Kerala Coronavirus: ಕೇರಳದಲ್ಲಿ ಒಂದೇ ದಿನಕ್ಕೆ ದಿಢೀರ್ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ..! ಕಾರಣವೇನು?

ಈ ಹಿಂದೆ, ಕೇರಳ ಸರ್ಕಾರವು ಶೀಘ್ರದಲ್ಲಿಯೇ, ಈ ವರದಿಯಾಗದ ಅಥವಾ ತಪ್ಪಾಗಿ ವರದಿಯಾದ ಕೋವಿಡ್-19 ವೈರಸ್‌ನಿಂದಾಗಿ ಹಿಂದೆ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸೇರಿಸುವುದಾಗಿ ಹೇಳಿಕೆ ನೀಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕೋವಿಡ್-19(Coronavirus) ವೈರಸ್ ಹಾವಳಿಯು ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದು, ಜನರಿಗೆ ಲಸಿಕೆ ನೀಡುವುದರ ಮೂಲಕ ಹೊಸ ಕೋವಿಡ್-19 ಪ್ರಕರಣಗಳು ನಿಯಂತ್ರಣದಲ್ಲಿದ್ದು, ಶಾಲಾ ಕಾಲೇಜುಗಳನ್ನು(SChools-colleges Restart) ಪುನಃ ಪ್ರಾರಂಭಿಸುತ್ತಿದ್ದಾರೆ.ಆದರೆ ಕೇರಳ ರಾಜ್ಯದಲ್ಲಿ ಮಾತ್ರ ದಿನೇ ದಿನೇ ಈ ಕೋವಿಡ್-19 ಪ್ರಕರಣಗಳ ಸಂಖ್ಯೆಯ ಲ್ಲಿ ಏರಿಕೆ ಕಾಣುತ್ತಿರುವುದು ಕೇರಳ ಸರ್ಕಾರ(Kerala Government)ಕ್ಕೆ ಕೋವಿಡ್ ಒಂದು ಮುಗಿಯದ ತಲೆ ನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗುವುದಿಲ್ಲ. ಶನಿವಾರದಂದು ಭಾರತದಲ್ಲಿ ಕೋವಿಡ್-19 ವೈರಸ್‌ನಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ 666 ಆಗಿದೆ. ಆದರೆ ಇದರಲ್ಲಿ ಕೇರಳ ರಾಜ್ಯವು ಹಿಂದೆ ಕೋವಿಡ್-19 ನಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಮತ್ತೊಮ್ಮೆ ಪರಿಷ್ಕರಿಸಿ ಹಿಂದೆ ಉಳಿದಿರುವ 563 ಸಾವಿನ ಪ್ರಕರಣಗಳನ್ನು ಇದಕ್ಕೆ ಸೇರಿಸಿದೆ.

ಶುಕ್ರವಾರ ಪತ್ತೆಯಾದ ಪ್ರಕರಣಗಳೆಷ್ಟು?

ಕೇರಳದಲ್ಲಿ ಶುಕ್ರವಾರ 9,361 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದರ ಜೊತೆಗೆ, ಸಾಕಷ್ಟು ದಾಖಲೆಗಳ ಕೊರತೆಯಿಂದಾಗಿ ದೃಢೀಕರಿಸದ ಜೂನ್ 14ರವರೆಗೆ ಸಂಭವಿಸಿದ 292 ಸಾವುಗಳನ್ನು ಸಹ ಸೇರಿಸಲಾಗಿದೆ. ಈ ಎಲ್ಲಾ ಉಳಿದಿರುವಂತಹ ಸಾವಿನ ಸಂಖ್ಯೆ ಸೇರಿಸಿದಾಗ ಈಗ ಸಾವಿನ ಸಂಖ್ಯೆಯು 27,765ಕ್ಕೆ ಏರಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ, ಕೇರಳ ಸರ್ಕಾರವು ಶೀಘ್ರದಲ್ಲಿಯೇ, ಈ ವರದಿಯಾಗದ ಅಥವಾ ತಪ್ಪಾಗಿ ವರದಿಯಾದ ಕೋವಿಡ್-19 ವೈರಸ್‌ನಿಂದಾಗಿ ಹಿಂದೆ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಮತ್ತೊಮ್ಮೆ ಪರಿಷ್ಕರಿಸಿ ಸೇರಿಸುವುದಾಗಿ ಹೇಳಿಕೆ ನೀಡಿತ್ತು.

ಇದನ್ನೂ ಓದಿ:Covid Vaccination: ಇಂದು ಲಸಿಕೆ ಉತ್ಪಾದಕರ ಜೊತೆ ಪ್ರಧಾನಿ ಮೋದಿ ಸಂವಾದ

ವಿರೋಧ ಪಕ್ಷ ಆರೋಪ

ಕೇರಳ ರಾಜ್ಯದಲ್ಲಿನ ಈ ಕೋವಿಡ್-19 ವೈರಸ್‌ನಿಂದಾಗಿ ಸಂಭವಿಸಿದ ಸಾವಿನ ಪ್ರಮಾಣ ಕಡಿಮೆ ತೋರಿಸುವುದಕ್ಕೆ ಉದ್ದೇಶ ಪೂರ್ವಕ ಪ್ರಯತ್ನಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.

ಆರೋಗ್ಯ ಸಚಿವೆ ಹೇಳಿದ್ದಿಷ್ಟು..!

ನಂತರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿರೋಧ ಪಕ್ಷಗಳು ಮಾಡಿದಂತಹ ಆರೋಪವನ್ನು ತಳ್ಳಿ ಹಾಕುತ್ತಾ “ಈ ವರ್ಷದ ಜೂನ್ ತಿಂಗಳಿಗಿಂತಲೂ ಮೊದಲು ಆಸ್ಪತ್ರೆಗಳು ಕೋವಿಡ್-19 ವೈರಸ್‌ನಿಂದಾದ ಸಾವುಗಳ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸುವ ಮೊದಲೇ ಅನೇಕ ಸಾವುಗಳು ಸಂಭವಿಸಿದ್ದವು ಎಂದು ಅವರು ಉತ್ತರಿಸಿದ್ದಾರೆ.

"ಅನೇಕರ ಸಾವುಗಳನ್ನು ಕೋವಿಡ್-19 ಸಾವಿನ ಸಂಖ್ಯೆಯಿಂದ ಹೊರಗಿಡುವ ಯಾವುದೇ ಉದ್ದೇಶಪೂರ್ವಕ ಪ್ರಯತ್ನ ನಡೆದಿಲ್ಲ. ಕೋವಿಡ್-19 ಸಾವುಗಳಿಗೆ ಸಂಬಂಧಿಸಿದಂತೆ ನಾವು ಐಸಿಎಂಆರ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ, ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ, ಈ ಸಾವುಗಳ ಸಂಖ್ಯೆ ಪಡೆಯಲು ಸಾಧ್ಯವಾಗಿರಲಿಲ್ಲ. ನಾವು ಮತ್ತೆ ಕೋವಿಡ್-19 ಸಾವಿನ ಸಂಖ್ಯೆಯ ಪಟ್ಟಿಯನ್ನು ಪರಿಷ್ಕರಿಸುತ್ತೇವೆ" ಎಂದು ಆರೋಗ್ಯ ಸಚಿವೆ ಹೇಳಿದ್ದಾರೆ.

ಇದನ್ನೂ ಓದಿ:100 Cr Corona Vaccine Dose: ಲಸಿಕೆ ಅಭಿಯಾನದ ಸಾಧನೆ, ಜನರ ಪಾಲ್ಗೊಳ್ಳುವಿಕೆಗೆ ಸಾಕ್ಷಿ; ಪ್ರಧಾನಿ ಮೋದಿ ಬಣ್ಣನೆ

ಪ್ರಸ್ತುತ ಇರುವ ಕೋವಿಡ್ ಪ್ರಕರಣಗಳೆಷ್ಟು?

ಕಳೆದ 24 ಗಂಟೆಗಳಲ್ಲಿ 80, 393 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 2,81,286 ಜನರು ತೀವ್ರ ನಿಗಾದಲ್ಲಿ ಇದ್ದಾರೆ. ಇದರಲ್ಲಿ 2,72,412 ಜನರು ಮನೆಯಲ್ಲಿ ಮತ್ತು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ. ಸುಮಾರು 8,874 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Published by:Latha CG
First published: