• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾ ಸೋಂಕಿಗೆ ಈ ಮಾತ್ರೆಗಳೇ ರಾಮಬಾಣವಾಯಿತೇ? ಮೆಡಿಕಲ್ ಶಾಪ್​​ಗಳಲ್ಲಿ ದಾಖಲೆಯ ಮಾರಾಟ!

ಕೊರೋನಾ ಸೋಂಕಿಗೆ ಈ ಮಾತ್ರೆಗಳೇ ರಾಮಬಾಣವಾಯಿತೇ? ಮೆಡಿಕಲ್ ಶಾಪ್​​ಗಳಲ್ಲಿ ದಾಖಲೆಯ ಮಾರಾಟ!

Ivermectin ಮಾತ್ರೆ

Ivermectin ಮಾತ್ರೆ

18 ವರ್ಷ ಮೇಲ್ಪಟ್ಟ ಎಲ್ಲರೂ Ivermectin ಮಾತ್ರೆಗಳನ್ನು 5 ದಿನಗಳ ಕಾಲ ತೆಗೆದುಕೊಳ್ಳಬೇಕು. ಜನರನ್ನು ಸೋಂಕಿನಿಂದ ಸುರಕ್ಷಿತವಾಗಿಡಲು ಈ ಮಾತ್ರೆಗಳನ್ನು ಸೇವಿಸುವುದು ಉತ್ತಮ ಎಂದು ಗೋವಾ ಸರ್ಕಾರ ಈಗಾಗಲೇ ಘೋಷಿಸಿದೆ.

  • Share this:

ನವದೆಹಲಿ:  ಮಾರಣಾಂತಿಕ ಕೊರೋನಾ ಸೋಂಕಿನಿಂದ ಜೀವಗಳನ್ನು ಉಳಿಸಲು ಲಸಿಕೆ, ಆಕ್ಸಿಜನ್​, ರೆಮ್​ಡಿಸಿವಿರ್​​ ಔಷಧಗಳನ್ನು ನೆಚ್ಚಿಕೊಳ್ಳಲಾಗಿದೆ. ಆದರೆ ಹೊಸ ಔಷಧವಾದ Ivermectin ಮಾತ್ರೆಗಳು ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕಂಡು ಬರುತ್ತಿದೆ. ಈ ಹಿನ್ನೆಯಲ್ಲಿ ದೇಶದಲ್ಲಿ ಈ ಮಾತ್ರೆಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ದೇಶದಲ್ಲಿ ಮೊದಲ ಬಾರಿಗೆ ಗೋವಾ ಸರ್ಕಾರ ಅಧಿಕೃತವಾಗಿ ತನ್ನ ರಾಜ್ಯದ ಜನತೆಗೆ ಈ ಮಾತ್ರೆಗಳನ್ನು ಸೂಚಿಸಿದೆ. ಸೋಂಕು ಇರಲಿ, ಇಲ್ಲದಿರಲಿ ಈ ಮಾತ್ರೆಗಳನ್ನು 5 ದಿನಗಳ ಕಾಲ ಸೇವಿಸಿ ಎಂದು ಗೋವಾ ಸರ್ಕಾರ ಸೂಚಿಸಿದೆ. ಇದರ ಬೆನ್ನಲ್ಲೇ Ivermectin ಮಾತ್ರೆಗಳಿಗೆ ಬೇರೆ ರಾಜ್ಯಗಳಲ್ಲೂ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ.


ಸೋಂಕಿನಿಂದ ಬಚಾವ್​​ ಆಗಲು ಜನ Ivermectin ಮಾತ್ರೆಗಳನ್ನು ಸೇವಿಸಲು ಮುಂದಾಗಿದ್ದಾರೆ. ಈ ಹಿನ್ನೆಯಲ್ಲಿ ಈ ಮಾತ್ರೆಗಳ ಪೂರೈಕೆ, ಮಾರಾಟ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ Ivermectin ಮಾತ್ರೆಗಳ ಉತ್ಪಾದನೆಗೆ ಬೇಕಾದ ಎಲ್ಲಾ ಕಚ್ಛಾವಸ್ತುಗಳ ದಾಸ್ತಾನು ಭಾರತದಲ್ಲಿದೆ. ಔಷಧ ಕಂಪನಿಗಳು ಅಗತ್ಯಕ್ಕೆ ತಕ್ಕಂತೆ ಮಾತ್ರೆಗಳನ್ನು ತಯಾರಿಸುವಲ್ಲಿ ಸಮರ್ಥವಾಗಿವೆ ಎಂದು ತಿಳಿಸಿದೆ. ತಿಂಗಳೊಂದರಲ್ಲಿ 30 ಕೋಟಿ ಯೂನಿಟ್​ನಷ್ಟು ಮಾತ್ರೆಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಸದ್ಯ 7 ಕೋಟಿ ಯೂನಿಟ್​ನಷ್ಟು ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.


ಕೊರೋನಾ ಸೋಂಕಿನ ಗುಂಪಿಗೆ ಸೇರಿದ ಜ್ವರದ ವಿರುದ್ಧ Ivermectin ಮಾತ್ರೆಗಳು ಪರಿಣಾಮಕಾರಿಯಾಗಿದೆ. ಈ ಹಿನ್ನೆಯಲ್ಲಿ ಕೊರೋನಾ ಸೋಂಕಿನ ವಿರುದ್ಧ Ivermectin ಮಾತ್ರೆಗಳನ್ನು ವೈದ್ಯರು ಹೆಚ್ಚಾಗಿ ರೋಗಿಗಳಿಗೆ ನೀಡುತ್ತಿದ್ದಾರೆ. ಹೀಗಾಗಿ ಹಿಂದೆಂದಿಗಿಂತಲೂ ಈಗ ಈ ಮಾತ್ರೆಗಳ ಬಳಕೆ ಹೆಚ್ಚಾಗಿದ್ದು, ಏಪ್ರಿಲ್​ ತಿಂಗಳೊಂದರಲ್ಲೇ 352 ಕೋಟಿಯಷ್ಟು ವ್ಯಾಪಾರ ನಡೆದಿದೆ.


ಇದನ್ನೂ ಓದಿ: ಕೊರೋನಾ ಆಯ್ತು, 2ನೇ ಅಲೆನೂ ಬಂತು, ಈಗ ಬ್ಲ್ಯಾಕ್ ಫಂಗಸ್; ಬೆಂಗಳೂರಲ್ಲೇ ಹೆಚ್ಚಾಗುತ್ತಿದೆ ‘ಕಪ್ಪು’ ಕಾಯಿಲೆ!


ಭಾರತದಲ್ಲಿ ಮೊದಲ ಬಾರಿಗೆ ಗೋವಾ ಸರ್ಕಾರ ಕೊರೋನಾ ವಿರುದ್ಧ ಹೊಸ ಔಷಧದ ಮೊರೆ ಹೋಗಿದೆ. ಜನರನ್ನು ಸೋಂಕಿನಿಂದ ಸುರಕ್ಷಿತವಾಗಿಡಲು ಈ ಮಾತ್ರೆಗಳನ್ನು ಸೇವಿಸುವುದು ಉತ್ತಮ ಎಂದು ಗೋವಾ ಸರ್ಕಾರ ಘೋಷಿಸಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ Ivermectin ಮಾತ್ರೆಗಳನ್ನು 5 ದಿನಗಳ ಕಾಲ ತೆಗೆದುಕೊಳ್ಳಬೇಕು. ಕೊರೋನಾ ಪಾಸಿಟಿವ್​ ಇರಲಿ, ಇಲ್ಲದಿರಲಿ ಎಲ್ಲರೂ 5 ದಿನಗಳ ಕಾಲ ಈ ಮಾತ್ರೆಯನ್ನು ಸೇವಿಸಿ. ಇದು ಸೋಂಕಿನಿಂದ ವಿರುದ್ಧ ಪರಿಣಾಮಕಾರಿ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್​ ರಾಣೆ ತಿಳಿಸಿದ್ದಾರೆ.


Ivermectin 12mg ಮಾತ್ರೆಗಳು ಗೋವಾದ ಎಲ್ಲಾ ಮೆಡಿಕಲ್​ ಶಾಪ್​ಗಳು, ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ತಡ ಮಾಡದೆ ಎಲ್ಲರೂ ಈ ಮಾತ್ರೆಯನ್ನು ಸೇವಿಸಿ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಸಹ ಮನವಿ ಮಾಡಿಕೊಂಡಿದ್ದಾರೆ. ಮಾರಕ ಸಾಂಕ್ರಾಮಿಕ ಜ್ವರವನ್ನು Ivermectin ಮಾತ್ರೆ ಗುಣಪಡಿಸುತ್ತೆ. ಈ ಜ್ವರ ಕೊರೋನಾ ಸೋಂಕಿನ ಗುಂಪಿಗೆ ಸೇರಿದ್ದು. ಇದರ ವಿರುದ್ಧ ಮಾತ್ರೆ ತಗೆದುಕೊಳ್ಳುವುದು ಪರಿಣಾಮಕಾರಿ. ಸೋಂಕು ಇರಲಿ, ಇಲ್ಲದಿರಲಿ ಈ ಮಾತ್ರೆಯನ್ನು ತೆಗೆದುಕೊಂಡರೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಸಚಿವ ರಾಣೆ ವಿವರಿಸಿದ್ದಾರೆ. ಸೋಂಕನ್ನು ತಡೆಯುವ ದೃಷ್ಟಿಯಿಂದ ಇದನ್ನು ಸೇವಿಸಬೇಕು. ಕೊರೋನಾ ಪಾಸಿಟಿವ್​ ಬರುವ ಮುನ್ನವೇ ತಡೆಗಟ್ಟುವ ವೈದ್ಯಕೀಯ ವಿಧಾನ ಇದಾಗಿದೆ ಎಂದಿದ್ದಾರೆ.


ಭಾರತದಲ್ಲೇ ಗೋವಾ ಸರ್ಕಾರವೇ ಕೊರೋನಾ ವಿರುದ್ಧ ಹೊಸ ವಿಧಾನವನ್ನು ಅನುಸರಿಸುತ್ತಿದೆ. ಬ್ರಿಟನ್​, ಇಟಲಿ, ಸ್ಪೇನ್​ ಹಾಗೂ ಚೀನಾದ ತಜ್ಞರು ಈ ಮಾತ್ರೆಯಿಂದ ಸೋಂಕು ತಗ್ಗಿರುವುದನ್ನು ಸಂಶೋಧಿಸಿದ್ದಾರೆ. ಈ ದೇಶಗಳಲ್ಲಿ ಈಗಾಗಲೇ ಈ ಮಾತ್ರೆಯನ್ನು ಜನರಿಗೆ ನೀಡಲಾಗಿದೆ. 5 ದಿನಗಳ ಕಾಲ ಜನ ಮಾತ್ರೆಗಳನ್ನು ಸೇವಿಸಿದ್ದರಿಂದ ಕೊರೋನಾ ವ್ಯಾಪಕ ಮಟ್ಟದಲ್ಲಿ ಹರಡುವುದು ತಗ್ಗಿದೆ ಎನ್ನಲಾಗಿದೆ. ತಜ್ಞರಿಂದ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಂಡೇ ಗೋವಾ ಸರ್ಕಾರ Ivermectin ಮಾತ್ರೆ ಮೊರೆ ಹೋಗಿದೆ ಎಂದು ಸಚಿವ ರಾಣೆ ತಿಳಿಸಿದ್ದಾರೆ.

Published by:Kavya V
First published: