಿ ಮತ್ತೊಂದು ಕಂಪನಿ ಬಂಡವಾಳ; ಕೆಕೆಆರ್​ನಿಂದ 11,367 ಕೊಟಿ ಹೂಡಿಕೆ

  ಲಾಕ್​ಡೌನ್ ಘೋಷಣೆಯಾ ಇದೂವರೆಗೂ ಸರಕು ಸಾಗಣೆ ರೈಲುಗಳ ಸಂಚಾರ ಮಾತ್ರ ಇತ್ತು. ಆಂತರಿಕವಾಗಿ ಪ್ಯಾಸೆಂಜರ್ ರೈಲು ಸಂಚಾರ ಇದೇ ಮೊದಲಾಗಿದೆ.

  First published: