ಕೊರೋನಾ ಲಾಕ್ ಡೌನ್ ಮಧ್ಯೆ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟದ ವ್ಯವಸ್ಥೆ

ಇದೇ ವೇಳೆ, ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 30 ಫೀವರ್ ಕ್ಲಿನಿಕ್​ಗಳಿಗೆ ಕೆಲ ಇಂದಿರಾ ಕ್ಯಾಂಟೀನ್​ನ ಜಾಗವನ್ನು ಬಳಸಿಕೊಳ್ಳುವ ಚಿಂತನೆಯೂ ಇದೆ.

ಇಂದಿರಾ ಕ್ಯಾಂಟೀನ್

ಇಂದಿರಾ ಕ್ಯಾಂಟೀನ್

  • Share this:
    ಬೆಂಗಳೂರು(ಮಾ. 23): ಕೊರೋನಾ ವೈರಸ್ ಸೋಂಕು ಅಪಾಯದ ಮಟ್ಟಕ್ಕೆ ಹರಡುವ ಪರಿಸ್ಥಿತಿ ಬಂದಿದೆ. ದೇಶದ 14-15 ರಾಜ್ಯಗಳು ಲಾಕ್ ಡೌನ್ ಮಾಡಿವೆ. ಕರ್ನಾಟಕದಲ್ಲೂ ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ. ಈ ವೇಳೆ, ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟು, ಶಾಲೆ ಕಾಲೇಜು, ಕಚೇರಿ ಇತ್ಯಾದಿಗಳನ್ನು ಬಂದ್ ಮಾಡಿ ಎಲ್ಲಾ ನಾಗರಿಕರು ಮನೆಯಲ್ಲೇ ಕೂರಬೇಕಾಗಬಹುದು. ಲಾಕ್ ಡೌನ್​ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತಿರುವುದು ಬಡವರೇ ಆಗಿದ್ದಾರೆ. ಈ ವೇಳೆ ಅವರಿಗೆ ಸಹಾಯವಾಗಿ ಇಂದಿರಾ ಕ್ಯಾಂಟೀನ್​ಗಳ ಮೂಲಕ ಉಚಿತ ಆಹಾರ ನೀಡಲು ಸರ್ಕಾರ ನಿರ್ಧರಿಸಿದೆ.

    ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಇಡೀ ದಿನ ಇಲ್ಲಿ ಆಹಾರ ಲಭ್ಯವಿರಲಿದೆ. ಇಂದು ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ಧಾರೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ 30 ಫೀವರ್ ಕ್ಲಿನಿಕ್ ಸ್ಥಾಪನೆಗೆ ನಿರ್ಧಾರ: ಇಂದಿರಾ ಕ್ಯಾಂಟೀನ್ ಬಳಸಿಕೊಳ್ಳಲು ಚಿಂತನೆ

    ಇದೇ ವೇಳೆ, ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 30 ಫೀವರ್ ಕ್ಲಿನಿಕ್​ಗಳಿಗೆ ಕೆಲ ಇಂದಿರಾ ಕ್ಯಾಂಟೀನ್​ನ ಜಾಗವನ್ನು ಬಳಸಿಕೊಳ್ಳುವ ಚಿಂತನೆಯೂ ಇದೆ.

    ಲಾಕ್ ಡೌನ್ ಪರಿಸ್ಥಿತಿಯಲ್ಲಿ ಹೋಟೆಲ್​ಗಳು ತೆರೆಯಬಹುದಾದರೂ ಜನರು ಅಲ್ಲಿ ಕೂತು ತಿನ್ನುವಂತಿಲ್ಲ. ಪಾರ್ಸಲ್ ತೆಗೆದುಕೊಂಡು ಮನೆಗೆ ಹೋಗಿ ಆಹಾರ ಸೇವಿಸಬೇಕಾಗುತ್ತದೆ. ಇಂದಿರಾ ಕ್ಯಾಂಟೀನ್​ನಲ್ಲಿ ಯಾವ ರೀತಿ ವ್ಯವಸ್ಥೆ ಮಾಡಲಾಗುತ್ತದೆ ಎಂಬುದು ತಿಳಿದುಬಂದಿಲ್ಲ. ಸದ್ಯಕ್ಕೆ ಈ ಕ್ಯಾಂಟೀನ್​ಗಳಲ್ಲಿ ಜನರಿಗೆ ಸ್ಥಳದಲ್ಲೇ ತಿನ್ನಲು ಅವಕಾಶ ನೀಡಲಾಗಿದೆ.

    First published: