ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಕೊರೋನಾ ಪರೀಕ್ಷಾ ಸಾಮರ್ಥ್ಯ ತೀರಾ ಕಡಿಮೆ; ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕಾದಂತಹ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಒಟ್ಟಾರೆಯಾಗಿ ಕಡಿಮೆ ಕೊರೋನಾ ಪರೀಕ್ಷಾ ಪ್ರಮಾಣವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನ್ಯೂಯಾರ್ಕ್‌ (ಆಗಸ್ಟ್‌ 05); ಕೊರೋನಾ ಮಹಾಮಾರಿ ಪ್ರಸ್ತುತ ಇಡೀ ವಿಶ್ವವನ್ನು ವ್ಯಾಪಿಸುತ್ತಿದೆ. ಆದರೆ, ಈ ಸೋಂಕನ್ನು ನಿಯಂತ್ರಿಸುವಲ್ಲಿ ಉತ್ತಮ ಸಾಧನೆ ತೋರಿದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸೋಂಕು ಪರೀಕ್ಷಾ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸೋಂಕು ವಿಶ್ವದ ಅನೇಕ ದೇಶಗಳಲ್ಲಿ ನಿಯಂತ್ರಣಕ್ಕೆ ಸಿಗದೆ ಕೈಮೀರಿ ಹೋಗುತ್ತಿದೆ. ಆದರೆ, ಈ ಸೋಂಕನ್ನು ನಿಯಂತ್ರಿಸಲು ಏಕೈಕ ಮಾರ್ಗ "ಎಲ್ಲಾ ದೇಶಗಳು ಜನ ಸಾಮಾನ್ಯರನ್ನು ವ್ಯಾಪಕವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸುವುದು ಮಾತ್ರ " ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಸೂಚಿಸಿತ್ತು. ಅಲ್ಲದೆ, ಭಾರತದಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ತಾಕೀತು ಮಾಡಿತ್ತು.

ಆದರೆ, ಈ ಕುರಿತು ಪ್ರಸ್ತುತ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, "ಯಾದೃಚ್ಛಿಕವಾಗಿ ದೇಶದ ಎಲ್ಲಾ ಪ್ರಜೆಗಳನ್ನು ಒಟ್ಟಾರೆಯಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಹೇಳುತ್ತಲೇ ಇದೆ. ಆದರೆ, ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕಾದಂತಹ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಒಟ್ಟಾರೆಯಾಗಿ ಕಡಿಮೆ ಪರೀಕ್ಷಾ ಪ್ರಮಾಣವನ್ನು ಹೊಂದಿದೆ" ಎಂದು ಕಳವಳ ವ್ಯಕ್ತಪಡಿಸಿದೆ.

"ಪ್ರತಿ ಸಾರ್ವಜನಿಕ ಆರೋಗ್ಯ ಇಲಾಖೆಯು ಸಕಾರಾತ್ಮಕ ಪರೀಕ್ಷಾ ಮಾನದಂಡಗಳನ್ನು ಹೊಂದಿರಬೇಕು. ನಾವು ಸಮರ್ಪಕವಾಗಿ ಪರೀಕ್ಷೆ ಮಾಡದಿದ್ದರೆ, ವೈರಸ್ ಎಲ್ಲಿದೆ? ಎಂದು ನಮಗೆ ತಿಳಿಯುವುದಿಲ್ಲ. ನೀವು ವ್ಯಾಪಕ ಪರೀಕ್ಷೆಗಳನ್ನು ನಡೆಸದಿದ್ದರೆ, ನೀವು ಬೆಂಕಿಯೊಟ್ಟಿಗೆ ಕಣ್ಣುಮುಚ್ಚಿ ಹೋರಾಡಿದಂತಾಗುತ್ತದೆ. ಹೀಗಾಗಿ ಇನ್ನಾದರೂ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು" ಎಂದು ಡಾ|ಸೌಮ್ಯ ಸ್ವಾಮಿನಾಥನ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Ram Mandir: ’ಶ್ರೀರಾಮ ಎಂದರೆ ಪ್ರೀತಿ-ಸಹಾನುಭೂತಿ’; ಅಯೋಧ್ಯೆ ಭೂಮಿ ಪೂಜೆಯನ್ನು ಕೊಂಡಾಡಿದ ರಾಹುಲ್ ಗಾಂಧಿ

"ಉತ್ತಮ ಆಡಳಿತ, ವೈಜ್ಞಾನಿಕ ಜ್ಞಾನದ ಆಧಾರದ ಮೇಲೆ ಉತ್ತಮ ಕಾರ್ಯತಂತ್ರದ ಯೋಜನೆ, ಸಮುದಾಯ, ವೈಯಕ್ತಿಕ ನಂಬಿಕೆಯ ಒಳಗೊಳ್ಳುವಿಕೆ, ಸರ್ಕಾರ ಮತ್ತು ಜನರ ನಡುವಿನ ಉತ್ತಮ ಸಂವಹನದಿಂದಾಗಿ ಕೆಲವು ದೇಶಗಳು ಮೊದಲ ಹಂತದಲ್ಲಿ ಕೊರೋನಾ ವೈರಸ್ ಅ‌ನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಜನರನ್ನು ಪರೀಕ್ಷೆಗೆ ಒಳಪಡಿಸಿ ಕೊರೋನಾ ಪಾಸಿಟೀವ್ ಬಂದವರನ್ನು ಪ್ರತ್ಯೇಕಿಸಿದ್ದರಿಂದ ಮಾತ್ರ ಇದು ಸಾಧ್ಯವಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"27-28 ಕೊರೋನಾ ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಲ್ಲಿದ್ದರೆ, ಇನ್ನೂ 150 ಲಸಿಕೆಗಳು ಪೂರ್ವ-ಕ್ಲಿನಿಕಲ್ ಪರೀಕ್ಷೆಯಲ್ಲಿವೆ. ಕೇವಲ ಐದು ಲಸಿಕೆಗಳು ಮಾತ್ರ ಮೂರನೇ ಹಂತದ ಪ್ರಯೋಗಗಳಿಗೆ ಪ್ರವೇಶಿಸಿದೆ. ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ತಿಳಿದುಕೊಳ್ಳುತ್ತೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ.
Published by:MAshok Kumar
First published: