Indian Railways: 48 ದಿನಗಳ ನಂತರ ಕೊನೆಗೂ ಆರಂಭವಾಯ್ತು ರೈಲು ಸೇವೆ; ಇಂದು ಸಂಜೆ 8.30ಕ್ಕೆ ಬೆಂಗಳೂರಿನಿಂದ ದೆಹಲಿಗೆ ಮೊದಲ ಪ್ರಯಾಣ

IRCTC Ticket Booking: ನಿನ್ನೆ ಸಂಜೆಯಿಂದಲೇ ರೈಲ್ವೆ ಇಲಾಖೆ IRCTC ಮೂಲಕ ಆನ್‌ಲೈನ್ ಬುಕ್ಕಿಂಗ್ ಆರಂಭಿಸಿತ್ತು. ಸಾವಿರಾರು ಜನ ಇಲ್ಲಿ ನೋಂದಾಯಿಸಿಕೊಂಡಿದ್ದು, 48 ದಿನಗಳ ನಂತರದ ಮೊದಲ ಪ್ರಯಾಣಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಸಿದ್ದತೆ ನಡೆಸಲಾಗಿದೆ.

ರೈಲು

ರೈಲು

  • Share this:
ಬೆಂಗಳೂರು (ಮೇ 12); ಸುದೀರ್ಘ ಲಾಕ್‌ಡೌನ್‌ನಿಂದಾಗಿ ರೈಲು ಸಂಚಾರವನ್ನು ಕಳೆದ 48 ದಿನಗಳಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ, ಕೆಲವು ನಿರ್ಬಂಧಗಳ ಜೊತೆಗೆ ಇಂದಿನಿಂದ ರೈಲು ಸಂಚಾರ ಆರಂಭವಾಗಲಿದ್ದು, ರಾತ್ರಿ 8.30ಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಿಂದ ದೆಹಲಿ ಮೊದಲ ವಿಶೇಷ ರೈಲು ತನ್ನ ಪ್ರಯಾಣ ಆರಂಭಿಸಲಿದೆ.

ಇಂದಿನಿಂದ ರೈಲ್ವೆ ಇಲಾಖೆ ರಾಷ್ಟ್ರದೆಲ್ಲೆಡೆ ಆರಂಭಿಕ ಹಂತವಾಗಿ ಕೇವಲ 15 ರೈಲುಗಳ 30 ಸಂಚಾರಕ್ಕೆ ಮಾತ್ರ ಅವಕಾಶ ನೀಡಿದೆ. ಅಲ್ಲದೆ, ಪ್ರಯಾಣಿಕರು ರೈಲಿನಲ್ಲಿ ಖಡ್ಡಾಯವಾಗಿ ಮಾಸ್ಕ್‌ ಬಳಸಬೇಕು, ಆರೋಗ್ಯ ಸೇತು ಆಪ್ ಬಳಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರಯಾಣಕ್ಕೂ ಮುನ್ನ ಸ್ಕ್ರೀನಿಂಗ್‌ಗೆ ಒಳಗಾಗಿ ಕೊರೋನಾ ಸೋಂಕು ಇಲ್ಲ ಎಂದು ದೃಢಪಟ್ಟರೆ ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಹತ್ತಾರು ಷರತ್ತುಗಳನ್ನು ವಿಧಿಸಿದೆ.



ನಿನ್ನೆ ಸಂಜೆಯಿಂದಲೇ ರೈಲ್ವೆ ಇಲಾಖೆ IRCTC ಮೂಲಕ ಆನ್‌ಲೈನ್ ಬುಕ್ಕಿಂಗ್ ಆರಂಭಿಸಿತ್ತು. ಸಾವಿರಾರು ಜನ ಇಲ್ಲಿ ನೋಂದಾಯಿಸಿಕೊಂಡಿದ್ದು, 48 ದಿನಗಳ ನಂತರದ ಮೊದಲ ಪ್ರಯಾಣಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಸಿದ್ದತೆ ನಡೆಸಲಾಗಿದೆ.

ಇದನ್ನೂ ಓದಿ : Indian Railways: ಇಂದಿನಿಂದ 15 ಪ್ಯಾಸೆಂಜರ್‌ ರೈಲಿನ ಬುಕ್ಕಿಂಗ್ ಆರಂಭ; ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು
First published: