ಭಾರತದಲ್ಲಿ 147 ರೂಗೆ ಒಂದು ಡೋಸ್ ಕೋವಿಡ್ ವ್ಯಾಕ್ಸಿನ್? 50 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ

ಒಂದು ವ್ಯಾಕ್ಸಿನ್ ಡೋಸೇಜ್​ಗೆ 2 ಡಾಲರ್​ನಂತೆ ಎರಡು ಡೋಸ್ ಹಾಗೂ ನಿರ್ವಹಣಾ ವೆಚ್ಚ ಸೇರಿ ಸರ್ಕಾರಕ್ಕೆ 6-7 ಡಾಲರ್ ಹಣದ ಹೊರೆ ಬೀಳಬಹುದು. ಅಂದರೆ ಪ್ರತಿಯೊಬ್ಬ ವ್ಯಕ್ತಿಗೆ ಲಸಿಕೆ ನೀಡಲು ಸರ್ಕಾರಕ್ಕೆ 500 ರೂ ಖರ್ಚಾಗುವ ಅಂದಾಜು ಇದೆ.

news18
Updated:October 22, 2020, 9:38 PM IST
ಭಾರತದಲ್ಲಿ 147 ರೂಗೆ ಒಂದು ಡೋಸ್ ಕೋವಿಡ್ ವ್ಯಾಕ್ಸಿನ್? 50 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ
ಸಾಂದರ್ಭಿಕ ಚಿತ್ರ
  • News18
  • Last Updated: October 22, 2020, 9:38 PM IST
  • Share this:
ನವದೆಹಲಿ(ಅ. 22): ಕೊರೋನಾ ವೈರಸ್ ತುಸು ನಿಯಂತ್ರಣಕ್ಕೆ ಬಂದಂತಿರುವ ಭಾರತದಲ್ಲಿ ಕೊರೋನಾ ಲಸಿಕೆ ತಯಾರಿ ಕೂಡ ಕ್ಷಿಪ್ರ ಪ್ರಗತಿಯಲ್ಲಿದೆ. ಕೆಲವೇ ತಿಂಗಳಲ್ಲಿ ಲಸಿಕೆ ತಯಾರಾಗಿ ಮಾರುಕಟ್ಟೆ ಪ್ರವೇಶಿಸಿದೆ. ಇದಕ್ಕೆ ಈಗಲೇ ಅಣಿಗೊಂಡಿರುವ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಕೊರೋನಾ ಚುಚ್ಚುಮದ್ದು ಹಾಕಲು ವ್ಯವಸ್ಥೆ ಮಾಡುತ್ತಿದೆ. ಸರ್ಕಾರದ ಒಂದು ಅಂದಾಜು ಪ್ರಕಾರ ಎರಡು ಡೋಸ್​ಗಳ ಲಸಿಕೆಗೆ 6-7 ಡಾಲರ್ ಹಣ (ಸುಮಾರು 480 ರೂ) ವೆಚ್ಚವಾಗಬಹುದು. ಇದೇ ಲೆಕ್ಕದಲ್ಲಿ 130 ಕೋಟಿ ಜನರಿಗೆ ಲಸಿಕೆ ಹಾಕಲು ಒಂದೂಕಾಲು ಲಕ್ಷ ಕೋಟಿ ರೂ ರೂ ವೆಚ್ಚವಾಗಬಹುದು ಎಂಬ ಅಂದಾಜಿಗೆ ಬರಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸದ್ಯಕ್ಕೆ 50 ಸಾವಿರ ಕೋಟಿ ರೂ ಹಣ ತೆಗೆದಿಟ್ಟಿರುವುದು ತಿಳಿದುಬಂದಿದೆ.

2021ರ ಮಾರ್ಚ್ 31ಕ್ಕೆ ಅಂತ್ಯವಾಗುವ ಹಣಕಾಸು ವರ್ಷಕ್ಕಾಗಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ ಹಣವನ್ನು ಮೀಸಲಿಟ್ಟಿದೆ. ಇದಕ್ಕಾಗಿ ಯಾವುದೇ ಹಣದ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸುತ್ತಿದೆ ಎಂದು ಬ್ಲೂಂಬರ್ಗ್ ಕ್ವಿಂಟ್ ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಹಣಕಾಸು ಇಲಾಖೆಯಿಂದಾಗಲೀ ಸಚಿವರಿಂದಾಗಲೀ ಈ ಬಗ್ಗೆ ಅಧಿಕೃತ ಹೇಳಿಕೆ ಅಥವಾ ಸ್ಪಷ್ಟೀಕರಣ ಬಂದಿಲ್ಲ.

ಇದನ್ನೂ ಓದಿ: ಪರಿವರ್ತನೆಯ ಹಾದಿಯಲ್ಲಿ ರೈಲ್ವೆ; ದುಬಾರಿಯಾಗಲಿದೆ ರೈಲು ಪ್ರಯಾಣ

ಮೇಲೆ ಹೇಳಿದಂತೆ ಒಬ್ಬ ವ್ಯಕ್ತಿಗೆ ಲಸಿಕೆ ನೀಡಲು 6-7 ಡಾಲರ್ ಹಣ ಖರ್ಚಾಗುತ್ತದೆ. ಇದು ಎರಡು ಡೋಸ್ ಸೇರಿ ಆಗುವ ಖರ್ಚು. ಒಂದು ಡೋಸ್ ಲಸಿಕೆಗೆ 2 ಡಾಲರ್ ಆಗುತ್ತದೆ. ಎರಡು ಡೋಸ್​ಗೆ 4 ಡಾಲರ್ ಆಗುತ್ತದೆ. ಕೋಲ್ಡ್ ಸ್ಟೋರೇಜ್, ಸಾರಿಗೆ ಮೊದಲಾದ ಸೌಕರ್ಯಗಳ ವೆಚ್ಚ 2-3 ಡಾಲರ್ ಬರಬಹುದೆಂದು ನಿರೀಕ್ಷಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿಗೆ ಎರಡು ಡೋಸೇಜ್ ಲಸಿಕೆ ನೀಡಲು 6-7 ಡಾಲರ್ ಹಣ ವೆಚ್ಚವಾಗಬಹುದು. ಅಂದರೆ, ಸುಮಾರು 500 ರೂ ಆಸುಪಾಸಿನಲ್ಲಿ ಕೊರೋನಾ ಚುಚ್ಚುಮದ್ದನ್ನ ಒಬ್ಬ ವ್ಯಕ್ತಿಗೆ ನೀಡಲು ಸಾಧ್ಯವಿದೆ ಎಂಬ ಅಂದಾಜು ಸರ್ಕಾರದ್ದು.

ಸರ್ಕಾರ ಲಸಿಕೆಗೆ ಇಂತಿಷ್ಟು ದರವನ್ನ ನಿಗದಿ ಮಾಡುತ್ತದಾ, ಅಥವಾ ಎಲ್ಲಾ ವೆಚ್ಚವನ್ನೂ ತಾನೇ ಭರಿಸಿ ಜನರಿಗೆ ಉಚಿತವಾಗಿ ಲಸಿಕೆ ಒದಗಿಸುತ್ತದಾ ಎಂಬುದು ಗೊತ್ತಿಲ್ಲ. ಭಾರತದಲ್ಲಿ 3ಕ್ಕಿಂತ ಹೆಚ್ಚು ಲಸಿಕೆ ಪ್ರಯೋಗಗಳು ನಡೆಯುತ್ತಿದ್ದು, ಅವುಗಳ ಬೆಲೆಗಳ ಬಗ್ಗೆ ಇನ್ನೂ ಅಂದಾಜು ಸಿಕ್ಕಿಲ್ಲ.

ಇದನ್ನೂ ಓದಿ: ಅಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಪ್ರಯೋಗ; ಕ್ಲಿನಿಕಲ್ ಟ್ರಯಲ್​ನಲ್ಲಿ ಸ್ವಯಂಸೇವಕ ಸಾವು!

ಮೊನ್ನೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಲಸಿಕೆಗಾಗಿ ಸರ್ಕಾರ ದಿನದ 24 ಗಂಟೆಯೂ ನಿಗಾ ವಹಿಸಿ ಕೆಲಸ ಮಾಡುತ್ತಿದೆ. ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳು ಸಮರೋಪಾದಿಯಲ್ಲಿ ವ್ಯಾಕ್ಸಿನ್ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ಹೇಳಿದ್ದರು. “ಲಸಿಕೆ ಅಭಿವೃದ್ಧಿಪಡಿಸಲು ನಮ್ಮ ವಿಜ್ಞಾನಿಗಳೂ ಕಾರ್ಯನಿರತರಾಗಿದ್ದಾರೆ. ಇದು ಸಿದ್ಧಗೊಂಡ ಬಳಿಕ ಪ್ರತಿಯೊಬ್ಬ ವ್ಯಕ್ತಿಗೂ ತಲುಪಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ” ಎಂದು ಪ್ರಧಾನಿಗಳು ಭರವಸೆ ನೀಡಿದ್ಧಾರೆ.ಮುಂಬರುವ ಹಬ್ಬದ ಋತುವಿನಲ್ಲಿ ಜನರು ಖುಷಿಯಿಂದ ಮೈಮರೆತು ಕೂತರೆ ಕಷ್ಟ. ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಿ ಸುರಕ್ಷಿತವಾಗಿರಬೇಕು. ಲಾಕ್ ಡೌನ್ ಸಡಿಲಗೊಂಡರೂ ಕೊರೋನಾ ವೈರಸ್ ಸಡಿಲಗೊಂಡಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮೋದಿ ಕರೆ ನೀಡಿದ್ದಾರೆ.
Published by: Vijayasarthy SN
First published: October 22, 2020, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading