ಮಂಗಳೂರಿನಲ್ಲಿ ಕೊರೋನಾ ತಡೆಗೆ 28 ಲಕ್ಷ ರೂ. ನೆರವು ನೀಡಿದ ಇನ್ಫೋಸಿಸ್ ಮಖ್ಯಸ್ಥೆ ಸುಧಾ ಮೂರ್ತಿ

ಕೊರೋನಾ ವೈರಸ್​​​​ ತಡೆಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಸಂಸ್ಥೆಗಳಿಗೆ ಮನವಿ ಮಾಡಿತ್ತು. ಈ ಮನವಿಗೆ ಕೂಡಲೇ ಸ್ಪಂದಿಸಿದ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಹೀಗೆ ಸಹಾಯದ ಹಸ್ತ ಚಾಚಿದ್ದಾರೆ. ಇದೀಗ ಕೊರೋನಾ ವೈರಸ್​​ ತಡೆಗಟ್ಟಲು ನೆರವಿಗೆ ಬಂದ ಇನ್ಫೋಸಿಸ್ ಫೌಂಡೇಶನ್​​ಗೆ ಜಿಲ್ಲಾಡಳಿತ ಧನ್ಯವಾದ ತಿಳಿಸಿದೆ.

news18-kannada
Updated:March 28, 2020, 4:43 PM IST
ಮಂಗಳೂರಿನಲ್ಲಿ ಕೊರೋನಾ ತಡೆಗೆ 28 ಲಕ್ಷ ರೂ. ನೆರವು ನೀಡಿದ ಇನ್ಫೋಸಿಸ್ ಮಖ್ಯಸ್ಥೆ ಸುಧಾ ಮೂರ್ತಿ
ಸುಧಾಮೂರ್ತಿ
  • Share this:
ಮಂಗಳೂರು(ಮಾ.28): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ನಿಯಂತ್ರಿಸಲು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ನೆರವಿಗೆ ಬಂದಿದ್ದಾರೆ. ತಮ್ಮ ಇನ್ಫೋಸಿಸ್ ಫೌಂಡೇಶನ್​​ನಿಂದ 28 ಲಕ್ಷ ರೂ. ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಈ ಮೂಲಕ ಕೊರೋನಾ ವೈರಸ್​​ ತಡೆಗೆ ಸುಧಾ ಮೂರ್ತಿ ನೆರವಾಗಿದ್ದಾರೆ.

ಕೊರೋನಾ ವೈರಸ್​​​​ ತಡೆಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಸಂಸ್ಥೆಗಳಿಗೆ ಮನವಿ ಮಾಡಿತ್ತು. ಈ ಮನವಿಗೆ ಕೂಡಲೇ ಸ್ಪಂದಿಸಿದ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಹೀಗೆ ಸಹಾಯದ ಹಸ್ತ ಚಾಚಿದ್ದಾರೆ. ಇದೀಗ ಕೊರೋನಾ ವೈರಸ್​​ ತಡೆಗಟ್ಟಲು ನೆರವಿಗೆ ಬಂದ ಇನ್ಫೋಸಿಸ್ ಫೌಂಡೇಶನ್​​ಗೆ ಜಿಲ್ಲಾಡಳಿತ ಧನ್ಯವಾದ ತಿಳಿಸಿದೆ.

ಇನ್ಫೋಸಿಸ್ ಫೌಂಡೇಶನ್​​ ನೀಡಿದ 28 ಲಕ್ಷದಿಂದ ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾಗುವ ವಸ್ತುಗಳನ್ನು ಜಿಲ್ಲಾಡಳಿತ ಖರೀದಿ ಮಾಡಿದೆ. 1,65000 ಮಾಸ್ಕ್, 2000 ಎನ್ 95 ಮಾಸ್ಕ್, 50 ಕ್ಯಾಪ್​​ಗಳು, 500 ಮಿಲಿ ಲೀಟರ್‌ನ 5000 ಬಾಟಲ್ ಸ್ಯಾನಿಟೈಸರ್, 60 ಸ್ಪೆಷಲ್​​ ಸರ್ಜಿಕಲ್ ಗ್ಲೌಸ್, 03 ಬ್ಲಾಕ್ ಸರ್ಜಿಕಲ್ ಗ್ಲೌಸ್, 85 ಗಾಗಲ್ಸ್, 300 ಫಾಗ್ ಫ್ರೀ ಮಾಸ್ಕ್​​​​​​ಗಳನ್ನು ಮಂಗಳೂರು ಜಿಲ್ಲಾಡಳಿತ ನೀಡಿದೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್​: ‘ಬಾಡಿಗೆದಾರರು ಅರ್ಧ ಬಾಡಿಗೆ ಕಟ್ಟಿದರೆ ಸಾಕು‘ ಎಂದು ಮಾನವೀಯತೆ ಮೆರೆದ ಮನೆ ಮಾಲೀಕ

ಕರ್ನಾಟಕದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರೆದಿದ್ದು, 7 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಈ 7 ಪ್ರಕರಣಗಳಲ್ಲಿ ನಾಲ್ವರು ಬೆಂಗಳೂರಿನವರೇ ಆಗಿದ್ದಾರೆ. ಯಾವುದೇ ದೇಶಕ್ಕೂ ಪ್ರಯಾಣಿಸಿರದ 10 ತಿಂಗಳ ಮಗುವಿಗೆ ಕೂಡ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡುಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಕೇರಳದಿಂದಲೇ ಮಗುವಿಗೆ ಸೋಂಕು ತಗುಲಿದೆಯಾ? ಅಥವಾ ಬೇರಾವುದಾದರೂ ಹಿನ್ನೆಲೆ ಇದೆಯಾ? ಎಂಬುದನ್ನು ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
First published: March 28, 2020, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading