Ancovax: ಪ್ರಾಣಿಗಳಿಗೂ ಬಂತು ಭಾರತದ ಮೊದಲ ಕೋವಿಡ್-19 ಲಸಿಕೆ; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ವಿವರ

ಹಿಸಾರ್ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿದ ಅನ್ಕೋವ್ಯಾಕ್ಸ್ ಎಂದು ಕರೆಯಲ್ಪಡುವ ಲಸಿಕೆಯು ಸಾರ್ಸ್-ಕೋವ್-2ರ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳಿಂದ ಪ್ರಾಣಿಗಳನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತಿದೆ.

ಪ್ರಾಣಿಗಳಿಗೆ ಅನ್ಕೋವ್ಯಾಕ್ಸ್ ಲಸಿಕೆ

ಪ್ರಾಣಿಗಳಿಗೆ ಅನ್ಕೋವ್ಯಾಕ್ಸ್ ಲಸಿಕೆ

  • Share this:
ಸುಮಾರು ಎರಡು ವರ್ಷಗಳಿಂದ ಇಡಿ ಜಗತ್ತಿನಲ್ಲಿರುವ ಮನುಷ್ಯ ಸಂಕುಲವೇ ಈ ಕೋವಿಡ್-19 ವೈರಸ್ (Covid-19 Virus) ನ ಹಾವಳಿಂದಾಗಿ ತತ್ತರಿಸಿ ಹೋಗಿದೆ ಎಂದು ಹೇಳಬಹುದು. ಈ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ವೈರಸ್ ಅದೆಷ್ಟು ಜನರ (People) ಪ್ರಾಣವನ್ನು ಬಲಿ ತೆಗೆದುಕೊಂಡಿದೆ ಎಂದರೆ ಜನರು ಕೋವಿಡ್ ಎಂದರೆ ಸಾಕು ಒಂದು ರೀತಿಯ ಆತಂಕದಲ್ಲಿ ಬದುಕು ನಡೆಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಖಕ್ಕೆ ಮಾಸ್ಕ್ (Face Mask) ಧರಿಸುವುದು ಮತ್ತು ಕೈಗಳಿಗೆ ಸ್ಯಾನಿಟೈಜರ್ (Sanitizer) ಹಾಕಿಕೊಳ್ಳುವುದು ನಮ್ಮ ದೈನಂದಿನ ಜೀವನದ ಬಹುಮುಖ್ಯವಾದ ಎರಡು ಕೆಲಸಗಳಾಗಿವೆ ಎಂದು ಹೇಳಬಹುದು. ಎಲ್ಲೆ ಹೋದರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅಡ್ಡಾಡುವ ಜನರನ್ನು ನಾವು ನೋಡುತ್ತಿದ್ದೇವೆ. ಇದರ ಜೊತೆಗೆ ಕೈಗಳಿಗೆ ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರವನ್ನು (Social Distance) ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿವೆ.

ಕಳೆದ ಒಂದು ವರ್ಷದಿಂದ ಕೋವಿಡ್-19ವೈರಸ್ ವಿರುದ್ಧ ಹೊರಾಡುವಂತಹ ಲಸಿಕೆಗಳು ಬಂದು ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಕೆಲವೊಮ್ಮೆ ನಾವು ಈ ರಸ್ತೆ ಬದಿಗಳಲ್ಲಿ ಈ ಬಳಸಿದ ಮಾಸ್ಕ್ ಗಳನ್ನು ಅಡ್ಡಾತಿಡ್ಡಿಯಾಗಿ ಬೀಸಾಡಿರುವುದನ್ನು ನಾವು ನೋಡುತ್ತೇವೆ ಮತ್ತು ಅಕಸ್ಮಾತ್ ಆಗಿ ಕೋವಿಡ್ ಸೋಂಕಿತರು ಬಳಸಿದ ಮಾಸ್ಕ್ ಗಳನ್ನು ಅಲ್ಲಿ ಬೀಸಾಡಿ ಅವುಗಳನ್ನು ಬೀದಿಯಲ್ಲಿ ಅಡ್ಡಾಡಿಕೊಂಡು ಇರುವಂತಹ ಪ್ರಾಣಿಗಳು ತಿಂದರೆ ಅಥವಾ ಮೂಸಿ ನೋಡಿದರೆ ಅವುಗಳ ಗತಿ ಏನು ಅಂತ ತುಂಬಾ ಕಡಿಮೆ ಜನರು ಆಲೋಚಿಸಿರುತ್ತಾರೆ.

ಪ್ರಾಣಿಗಳಿಗೆ ಅನ್ಕೋವ್ಯಾಕ್ಸ್ ಲಸಿಕೆ
ಪ್ರಾಣಿಗಳಿಗೆ ಈ ಕೋವಿಡ್ ಸೋಂಕಿನಿಂದ ಅಪಾಯವಿಲ್ಲವೇ? ಅಂತ ಪ್ರಶ್ನೆಯೊಂದು ನಮ್ಮ ತಲೆಯಲ್ಲಿ ಅನೇಕ ಬಾರಿ ಬಂದಿರಬಹುದು. ಇವುಗಳಿಗೆ ಏನು ಲಸಿಕೆಗಳು ಇಲ್ಲವೇ ಎಂದು ನೀವು ಕೇಳಬಹುದು. ಇದನ್ನು ಯೋಚಿಸಿಯೇ ಭಾರತ ಸರ್ಕಾರದ ಕೃಷಿ ಸಚಿವಾಲಯವು ಪ್ರಾಣಿಗಳಿಗೆ ಭಾರತದ ಮೊದಲ ಕೋವಿಡ್ -19 ಲಸಿಕೆಯನ್ನು ಗುರುವಾರ ಅನಾವರಣಗೊಳಿಸಿದೆ. ಹಿಸಾರ್ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿದ ಅನ್ಕೋವ್ಯಾಕ್ಸ್ ಎಂದು ಕರೆಯಲ್ಪಡುವ ಲಸಿಕೆಯು ಸಾರ್ಸ್-ಕೋವ್-2 ರ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳಿಂದ ಪ್ರಾಣಿಗಳನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತಿದೆ.

ಈ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ
ನಾಯಿಗಳು, ಸಿಂಹಗಳು, ಚಿರತೆಗಳು, ಇಲಿಗಳು ಮತ್ತು ಮೊಲಗಳಿಗೆ ಈ ಲಸಿಕೆಯನ್ನು ಬಳಸಬಹುದು. ಇದು ಡೆಲ್ಟಾ ರೂಪಾಂತರದ ಸಾಂಕ್ರಾಮಿಕ ಭಾಗವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ನಿಷ್ಕ್ರಿಯ ಲಸಿಕೆಯಾಗಿದೆ. ಇದಲ್ಲದೆ, ಇದು ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಆಲ್ಹೈಡ್ರೋಜೆಲ್ ಅನ್ನು ಸಹಾಯಕವಾಗಿ ಬಳಸುತ್ತದೆ.

ಇದನ್ನೂ ಓದಿ: Explained: ಭಾರತದಲ್ಲಿ ಚಿರತೆಗಳು ಕಣ್ಮರೆಯಾಗುತ್ತಿವೆಯಾ? ಅವುಗಳ ಉಳಿವಿಗೆ ಸರ್ಕಾರ ಏನು ಮಾಡುತ್ತಿದೆ?

ಇದು ಭಾರತದಲ್ಲಿ ಅಭಿವೃದ್ಧಿಪಡಿಸಿದ ಪ್ರಾಣಿಗಳಿಗೆ ಮೊದಲ ಕೋವಿಡ್ -19 ಲಸಿಕೆಯಾಗಿದೆ. ನಾಯಿಗಳಿಗೆ, ಬೆಕ್ಕುಗಳಿಗೆ ಮತ್ತು ನರಿಗಳಿಗೆ ಈ ಲಸಿಕೆಯನ್ನು ನೀಡಲು ರಷ್ಯಾದವರು ಸಹ ಆಲೋಚಿಸಿದ್ದಾರೆ ಎಂದು ಕಳೆದ ವರ್ಷ ರಷ್ಯಾದಿಂದ ವರದಿಗಳು ಬಂದಿದ್ದವು.

ಈ ಲಸಿಕೆಯ ಅಗತ್ಯತೆ ಏನು?
ನಾಯಿಗಳು ಮತ್ತು ಬೆಕ್ಕುಗಳು ಸೇರಿದಂತೆ ಹಲವಾರು ಪ್ರಾಣಿಗಳಲ್ಲಿ ಕೋವಿಡ್ -19 ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ. "ಈ ಲಸಿಕೆಯು ಮೃಗಾಲಯದಲ್ಲಿರುವ ಪ್ರಾಣಿಗಳನ್ನು ರಕ್ಷಿಸುತ್ತದೆ. ಇದು ಸಹವರ್ತಿ ಪ್ರಾಣಿಗಳಿಂದ ಮಾನವರಿಗೆ ಹರಡುವುದನ್ನು ಸಹ ತಡೆಯುತ್ತದೆ" ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಹಿರಿಯ ವಿಜ್ಞಾನಿ ಡಾ.ಜ್ಯೋತಿ ಮಿಸ್ರಿ ಅವರು ಹೇಳಿದರು.

ಸಿಂಹಗಳು ಮತ್ತು ಹುಲಿಗಳನ್ನು ರಕ್ಷಿಸಲು ಈ ಲಸಿಕೆ
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಪ್ರಾಣಿಗಳು ಮಾನವರಿಗೆ ಸೋಂಕನ್ನು ಹರಡುವ ಅಪಾಯ ತುಂಬಾನೇ ಕಡಿಮೆ ಎಂದು ಪರಿಗಣಿಸಲಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳಾದ ಸಿಂಹಗಳು ಮತ್ತು ಹುಲಿಗಳನ್ನು ರಕ್ಷಿಸುವುದು ಲಸಿಕೆಯ ಬಹುಮುಖ್ಯವಾದ ಉದ್ದೇಶವಾಗಿದೆ.

ಭಾರತವು ಕಳೆದ ವರ್ಷ ಚೆನ್ನೈ ಮೃಗಾಲಯದ ಏಷ್ಯಾಟಿಕ್ ಸಿಂಹಗಳಲ್ಲಿ ಕನಿಷ್ಠ ಒಂಬತ್ತು ಕೋವಿಡ್ ಸೋಂಕುಗಳನ್ನು ವರದಿ ಮಾಡಿದೆ, ಸಿಂಹಿಣಿಗಳಲ್ಲಿ ಒಂದು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಹೇಳಿತ್ತು. ಇದರಿಂದಾಗಿ ಅಲ್ಲೇ ಇರುವಂತಹ ಮತ್ತು ಪ್ರವಾಸಕ್ಕಾಗಿ ಜನರು ಬರುತ್ತಿರುವ ಹುಲಿ ಮೀಸಲು ಪ್ರದೇಶಗಳನ್ನು ಸಹ ಮುಚ್ಚಲು ಇದು ಪ್ರೇರೇಪಿಸಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Explained: ಶಿಶಿಲದಲ್ಲಿ ಕಡಿಮೆಯಾಗ್ತಿದೆ ದೇವರ ಮೀನಿನ ಸಂಖ್ಯೆ! ಹತ್ತಿರದಲ್ಲಿದ್ದೇ ಹೊಂಚು ಹಾಕುವ ಕಳ್ಳ ಯಾರು ಗೊತ್ತಾ?

ಇದಲ್ಲದೆ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧ್ಯಯನವು ಕಾಡು ಏಷ್ಯಾಟಿಕ್ ಸಿಂಹಗಳಲ್ಲಿ ಕನಿಷ್ಠ ಮೂರು ನೈಸರ್ಗಿಕ ಕೋವಿಡ್ ಸೋಂಕುಗಳನ್ನು ಕಂಡು ಹಿಡಿದಿದೆ, ಮತ್ತು ಒಂದು ಚಿರತೆ ಮರಿ ಸತ್ತಿರುವುದು ಸಹ ಕಂಡುಬಂದಿದೆ ಮತ್ತು ನಂತರ ಕೋವಿಡ್ -19 ಪರೀಕ್ಷೆ ಮಾಡಿಸಿದರೆ ಅದು ಪಾಸಿಟಿವ್ ಅಂತ ವರದಿ ಬಂದಿತ್ತು.

ವನ್ಯ ಜೀವಿಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ
"ಪ್ರಪಂಚದಾದ್ಯಂತ ವನ್ಯಜೀವಿಗಳಲ್ಲಿ ಈ ಕೋವಿಡ್ ನ ಕೆಲವು ಪ್ರಕರಣಗಳು ವರದಿಯಾಗಿವೆ, ಕೆಲವು ಮೃಗಾಲಯದಿಂದ ಮತ್ತು ಕೆಲವು ಸಾಕುಪ್ರಾಣಿಗಳಲ್ಲಿ ವರದಿಯಾಗಿವೆ. ಆದಾಗ್ಯೂ, ಶೇಕಡಾವಾರು, ಇದು ತುಂಬಾ ಕಡಿಮೆ. ಕೆಮ್ಮು, ನೆಗಡಿ, ಜ್ವರ ಮತ್ತು ಶ್ವಾಸಕೋಶದ ತೊಂದರೆಗಳು ಪ್ರಾಣಿಗಳು ಮನುಷ್ಯರಿಗೆ ಸಮಾನವಾದ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತವೆ.

ಆದಾಗ್ಯೂ, ಈ ರೋಗಗಳು ಝೂನೋಟಿಕ್ ಆಗಿರುವುದರಿಂದ ಎಂದರೆ ಪ್ರಾಣಿಗಳಿಂದ ಮಾನವರಿಗೆ ಹರಡಬಹುದಾದ್ದರಿಂದ ಲಸಿಕೆಯು ಸಹಾಯ ಮಾಡುತ್ತದೆ. ಆದಾಗ್ಯೂ, ನಾವು ಯಾವ ಲಸಿಕೆಯನ್ನು ಬಳಸುತ್ತೇವೆ ಎಂಬುದನ್ನು ಎಚ್ಚರಿಕೆಯಿಂದ ನಿರ್ಧರಿಸಬೇಕಾಗಿದೆ" ಎಂದು ಜಬಲ್ಪುರದ ವನ್ಯಜೀವಿ ವಿಧಿವಿಜ್ಞಾನ ಮತ್ತು ಆರೋಗ್ಯ ಕೇಂದ್ರದ ಮಾಜಿ ನಿರ್ದೇಶಕ ಡಾ.ಎ ಬಿ ಶ್ರೀವಾಸ್ತವ್ ಅವರು ಹೇಳಿದರು.

ಪ್ರಾಣಿಗಳಿಗೆ ಸತ್ತ ವೈರಸ್ ಲಸಿಕೆ
ಈ ಲಸಿಕೆಯ ಬಗ್ಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಡಾ. ಶ್ರೀವಾಸ್ತವ್, ಜೀವಂತ-ಅಟೆನ್ಯುಯೇಟೆಡ್ ಲಸಿಕೆಗಿಂತ ದುರ್ಬಲಗೊಂಡ ಜೀವಂತ ವೈರಸ್ ಅನ್ನು ಬಳಸಲಾಗುತ್ತದೆ ಮತ್ತು ಕಾಡು ಪ್ರಾಣಿಗಳಿಗೆ ಈ ಲಸಿಕೆಯು ಯಾವಾಗಲೂ ಉತ್ತಮವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Dengue Fever: ಹೊಸ ಪ್ರಭೇದದ ಡೆಂಗ್ಯೂ ವೈರಸ್ ಪತ್ತೆ! ಇದನ್ನು ತಡೆಗಟ್ಟುವುದು ಹೇಗೆ?

"ನಾವು ಕಾಡು ಪ್ರಾಣಿಗಳಿಗೆ ಜೀವಂತ ಲಸಿಕೆಯನ್ನು ನೀಡುವುದಿಲ್ಲ. ಏಕೆಂದರೆ ಒಂದು ಜೀವಂತ ಲಸಿಕೆಯನ್ನು ಒಂದು ನಿರ್ದಿಷ್ಟ ಪ್ರಭೇದಕ್ಕೆ ಅಟೆನ್ಯುಯುವೇಟೆಡ್ ಮಾಡಿರಬಹುದು, ಆದರೆ ಅದು ಇನ್ನೂ ಮತ್ತೊಂದು ಪ್ರಭೇದದಲ್ಲಿ ರೋಗವನ್ನು ಉಂಟು ಮಾಡಬಹುದು. ಸುಮಾರು 15 ಅಥವಾ 20 ವರ್ಷಗಳ ಹಿಂದೆ, ನಾಯಿಗಳಿಗಾಗಿ ಅಭಿವೃದ್ಧಿಪಡಿಸಿದ ರೇಬಿಸ್ ಲಸಿಕೆಯನ್ನು ಆಫ್ರಿಕಾದಲ್ಲಿ ತೋಳಗಳಿಗೆ ನೀಡಲಾಯಿತು ಮತ್ತು ದುರದೃಷ್ಟವಶಾತ್ ತೋಳಗಳು ಸತ್ತು ಹೋದವು. ಸತ್ತ ವೈರಸ್ ಲಸಿಕೆಯು ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ" ಎಂದು ಅವರು ಹೇಳಿದರು.
Published by:Ashwini Prabhu
First published: