ಅತಿಹೆಚ್ಚು ಕೊರೋನಾ ಪೀಡಿತ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಭಾರತ; ಇಟಲಿಯನ್ನು ಹಿಂದಿಕ್ಕಿದ ಇಂಡಿಯಾ

ಮೇ 1ರಂದು ದೇಶಾದ್ಯಂತ 35 ಸಾವಿರ ಕೊರೋನಾ ಪ್ರಕರನಗಳು ಇದ್ದವು. ಸತ್ತವರ ಸಂಖ್ಯೆ 1,150ಕ್ಕಿಂತ ಕಡಿಮೆ ಇತ್ತು. ಒಂದು ತಿಂಗಳಲ್ಲಿ ಈ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳಲ್ಲಿ ಸೋಂಕಿತರ ಸಂಖ್ಯೆ 2,26,770ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 6,348 ಏರಿಕೆಯಾಗಿದೆ.

news18-kannada
Updated:June 6, 2020, 8:13 AM IST
ಅತಿಹೆಚ್ಚು ಕೊರೋನಾ ಪೀಡಿತ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಭಾರತ; ಇಟಲಿಯನ್ನು ಹಿಂದಿಕ್ಕಿದ ಇಂಡಿಯಾ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ಜಾಗತಿಕವಾಗಿ ಹಬ್ಬಿರುವ ಮಾರಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಇದೆ. ಭಾರತದಲ್ಲೂ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇದಿನೇ ವ್ಯಾಪಕವಾಗುತ್ತಿದ್ದು, ಇದೀಗ ಜಗತ್ತಿನಲ್ಲಿ ಭಾರತ ಸೋಂಕಿತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.

ಏಳನೇ ಸ್ಥಾನದಲ್ಲಿ ಭಾರತ ಇದೀಗ ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ‌ಜಿಗಿದಿದೆ.  ಈವರೆಗೂ ಒಟ್ಟು 2.28 ಲಕ್ಷ ಮಂದಿ ಸೋಂಕಿತರಾಗಿದ್ದು, 6,500 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ಒಂದೇ ದಿನ 295 ಬಲಿಯಾಗಿದ್ದಾರೆ. ದಿನವೊಂದರಲ್ಲಿ ಕೊರೋನಾಗೆ ಬಲಿಯಾಗಿದ್ದು ಇದೇ ಮೊದಲು. ಮೇ ಒಂದರಿಂದ ವಲಸಿಗರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರವರ ಊರುಗಳಿಗೆ ಕರೆದೊಯ್ಯಲು ಆರಂಭಿಸಿದ ಬಳಿಕ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಹೆಚ್ಚಾಗುತ್ತಿದೆ.

ಮೇ 1ರಂದು ದೇಶಾದ್ಯಂತ 35 ಸಾವಿರ ಕೊರೋನಾ ಪ್ರಕರನಗಳು ಇದ್ದವು. ಸತ್ತವರ ಸಂಖ್ಯೆ 1,150ಕ್ಕಿಂತ ಕಡಿಮೆ ಇತ್ತು. ಒಂದು ತಿಂಗಳಲ್ಲಿ ಈ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳಲ್ಲಿ ಸೋಂಕಿತರ ಸಂಖ್ಯೆ 2,26,770ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 6,348 ಏರಿಕೆಯಾಗಿದೆ. 1.12 ಲಕ್ಷ ಮಂದಿ ಮಾರಕ ಸೋಂಕಿನಿಂದ ಗುಣಮುಖರಾಗಿದ್ದು, 1.10 ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ: ಕೊರೋನಾ ಕಾಟಕ್ಕೆ ಹೈದ್ರಾಬಾದ್ ಕರ್ನಾಟಕ ತತ್ತರ; ಶುಕ್ರವಾರ ಒಂದೇ ದಿನ 155 ಪ್ರಕರಣ ದೃಢ!
First published: June 6, 2020, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading