Corona Effect - ಜನರು ಮುಗಿಬಿದ್ದ ಹಿನ್ನೆಲೆ, ಇಂದಿರಾ ಕ್ಯಾಂಟೀನ್ ಕೂಡ ಬಂದ್

Corona Virus - ಬೆಂಗಳೂರು ಮತ್ತಿತರೆಡೆ ಕರ್ಫ್ಯೂ ಇದ್ದರೂ ಜನರು ಸಾರ್ವಜನಿಕವಾಗಿ ಓಡಾಡುತ್ತಿರುವುದಕ್ಕೆ ಸಿಎಂ ಯಡಿಯೂರಪ್ಪ ಅಸಮಾಧಾನಗೊಂಡಿದ್ಧಾರೆ.

ಇಂದಿರಾ ಕ್ಯಾಂಟೀನ್

ಇಂದಿರಾ ಕ್ಯಾಂಟೀನ್

  • News18
  • Last Updated :
  • Share this:
ಬೆಂಗಳೂರು(ಮಾ. 24): ಇಡೀ ಕರ್ನಾಟಕವೇ ಲಾಕ್ ಡೌನ್ ಆಗಿದೆ. ಬಡ ಬಗ್ಗರಿಗೆ ಊಟಕ್ಕೆ ತೊಂದರೆಯಾಗಬಾರದೆಂದು ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನು ಮಾತ್ರ ತೆರೆಯಲು ನಿರ್ಧರಿಸಿತ್ತು. ಅಲ್ಲದೇ ನಿರ್ಬಂಧದ ಅವಧಿಯವರೆಗೂ ಅಲ್ಲಿ ಉಚಿತವಾಗಿ ಊಟ ಕೊಡುವುದಾಗಿ ಘೋಷಿಸಿದ್ದರು. ಇದರಿಂದ ಇಂದಿರಾ ಕ್ಯಾಂಟೀನ್​ಗೆ ಮುಗಿಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನೂ ಬಂದ್ ಮಾಡಲು ನಿರ್ಧರಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 144 ಸೆಕ್ಷನ್ ಮಾದರಿಯಲ್ಲಿ ನಿರ್ಬಂಧಗಳು ಜಾರಿಯಲ್ಲಿವೆ. ಇಲ್ಲಿ ಜನರು ಗುಂಪುಗೂಡುವಂತಿಲ್ಲ. ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಇಂದಿರಾ ಕ್ಯಾಂಟೀನ್​ಗೆ ಜನರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರತೊಡಗಿದ್ದರು. ಇದರಿಂದ ಕೊರೋನಾ ವೈರಸ್ ಹರಡುವ ಅಪಾಯ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನೇ ಮುಚ್ಚಿಸಿದೆ.

ಲಾಕ್ ಡೌನ್​ನಿಂದ ಬಡವರಿಗೆ ಹೆಚ್ಚು ತೊಂದರೆಯಾಗದಂತೆ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಊಟದ ವ್ಯವಸ್ಥೆ ಮಾಡುವುದಾಗಿ ಸರ್ಕಾರ ನಿನ್ನೆ ಹೇಳಿತ್ತು. ಇವತ್ತು ಮೊದಲನೇ ದಿನವೇ ಇದು ರದ್ದಾಗಿದೆ. ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ 30 ಫೀವರ್ ಕ್ಲಿನಿಕ್​ಗಳಿಗೆ ಇಂದಿರಾ ಕ್ಯಾಂಟೀನ್​ಗಳನ್ನು ಬಳಕೆ ಮಾಡುವ ಯೋಜನೆ ಇದೆ.

ಇದನ್ನೂ ಓದಿ: ಒಂದಷ್ಟು ಮಂದಿ ಊರಿಗೆ ಹೊರಟರು, ಇಲ್ಲಿದ್ದವರು ಹಬ್ಬಕ್ಕೆ ಶಾಪಿಂಗ್ ಮಾಡಿದರು; ಕೊರೋನಾ ಬಗ್ಗೆ ಎಚ್ಚೆತ್ತಿಲ್ಲವೇ ಕರ್ನಾಟಕ?

ಬೆಂಗಳೂರು ಮತ್ತಿತರೆಡೆ ಕರ್ಫ್ಯೂ ಇದ್ದರೂ ಜನರು ಸಾರ್ವಜನಿಕವಾಗಿ ಓಡಾಡುತ್ತಿರುವುದಕ್ಕೆ ಸಿಎಂ ಯಡಿಯೂರಪ್ಪ ಅಸಮಾಧಾನಗೊಂಡಿದ್ಧಾರೆ. ಆದೇಶ ಇದ್ದರೂ ಜನರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಈ ರೀತಿ ವರ್ತಿಸಿದರೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಅದಕ್ಕೆ ಸರ್ಕಾರ ಜವಾಬ್ದಾರವಲ್ಲ ಎಂದು ಯಡಿಯೂರಪ್ಪ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ಧಾರೆ.

ಹಾಗೆಯೇ, ನಾಳೆ ಬುಧವಾರ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ನಿನ್ನೆ ಸಾರ್ವಜನಿಕರು ಸಂಪೂರ್ಣವಾಗಿ ಶಾಪಿಂಗ್​ ಮಾಡಿದ್ದರು. ಹಬ್ಬಕ್ಕೆ ಸಾಮಾನು ಕೊಳ್ಳಲು ಮುಗಿಬಿದ್ದಿದ್ದರು. ಈ ಬಗ್ಗೆಯೂ ಮುಖ್ಯಮಂತ್ರಿಗಳು ಅಸಮಾಧಾನಗೊಂಡಿದ್ಧಾರೆ. ಜನರು ಸರಳವಾಗಿ ಹಬ್ಬ ಆಚರಿಸಬೇಕೆಂದು ಕರೆ ನೀಡಿದ್ಧಾರೆ.

First published: