CoronaVirus| ಕೋವಿಡ್-19 ಸಾಂಕ್ರಾಮಿಕದ ಭಯದ ಹೊರತಾಗಿಯೂ ಭಾರತೀಯರು ಹಬ್ಬಗಳಲ್ಲಿ ಬೆರೆಯಲು ಸಿದ್ಧರು; ಸಮೀಕ್ಷೆ

ಸಮೀಕ್ಷೆಯು ಭಾರತದ 312 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 12,000 ಭಾರತೀಯ ಕುಟುಂಬಗಳಿಂದ 27,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿದ್ದು ಸಮೀಕ್ಷೆಯಲ್ಲಿ 67% ಪುರುಷರು ಮತ್ತು 33% ಮಹಿಳೆಯರು ಭಾಗವಹಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

    ಸಮುದಾಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಲೋಕಲ್‌ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಮೇರೆಗೆ ಮುಂದಿನ 30 ದಿನಗಳಲ್ಲಿ ಸುಮಾರು 80% ಮನೆಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು, ಹುಟ್ಟುಹಬ್ಬ ಹಾಗೂ ಹಬ್ಬಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅತಿಥಿಗಳು ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದು ಸೋಂಕು ಹಬ್ಬುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಕೋವಿಡ್ ಸಾಂಕ್ರಾಮಿ ಕದ ಅಬ್ಬರ ಮುಗಿಯಿತೆಂದು ನಿಟ್ಟಿಸಿರು ಬಿಡುವ ಸಮಯ ಇದಲ್ಲ ಎಂಬುದಾಗಿ ತಜ್ಞರ ಸಮಿತಿ ಎಚ್ಚರಿಸಿದ್ದು ಸಾಲು ಸಾಲಾಗಿ ಹಬ್ಬಗಳು ಆಗಮಿಸುತ್ತಿರುವ ಈ ಸಮಯದಲ್ಲಿ ಕೊಂಚ ಎಚ್ಚರ ತಪ್ಪಿದರೂ ಕೋವಿಡ್ ಸಾಂಕ್ರಾಮಿಕ ಮಿತಿಮೀರುವ ಅಪಾಯವಿದೆ ಎಂಬುದಾಗಿ ಎಚ್ಚರಿಸಿದ್ದಾರೆ. ಸಪ್ಟೆಂಬರ್ 10 ರ ನಂತರ ದೇಶವು 10 ದಿನಗಳ ಗಣೇಶೋತ್ಸವ ಆಚರಣೆಗೆ ವಿಜೃಂಭಣೆಯಿಂದ ತಯಾರಾಗುತ್ತಿದ್ದು ತದನಂತರ ನವರಾತ್ರಿ, ದೀಪಾವಳಿ ಹಬ್ಬಗಳ ಸಂಭ್ರಮದಲ್ಲಿ ಭಾರತೀಯ ಮನೆಗಳು ಕೋವಿಡ್ ಸಾಂಕ್ರಾಮಿಕದ ನಡುವೆಯೂ ಅತಿಥಿಗಳನ್ನು ಮನೆಗೆ ಬರಮಾಡಿಕೊಳ್ಳುವ ಉತ್ಸಾಹದಲ್ಲಿದೆ ಎಂಬುದಾಗಿ ಸಮೀಕ್ಷೆ ವರದಿ ಮಾಡಿದೆ.


    ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ದಾಖಲಾಗಿರುವ ಕೋವಿಡ್ ಪ್ರಕರಣಗಳು ಹಾಗೂ ಮರಣ ಪ್ರಮಾಣಗಳನ್ನು ದಾಖಲು ಮಾಡಿದ್ದು ದೇಶವು 43,263 ಹೊಸ ಕೋವಿಡ್-19 ಪ್ರಕರಣಗಳು, 40,567 ಚೇತರಿಕೆ ಮತ್ತು 338 ಮರಣಗಳನ್ನು ವರದಿ ಮಾಡಿದೆ.


    ಸಮುದಾಯದ ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್‌ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಮೇರೆಗೆ ಮುಂದಿನ 30 ದಿನಗಳಲ್ಲಿ ಸುಮಾರು 80% ಮನೆಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು, ಹುಟ್ಟುಹಬ್ಬ ಹಾಗೂ ಹಬ್ಬಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅತಿಥಿಗಳು ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದು ಸೋಂಕು ಹಬ್ಬುವ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದೆ.


    ಸಮೀಕ್ಷೆಯು ಭಾರತದ 312 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 12,000 ಭಾರತೀಯ ಕುಟುಂಬಗಳಿಂದ 27,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿದ್ದು ಸಮೀಕ್ಷೆಯಲ್ಲಿ 67% ಪುರುಷರು ಮತ್ತು 33% ಮಹಿಳೆಯರು ಭಾಗವಹಿಸಿದ್ದಾರೆ. ಟಿಯರ್ (ಹಳ್ಳಿ ಪ್ರದೇಶ) 1 ಜಿಲ್ಲೆಗಳಿಂದ 44% ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲಾಗಿದ್ದು ಟಿಯರ್ 2 ನಿಂದ 31% ಹಾಗೂ 3,4 ಹಾಗೂ ಗ್ರಾಮೀಣ ಜಿಲ್ಲೆಗಳಿಂದ 25% ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲಾಗಿದೆ


    80% ಭಾರತೀಯ ಮನೆಗಳಲ್ಲಿ 1 ಅಥವಾ ಹೆಚ್ಚಿನ ವರ್ಗಗಳ ಅತಿಥಿಗಳು ಆಗಮನ:


    ಸಮೀಕ್ಷೆಯಲ್ಲಿ ಮುಂದಿನ 30 ದಿನಗಳಲ್ಲಿ ಮನೆಗೆ ಬರುವ ಅತಿಥಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗಿದೆ. ಇದರಲ್ಲಿ 17% ದಷ್ಟು ಜನರು ತಮ್ಮ ಬಂಧುಮಿತ್ರರ ಅಥವಾ ಕುಟುಂಬ ಸದಸ್ಯರ ಆಗಮನವನ್ನು ಖಾತ್ರಿಪಡಿಸಿದ್ದು ಇನ್ನು 8% ದಷ್ಟು ಜನರು ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಭೇಟಿಯನ್ನು ಖಚಿತಪಡಿಸಿದ್ದಾರೆ. ಇನ್ನು 22% ದಷ್ಟು ಜನರು ಮನೆಗೆಲಸದವರು, ಸೇವಾ ಪೂರೈಕೆದಾರರು ಹಾಗೂ ಇತರರ ಭೇಟಿಯನ್ನು ದಾಖಲಿಸಿದ್ದಾರೆ. ಇನ್ನು 20% ದಷ್ಟು ಜನರು ತಮ್ಮ ಮನೆಗೆ ಭೇಟಿ ನೀಡುವ ಯಾರನ್ನೂ ದಾಖಲಿಸಿಲ್ಲ ಹಾಗೂ ಹೊರಗಿನಿಂದ ಯಾರೂ ಮನೆಗೆ ಆಗಮಿಸುವುದಿಲ್ಲವೆಂದು ತಿಳಿಸಿದ್ದಾರೆ.


    45% ದಷ್ಟು ಜನರು ಕುಟುಂಬ ಸದಸ್ಯರು ಅಥವಾ ಬಂಧುಮಿತ್ರರ ಆಗಮನ:


    ಮನೆಗಳಿಗೆ ಭೇಟಿ ನೀಡುವ ಬಂಧುಮಿತ್ರರನ್ನು ಆದ್ಯತೆಯ ಮೇರೆಗೆ ಮೌಲ್ಯಮಾಪನ ನಡೆಸಿದಲ್ಲಿ 52% ದಷ್ಟು ಜನರು ಮನೆಗೆಲಸಕ್ಕೆ ಬರುವವರು, ಸೇವಾ ಪೂರೈಕೆದಾರರು ಹಾಗೂ ಮುಂದಿನ 30 ದಿನಗಳಲ್ಲಿ ಭೇಟಿ ನೀಡುವವರನ್ನು ಖಚಿತಪಡಿಸಿದ್ದಾರೆ. 45% ದಷ್ಟು ನಿವಾಸಿಗಳು ಕುಟುಂಬ ಸದಸ್ಯರು ಅಥವಾ ಬಂಧುಮಿತ್ರರ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 32% ಜನರು ಮುಂದಿನ 30 ದಿನಗಳಲ್ಲಿ ಮನೆಗೆ ಭೇಟಿ ನೀಡುವ ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳನ್ನು ನಿರೀಕ್ಷಿಸುತ್ತಾರೆ ಎಂದು ತಿಳಿಸಿದ್ದಾರೆ.


    59% ದಷ್ಟು ಜನರು ಇತರ ಬಂಧುಮಿತ್ರರ, ಸ್ನೇಹಿತರ ಮನೆಗೆ ಭೇಟಿ ನೀಡುವ ಇರಾದೆ:


    ಇದೇ ರೀತಿಯಾಗಿ ಮುಂದಿನ 30 ದಿನಗಳಲ್ಲಿ ಬೇರೆ ಮನೆಗೆ ಭೇಟಿ ನೀಡುವವರ ದಾಖಲಾತಿಯ ಸಮೀಕ್ಷೆ ನಡೆಸಿದೆ. ಇದರಲ್ಲಿ 23% ದಷ್ಟು ಜನರು ತಮ್ಮೊಂದಿಗೆ ಯಾವುದೇ ಬಂಧುಮಿತ್ರರು ಉಳಿದುಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. 11% ಜನರು ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಎಂದು ತಿಳಿಸಿದ್ದರೆ 5% ಜನರು ಇತರರು ನಮ್ಮೊಂದಿಗೆ ಉಳಿದುಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.


    ಇದನ್ನೂ ಓದಿ: Taliban| ತಾಲಿಬಾನ್​ಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

    ಇನ್ನು 41% ಜನರು ಮುಂದಿನ 30 ದಿನಗಳ ಕಾಲ ತಾವು ಯಾರ ಮನೆಗೂ ಭೇಟಿ ನೀಡುವುದಿಲ್ಲವೆಂದು ತಿಳಿಸಿದ್ದು ಇದು ನಮಗೆ ಅನ್ವಯವಾಗುವುದಿಲ್ಲವೆಂದು ತಿಳಿಸಿದ್ದಾರೆ. ಟ್ಟಾರೆಯಾಗಿ, 59% ಭಾರತೀಯ ಕುಟುಂಬಗಳು ಮುಂದಿನ 30 ದಿನಗಳಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ಇತರರನ್ನು ಭೇಟಿ ಮಾಡಲು ಯೋಜಿಸಿದ್ದಾರೆ. ಸಮೀಕ್ಷೆಯಲ್ಲಿನ ಈ ಪ್ರಶ್ನೆಯು 9,181 ಪ್ರತಿಕ್ರಿಯೆಗಳನ್ನು ಪಡೆದಿದೆ.


    ಸಪ್ಟೆಂಬರ್ ಬಂತೆಂದರೆ ಹಬ್ಬಗಳ ಸಾಲೇ ಆರಂಭವಾಗಿಬಿಡುತ್ತದೆ ಮತ್ತು ಅಕ್ಟೋಬರ್‌ನಾದ್ಯಂತ ಹಬ್ಬಗಳ ಸರಪಳಿ ನಿರಂತರವಾಗಿ ಮುಂದುವರಿದಿದ್ದು ಅನೇಕ ಕುಟುಂಬಗಳು ಮನೆಯಲ್ಲೇ ಇದ್ದು ಕೋವಿಡ್ ನಿಯಮಗಳಲ್ಲಿ ಹಬ್ಬಗಳನ್ನು ಆಚರಿಸುವ ತೀರ್ಮಾನಕ್ಕೆ ಬಂದಿವೆ. ಇನ್ನು ಮನೆಗೆ ಬರುವ ಅತಿಥಿಗಳ ಹಾಗೂ ಇತರರ ಆಗಮನದಿಂದಲೂ ವಿಚಲಿತಗೊಳ್ಳದೆ ಲಸಿಕೆ ಹಾಕಿರುವುದರಿಂದ ತಾವು ಸುರಕ್ಷಿತರು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: Taliban bans women's sports| ಇಸ್ಲಾಂ ವಸ್ತ್ರ ಸಂಹಿತೆಯನ್ನು ಉಲ್ಲೇಖಿಸಿ ಮಹಿಳೆಯರಿಗೆ ಎಲ್ಲಾ ಕ್ರೀಡೆಗಳನ್ನೂ ನಿಷೇಧಿಸಿದ ತಾಲಿಬಾನ್

    ಹಬ್ಬಗಳ ಸಮಯದಲ್ಲಿ ಜನರ ಸೇರುವಿಕೆ


    ಕುಟುಂಬಗಳು ತಿಳಿಸಿರುವ ಆದ್ಯತೆಯ ಕ್ರಮದಲ್ಲಿ ಲೆಕ್ಕಹಾಕಿದರೆ 32% ಜನರು ಮುಂದಿನ 30 ದಿನಗಳಲ್ಲಿ ಹಬ್ಬಗಳಿಗೆ ಸೇರುವ ನಿರೀಕ್ಷೆಯಿದೆ. ಇದಲ್ಲದೆ, 21% ದಷ್ಟು ಜನರು ಕುಟುಂಬಗಳು ಜನ್ಮದಿನಗಳು, ವಾರ್ಷಿಕೋತ್ಸವಗಳು ಅಥವಾ ಇತರ ಸಂದರ್ಭಗಳಲ್ಲಿ ಒಟ್ಟಿಗೆ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

    First published: