ಹೋಟೆಲ್, ವಿಮಾನಯಾನಕ್ಕೆ 6 ತಿಂಗಳು ಜಿಎಸ್​ಟಿ ವಿನಾಯಿತಿ; ರಿಯಲ್ ಎಸ್ಟೇಟ್​ಗೆ ತೆರಿಗೆ ದರ ಕಡಿತಕ್ಕೆ ಮನವಿ

ಈ ಹಿಂದೆಯೇ ತೊಂದರೆಯಲ್ಲಿ ಸಿಲುಕಿದ್ದ ಮತ್ತು ಈಗ ಇನ್ನೂ ಅಪಾಯದಲ್ಲಿ ಸಿಲುಕಿರುವ ಹಾಗೂ ಹಲವು ಅನೇಕ ಉದ್ಯಮಗಳಿಗೆ ಪೂರಕವಾಗಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ತೆರಿಗೆ ಕಡಿಮೆ ಮಾಡುವಂತೆ ಸಲಹೆ ಇದೆ.

ತಯಾರಿಕಾ ಘಟಕದ ಪ್ರಾತಿನಿಧಿಕ ಚಿತ್ರ

ತಯಾರಿಕಾ ಘಟಕದ ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
ನವದೆಹಲಿ(ಏ. 26): ಒಂದಲ್ಲ ಎರಡು ಬಾರಿ ಲಾಕ್​ಡೌನ್ ಜಾರಿಗೊಳಿಸಿರುವುದರಿಂದ ದೇಶದ ಹಣಕಾಸಿನ ಪರಿಸ್ಥಿತಿ, ಉತ್ಪಾದನೆ, ವ್ಯಾಪಾರ, ವ್ಯವಹಾರಗಳೆಲ್ಲವೂ ಕುಸಿದಿರುವುದರಿಂದ ಕೇಂದ್ರ ಸರ್ಕಾರ ಸದ್ಯ ಅರ್ಥ ವ್ಯವಸ್ಥೆಗೆ ಚುರುಕು ನೀಡುವ ಕೆಲಸವನ್ನು ಮಾಡಲೇಬೇಕಿದೆ. ಈ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಿಗೆ ಜಿಎಸ್​ಟಿ ವಿನಾಯಿತಿ ಘೋಷಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಮೇ 3ರ ಬಳಿಕ‌ ಲಾಕ್​ಡೌನ್ ಇರಲಿ, ಇಲ್ಲದಿರಲಿ, ಆದರೆ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಹೆಚ್ಚು ಅವಕಾಶ ಮಾಡಿಕೊಡಿ ಎಂಬ ಅಭಿಪ್ರಾಯ ಆರ್ಥಿಕ ಮತ್ತು ಉದ್ಯೋಗ ಕ್ಷೇತ್ರಗಳಿಂದ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಹಣಕಾಸಿನ ಇಲಾಖೆಯ ಕಾರ್ಯಪಡೆ ರಚಿಸಿದ್ದು, ಅದೂ ಕೂಡ ಇಂಥದ್ದೇ ಸಲಹೆ ನೀಡಿದೆ. ಎಲ್ಲರೂ ಒಟ್ಟಾರೆ ದೇಶದ ಆರ್ಥಿಕ ಬೆಳವಣಿಗೆ ಬಗ್ಗೆ ಹೇಳಿದ್ದರೂ ಅದರಲ್ಲಿ ದೇಶದ ಪ್ರಮುಖ ಸಾಧನವಾದ ಕೃಷಿ ಮತ್ತು ಸಣ್ಣ, ಅತಿಸಣ್ಣ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ: PM Narendra Speech - ಮೇ 3ರ ನಂತರ ಮುಂದೇನು? ಈ ವಾರಾಂತ್ಯದ ಪ್ರಧಾನಿ ಭಾಷಣದಲ್ಲಿ ನಿರ್ಧಾರ ಪ್ರಕಟ

ಈ ನಡುವೆ ಭಾರತೀಯ ಕಂದಾಯ ಇಲಾಖೆಯ ಉನ್ನತಾಧಿಕಾರಿಗಳು ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ಮರಳಲು ಕೆಲ ತೆರಿಗೆ ವಿನಾಯಿತಿ ನೀಡಬೇಕು ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ‌. ಈಗ ಉದ್ಯಮ ವಲಯ ಕೂಡ ಇಂಥದ್ದೇ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.

ಉದ್ಯಮ ವಲಯಗಳಿಗೆ, ಅದರಲ್ಲೂ ಪ್ರಮುಖವಾಗಿ ಲಾಕ್​ಡೌನ್​ನಿಂದ ಅತಿ ಹೆಚ್ಚು ಪೆಟ್ಟು ತಿಂದಿರುವ ಕೆಲವು ಕ್ಷೇತ್ರಗಳಿಗೆ ಜಿಎಸ್​ಟಿ ವಿನಾಯಿತಿ ನೀಡುವಂತೆ ಸಲಹೆ ನೀಡಿದೆ. ಹೊಟೆಲ್ ಮತ್ತು ವಿಮಾನಯಾನ ಕ್ಷೇತ್ರಗಳನ್ನು ಉದಾಹರಣೆ ನೀಡಿರುವ ಉದ್ಯಮ ವಲಯವು ಈ ಕ್ಷೇತ್ರಗಳಿಗೆ 6 ತಿಂಗಳವರೆಗೆ ಜಿಎಸ್​ಟಿ ವಿಧಿಸದಂತೆ ವಿನಂತಿ ಮಾಡಿಕೊಂಡಿದೆ.

ಇದನ್ನೂ ಓದಿ: Kim Jong Un: ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ; ಸರ್ವಾಧಿಕಾರಿ ಸಾವಿನ ವದಂತಿಗೆ ತೆರೆ ಎಳೆದ ದಕ್ಷಿಣ ಕೊರಿಯಾ

ಇದಲ್ಲದೆ ಈ ಹಿಂದೆಯೇ ತೊಂದರೆಯಲ್ಲಿ ಸಿಲುಕಿದ್ದ ಮತ್ತು ಈಗ ಇನ್ನೂ ಅಪಾಯದಲ್ಲಿ ಸಿಲುಕಿರುವ ಹಾಗೂ ಹಲವು ಅನೇಕ ಉದ್ಯಮಗಳಿಗೆ ಪೂರಕವಾಗಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ತೆರಿಗೆ ಕಡಿಮೆ ಮಾಡುವಂತೆಯೂ ಕೇಳಿಕೊಂಡಿದೆ.‌ ಈ ರೀತಿ ಲಾಕ್​ಡೌನ್​ನಿಂದ ತೀವ್ರ ಧಕ್ಕೆಗೆ ಒಳಗಾಗಿರುವ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಚೇತರಿಕೆಗೆ ಒತ್ತುನೀಡಬೇಕು. ಇವೆಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡರೆ ದೇಶದೊಳಗೆ ಹಣದ ಹರಿವಿನ ಪ್ರಮಾಣ ಹೆಚ್ಚಾಗುತ್ತದೆ‌. ಅವು ಬೇರೆ ಕ್ಷೇತ್ರಗಳ ಬೆಳವಣಿಗೆಗೂ ಪೂರಕವಾಗಿರಲಿವೆ ಎಂದು ಮನವಿ ಮಾಡಿದೆ.

ಸದ್ಯ ಜಿಎಸ್​ಟಿ ವಿನಾಯಿತಿ ಮತ್ತು ಕಡಿಮೆ ದರದ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳು ಪರಿಶೀಲನೆ ನಡೆಸುತ್ತಿದೆ. ಜಿಎಸ್​ಟಿ ವಿನಾಯಿತಿ ಅಥವಾ ತೆರಿಗೆ ದರ ನಿಗದಿ ಕ್ರಮಗಳು ಜಿಎಸ್​ಟಿ ಕೌನ್ಸಿಲ್ ವ್ಯಾಪ್ತಿಗೆ ಬರುವುದರಿಂದ, ಅಂತಿಮ ನಿರ್ಧಾರವನ್ನು ಮಂಡಳಿಯೇ ಕೈಗೊಳ್ಳಬೇಕಾಗುತ್ತದೆ.

First published: