ದೆಹಲಿ ಆಕ್ಸಿಜನ್ ಬಿಕ್ಕಟ್ಟು; ಒಂದು ದಿನದ ಆದಾಯ 4.8 ಲಕ್ಷ ರೂ. ದಾನ ಮಾಡಿದ ನಾರ್ವೆಯ ರೆಸ್ಟೋರೆಂಟ್​!

ನಾರ್ವೆಯ ರೆಸ್ಟೋರೆಂಟ್‌ವೊಂದು ದೆಹಲಿಯ ಕೊರೊನಾ ವೈರಸ್‌ ರೋಗಿಗಳಿಗೆ ತನ್ನ ಒಂದು ದಿನದ ಗಳಿಕೆಯನ್ನು ದಾನ ಮಾಡಿದೆ.

ನಾರ್ವೆಯ ರೆಸ್ಟೋರೆಂಟ್

ನಾರ್ವೆಯ ರೆಸ್ಟೋರೆಂಟ್

  • Share this:
ಕೊರೊನಾ ವೈರಸ್‌ ಎರಡನೇ ಅಲೆಗೆ ದೇಶ ತತ್ತರಿಸುತ್ತಿದ್ದು, ಮಹಾಮಾರಿ ವೈರಸ್‌ಗೆಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೋವಿಡ್ - 19 ಜತೆಗೆ ಆಕ್ಸಿಜನ್ ಕೊರತೆ, ವೆಂಟಿಲೇಟರ್, ಬೆಡ್‌ ಕೊರತೆಯಿಂದಲೂ ದಿನನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ. ಈ ಹಿನ್ನೆಲೆ ದೇಶದಲ್ಲಿ ಅಘೋಷಿತ ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆ ಹಲವು ದೇಶಗಳು ಭಾರತಕ್ಕೆ ಸಹಾಯ ಹಸ್ತ ಚಾಚಿವೆ. ಹಲವು ದೇಶಗಳ ಸರ್ಕಾರಗಳು, ಜತೆಗೆ ದೇಶದ ಹಾಗೂ ವಿದೇಶದ ಎನ್‌ಜಿಒಗಳು ಸಹ ಭಾರತದ ಕೊರೊನಾ ವೈರಸ್‌ ರೋಗಿಗಳಿಗೆ ಹಾಗೂ ಲಾಕ್‌ಡೌನ್‌, ಕರ್ಫ್ಯೂ ಕಾರಣದಿಂದ ಕೆಲಸವಿಲ್ಲದೆ ಹಸಿವಿನಿಂದ ನಲುಗುತ್ತಿರುವ ಬಡವರಿಗೂ ನೆರವು ನೀಡುತ್ತಿವೆ. ಇದೇ ರೀತಿ, ನಾರ್ವೆಯ ರೆಸ್ಟೋರೆಂಟ್‌ವೊಂದು ದೆಹಲಿಯ ಕೊರೊನಾ ವೈರಸ್‌ ರೋಗಿಗಳಿಗೆ ತನ್ನ ಒಂದು ದಿನದ ಗಳಿಕೆಯನ್ನು ದಾನ ಮಾಡಿದೆ.

ಕೊರೊನಾ ವೈರಸ್‌ ರೋಗಿಗಳಿಗೆ ದೆಹಲಿಯ ಆಕ್ಸಿಜನ್ ತುರ್ತುಸ್ಥಿತಿಯನ್ನು ಸರಾಗಗೊಳಿಸುವ ಸಲುವಾಗಿ ನಾರ್ವೆ ರಾಜಧಾನಿ ಓಸ್ಲೋದಲ್ಲಿರುವ ಪಂಜಾಬ್ ಮೂಲದ ರೆಸ್ಟೋರೆಂಟ್ ಅಂತಾರಾಷ್ಟ್ರೀಯ ಮಾನವೀಯ ಪರಿಹಾರ ಸಂಸ್ಥೆ ಖಲ್ಸಾ ಏಡ್ ಮೂಲಕ 482,000 ರೂ. ನೆರವು ನೀಡಿದೆ.

ಈ ಬಗ್ಗೆ ಯುಎನ್ ಮಾಜಿ ಪರಿಸರ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೈಮ್ ಭಾನುವಾರ ಟ್ವೀಟ್‌ ಮಾಡಿದ್ದು, ''ಒಗ್ಗಟ್ಟು'' ಎಂಬ ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ.“ಓಸ್ಲೋನ ಪ್ರಮುಖ ಭಾರತೀಯ ರೆಸ್ಟೋರೆಂಟ್ '' [ ಹೊಸ ದಿಲ್ಲಿ (New Delhi)] ಖಲ್ಸಾ ಏಡ್ ಮೂಲಕ ದೆಹಲಿಯಲ್ಲಿ ಆಮ್ಲಜನಕವನ್ನು ಒದಗಿಸಲು ಶುಕ್ರವಾರದ ಆಹಾರ ಮಾರಾಟದಿಂದ ಬಂದ ಆದಾಯವನ್ನು ನೀಡಿದೆ. ಲಾಕ್‌ಡೌನ್ ಕಾರಣದಿಂದಾಗಿ ರೆಸ್ಟೋರೆಂಟ್ ಮುಚ್ಚಲ್ಪಟ್ಟಿದೆ. ಆದರೆ 54,000 NOKಯಷ್ಟು ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 482,000 ದಷ್ಟು ಆದಾಯವನ್ನು ಟೇಕ್‌ ಅವೇಯಲ್ಲಿ ಮಾಡಿದೆ'' ಎಂದು ಅವರು ಹೇಳಿದ್ದು, ''ಉತ್ತಮ ಕೆಲಸ'' ಎಂದೂ ಟ್ವೀಟ್‌ ಮಾಡಿದ್ದಾರೆ.

ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮಹಾತ್ಮ ಗಾಂಧಿಯವರ ಜೀವನ ಮತ್ತು ಆಲೋಚನೆಗಳಿಂದ ತಾವು ಪ್ರೇರಿತರಾಗಿದ್ದಾರೆಂದು ನಂಬಿರುವ ನಾರ್ವೆಯ ಮಾಜಿ ರಾಜತಾಂತ್ರಿಕ, ರಾಜಕಾರಣಿ ಮತ್ತು ಪರಿಸರ ಸಚಿವ ಸೋಲ್ಹೈಮ್, 2018 ರಲ್ಲಿ ಯುಎನ್ ಪರಿಸರ ಮುಖ್ಯಸ್ಥರಾಗಿ, ಭಾರತದಲ್ಲಿ 2022 ರೊಳಗೆ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಹಂತ ಹಂತವಾಗಿ ನಿಷೇಧಿಸುವಂತೆ ಮನವೊಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಇನ್ನು, New Delhi ಎಂಬ ರೆಸ್ಟೋರೆಂಟ್‌ ಹೆಸರನ್ನು ಇಟ್ಟುಕೊಂಡಿರುವ ನಾರ್ವೆಯ ಈ ಹೋಟೆಲ್‌ ಅನ್ನು ಪಂಜಾಬ್‌ನ ಸಿಂಗ್ ಕುಟುಂಬ ನಡೆಸುತ್ತಿದೆ. ಇಲ್ಲಿ ಸಾಂಪ್ರದಾಯಿಕ ಪಂಜಾಬಿ ಮತ್ತು ‘ತಂದೂರಿ’ ಭಕ್ಷ್ಯಗಳಿಗೆ ನಾರ್ವೆಯಲ್ಲಿ ಜನಪ್ರಿಯವಾಗಿದೆ.
Published by:Sushma Chakre
First published: