ಭಾರತದಲ್ಲಿ ಒಂದೇ ದಿನ 1,118 ಹೊಸ ಕೊರೋನಾ ಪ್ರಕರಣ; 12 ಸಾವಿರದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ

ಕೊರೋನಾದಿಂದಾಗಿ ಈವರೆಗೆ ಒಟ್ಟು 392 ಸಾವು ಸಂಭವಿಸಿದೆ. ಶಾಕಿಂಗ್​ ವಿಚಾರ ಎಂದರೆ ಮಹಾರಾಷ್ಟ್ರ ಒಂದರಲ್ಲೇ 178 ಜನರು ಮೃತಪಟ್ಟಿದ್ದಾರೆ. ಉಳಿದಂತೆ ಮಧ್ಯಪ್ರದೇಶ 53, ದೆಹಲಿ ಮತ್ತು ಗುಜರಾತ್​ನಲ್ಲಿ ತಲಾ 30, ತೆಲಂಗಾಣದಲ್ಲಿ 18, ಪಂಜಾಬ್​ 13, ತಮಿಳುನಾಡು 12, ಉತ್ತರ ಪ್ರದೆಶ ಹಾಗೂ ಕರ್ನಾಟಕ ತಲಾ 11 ಮೃತ ಪ್ರಕರಣಗಳು ದಾಖಲಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಏ.16): ಭಾರತದಲ್ಲಿ 21 ದಿನಗಳ ಲಾಕ್​ಡೌನ್​ ಪೂರ್ಣಗೊಂಡು ಮತ್ತೊಂದು ಲಾಕ್​ಡೌನ್​ ಆರಂಭವಾದ ನಡುವೆಯೂ ಕೊರೋನಾ ವೈರಸ್​ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ಒಟ್ಟು 1,118 ಹೊಸ ಕೊಒರೋನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12 ಸಾವಿರದ ಗಡಿ ಸಮೀಪಿಸಿದೆ. ಒಂದೇ ದಿನ ಇಷ್ಟೊಂದು ಪ್ರಕರಣ ದಾಖಲಾಗಿದ್ದು, ಭಾರತದಲ್ಲಿ ಇದೇ ಮೊದಲು.

  ಭಾರತದಲ್ಲಿ ಈವರೆಗೆ 11,933 ಪ್ರಕರಣ ದಾಖಲಾಗಿದೆ. ಈ ಪೈಕಿ 10,197 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1,343 ಜನರು ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ ಒಟ್ಟು 39 ಸಾವು ಸಂಭವಿಸಿದೆ. ಈ ಪೈಕಿ ಮಹಾರಾಷ್ಟ್ರ 18, ಉತ್ತರ ಪ್ರದೇಶ 6, ಗುಜರಾತ್ 4 ​, ಮಧ್ಯಪ್ರದೇಶ 3, ದೆಹಲಿ ಹಾಗೂ ಕರ್ನಾಟಕದಲ್ಲಿ ತಲಾ 2, ತೆಲಂಗಾಣ, ತಮಿಳುನಾಡು, ಪಂಜಾಬ್​ ಹಾಗೂ ಮೇಘಾಲಯದಲ್ಲಿ ತಲಾ ಒಂದು ಸಾವು ಸಂಭವಿಸಿದೆ.

  ಇದನ್ನೂ ಓದಿ: ಟ್ರಂಪ್​ ಆರ್ಥಿಕ ಸಲಹೆಗಾರರ ಪಟ್ಟಿಯಲ್ಲಿ ಗೂಗಲ್​ನ ಪಿಚೈ ಮತ್ತು ಮೈಕ್ರೋಸಾಫ್ಟ್​ ನಾಡೆಲ್ಲಾ ಸೇರಿದಂತೆ 6 ಭಾರತೀಯರು

  ಕೊರೋನಾದಿಂದಾಗಿ ಈವರೆಗೆ ಒಟ್ಟು 392 ಸಾವು ಸಂಭವಿಸಿದೆ. ಶಾಕಿಂಗ್​ ವಿಚಾರ ಎಂದರೆ ಮಹಾರಾಷ್ಟ್ರ ಒಂದರಲ್ಲೇ 178 ಜನರು ಮೃತಪಟ್ಟಿದ್ದಾರೆ. ಉಳಿದಂತೆ ಮಧ್ಯಪ್ರದೇಶ 53, ದೆಹಲಿ ಮತ್ತು ಗುಜರಾತ್​ನಲ್ಲಿ ತಲಾ 30, ತೆಲಂಗಾಣದಲ್ಲಿ 18, ಪಂಜಾಬ್​ 13, ತಮಿಳುನಾಡು 12, ಉತ್ತರ ಪ್ರದೆಶ ಹಾಗೂ ಕರ್ನಾಟಕ ತಲಾ 11 ಮೃತ ಪ್ರಕರಣಗಳು ದಾಖಲಾಗಿವೆ.

  ಉಳಿದ ದೊಡ್ಡ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕೊರೋನಾ ವೈರಸ್​ ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ ಎಂದೇ ಹೇಳಬಹುದು.ಇದಕ್ಕೆ ಕಾರಣ, ಈವರೆಗೆ ಕೇವಲ 11 ಸಾವು ಸಂಭವಿಸಿದ್ದು, ಕೊರೋನಾ ಪೀಡಿತರ ಸಂಖ್ಯೆ ಕೂಡ ಕಡಿಮೆಯೇ ಇದೆ.
  First published: