CoronaVirus: ಭಾರತದಲ್ಲಿ ಕಡಿಮೆಯಾಗುತ್ತಿರುವ ಕೊರೋನಾ ಸೋಂಕು; ಅಂಕಿ ಅಂಶಗಳು ವಿಶ್ವಾಸಾರ್ಹವಲ್ಲ ಎಂದ WHO

ದೇಶದ ಅನೇಕ ಭಾಗಗಳಲ್ಲಿ ಕೊರೋನಾ ಸೋಂಕು ಇನ್ನೂ ಉತ್ತುಂಗಕ್ಕೇರಿಲ್ಲ, ಅವು ಭವಿಷ್ಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವ ದೆಹಲಿ (ಮೇ 17); ಭಾರತದಲ್ಲಿ ಕೊರೋನಾ ವೈರಸ್​ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಲೇ ಇದೆ. ಪರಿಣಾಮ ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಜನ ಸೋಂಕಿಗೆ ತುತ್ತಾಗುತ್ತಿದ್ದರೆ, ಕನಿಷ್ಟ 4 ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ. ಈ ಸಂಖ್ಯೆ ಸಾಮಾನ್ಯವಾಗಿ ಕೇಂದ್ರ ಸರ್ಕಾರವನ್ನು ಚಿಂತೆಗೀಡು ಮಾಡಿತ್ತು. ಅಲ್ಲದೆ, ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ರಾಜ್ಯಗಳು ಕಳೆದ ಒಂದು ತಿಂಗಳಿನಿಂದ ಲಾಕ್​ಡೌನ್ ಹೇರಿವೆ. ಹೀಗಾಗಿ ಭಾರತದಲ್ಲಿ ಸೋಮವಾರದಿಂದ ಹೊಸ ಕೊರೋನಾ ವೈರಸ್ ಪ್ರಕರಣಗಳು ಕುಸಿತವಾಗಿದೆ ಎಂದು ವರದಿಯಾಗಿತ್ತು. ಈ ವರದಿ ಅನೇಕರಲ್ಲಿ ಆಶಾವಾದಕ್ಕೆ ಕಾರಣವಾಗಿತ್ತು. ಆದರೆ, ಈ ವರದಿಯನ್ನು ಅಲ್ಲಗೆಳೆದಿರುವ ವಿಶ್ವ ಆರೋಗ್ಯ ಸಂಸ್ಥೆ (WHO), "ಭಾರತದ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ವೈರಸ್​ ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ, ಈ ಭಾಗದಲ್ಲಿ ವ್ಯಾಪಕ ಕೊರೋನಾ ಪರೀಕ್ಷೆಗಳು ನಡೆಯುತ್ತಿಲ್ಲ. ಹೀಗಾಗಿ ಈ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  ವೈರಸ್‌ನ ಹೊಸ ರೂಪಾಂತರವು ಸೋಂಕಿನ ಉಲ್ಬಣಕ್ಕೆ ಕಾರಣವಾಗಿದ್ದರಿಂದ, ಕಳೆದ ತಿಂಗಳಿನಿಂದ ಪ್ರತಿದಿನ 4 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸೋಂಕಿತರ ಪ್ರಮಾಣ ಕುಸಿತ ಕಂಡರೂ ಸಹ, ಈ ಬಗ್ಗೆ ಖಚಿತತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜೊತೆಗೆ ಭಾರತದಲ್ಲಿ ಪತ್ತೆಯಾಗಿರುವ ಬಿ.1.617 ವೈರಸ್ ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿದೆ.

  "ದೇಶದ ಅನೇಕ ಭಾಗಗಳಲ್ಲಿ ಕೊರೋನಾ ಸೋಂಕು ಇನ್ನೂ ಉತ್ತುಂಗಕ್ಕೇರಿಲ್ಲ, ಅವು ಭವಿಷ್ಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಸಿದ್ದಾರೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.

  "ಅತಿ ಹೆಚ್ಚು ರಾಷ್ಟ್ರೀಯ ಪಾಸಿಟಿವ್‌ ದರ ಶೇ.20 ಆಗಿದ್ದರೂ, ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಹೆಚ್ಚಿನ ರಾಜ್ಯಗಳಲ್ಲಿ ಪರೀಕ್ಷೆ ಇನ್ನೂ ಅಸಮರ್ಪಕವಾಗಿದೆ. ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್‌ ದರವನ್ನು ನೋಡಿದಾಗ ನಾವು ಸಾಕಷ್ಟು ಪರೀಕ್ಷಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ" ಎಂದು ಸ್ವಾಮಿನಾಥನ್‌ ಹೇಳಿದ್ದಾರೆ.

  ಕಳೆದ ತಿಂಗಳಿನಿಂದ ತೀವ್ರವಾಗಿ ಏರುತ್ತಲೆ ಇದ್ದ ಕೊರೋನಾ ಸೋಂಕು ಕಳೆದ 24 ಗಂಟೆಗಳಲ್ಲಿ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ. ಕಳೆದ ಒಂದು ದಿನದಲ್ಲಿ ಹೊಸ ಕೊರೋನಾ ಪಾಸಿಟಿವ್‌ ಪ್ರಕರಣ 281,386 ಇಳಿದೆ. ಏಪ್ರಿಲ್ 21 ರ ನಂತರ ಇದೇ ಮೊದಲ ಬಾರಿಗೆ 3 ಲಕ್ಷಕ್ಕಿಂಲೂ ಕಡಿಮೆ ಪ್ರಕರಣ ವರದಿಯಾಗಿದೆ. ದೇಶದಲ್ಲಿ ದೈನಂದಿನ ಸಾವುಗಳು 4,000 ಕ್ಕಿಂತ ಹೆಚ್ಚಿವೆ ಎಂದು ವರದಿಯಾಗಿದೆ.

  ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?; ಕೇಂದ್ರದ ವಿರುದ್ಧ ಕಾಂಗ್ರೆಸ್ ಅಭಿಯಾನ!

  ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?; ಕಾಂಗ್ರೆಸ್ ಅಭಿಯಾನ!

  ಭಾರತದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಆದರೆ, ಸೂಕ್ತ ಸಮಯಕ್ಕೆ ಕೇಂದ್ರ ಸರ್ಕಾರ ಲಸಿಕೆಯನ್ನು ಯಾವ ರಾಜ್ಯಗಳಿಗೂ ನೀಡದ ಕಾರಣ ಜನರಿಗೆ ಲಸಿಕೆಯನ್ನು ಈವರೆಗೆ ನೀಡಲಾಗಿಲ್ಲ. ಇದಕ್ಕೆ ಕಾರಣ ಲಸಿಕೆಗಳ ಕೊರತೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಲಸಿಕೆ ನೀತಿಯನ್ನು ಅನೇಕರು ಟೀಕಿಸಿದ್ದರು. ನಮ್ಮ ಮಕ್ಕಳಿಗೆ ಸೇರಬೇಕಿದ್ದ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದಿರಿ ಎಂದು ಪಿಎಂ ಮೋದಿಯವರನ್ನು ಪ್ರಶ್ನಿಸುವ ಪೋಸ್ಟ್​​ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳನ್ನು ವೈರಲ್​ ಆಗಿದೆ.

  ಆದರೆ, ಹೀಗೆ ಟೀಕಿಸಿದ 25ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ನಿನ್ನೆ ಬಂಧಿಸಿ ಎಫ್​ಐಆರ್​ ದಾಖಲಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್​ ಇಂದು ಸಾಮಾಜಿಕ ಜಾಲತಾಣಗಳಲ್ಲಿ, "ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ?" ಮತ್ತ "ನಮ್ಮನ್ನೂ ಬಂಧಿಸಿ" ಎಂಬ ಅಭಿಯಾನವನ್ನು ಆರಂಭಿಸಿದೆ.
  Published by:MAshok Kumar
  First published: