Indian Railways: ಇಂದಿನಿಂದ 15 ಪ್ಯಾಸೆಂಜರ್‌ ರೈಲಿನ ಬುಕ್ಕಿಂಗ್ ಆರಂಭ; ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು

IRCTC Booking: ಪ್ರಯಾಣಿಕರು ಮಾಸ್ಕ್ ಧರಿಸಬೇಕು ಮತ್ತು ನಿರ್ಗಮನದ ಸಮಯದಲ್ಲಿ ಸ್ಕ್ರೀನಿಂಗ್‌ಗೆ ಒಳಗಾಗುವುದು ಕಡ್ಡಾಯವಾಗಿರುತ್ತದೆ. ರೋಗ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವ ದೆಹಲಿ (ಮೇ 11); ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಪ್ರಯಾಣ 51 ದಿನಗಳ ನಂತರ ಮಂಗಳವಾರದಿಂದ (ಮೇ.12) ಪುನರ್ ಆರಂಭವಾಗಲಿದೆ. ಪ್ರಾರಂಭಿಕ ಹಂತದಲ್ಲಿ ಕೇವಲ 15 ವಿಶೇಷ ರೈಲುಗಳು ಮಾತ್ರ ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮತ್ತು ಸಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಇಂದು ಸಂಜೆ 04 ಗಂಟೆಯಿಂದ ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಭಾರತದಲ್ಲಿ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಕೆಲವೇ ಬಹುಮುಖ್ಯ ಪ್ರದೇಶಗಳಿಗೆ ಮಾತ್ರ ರೈಲ್ವೆ ಸೇವೆ ಆರಂಭಿಸಲಾಗಿದೆ. ಸತತ ಮೂರು ಹಂತದಲ್ಲಿ ಲಾಕ್‌ಡೌನ್ ನಿಯಮಗಳನ್ನು ಭಾರತದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಆದರೂ, ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕ್ರಮೇಣ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ರೈಲು ಸೇವೆಗಳ ಪುನರಾರಂಭದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:

ಪ್ಯಾಸೆಂಜರ್ ರೈಲುಗಳನ್ನು ಹೇಗೆ ಮರು ಪ್ರಾರಂಭಿಸಲಾಗುವುದು?

ಪ್ರಯಾಣಿಕರ ರೈಲುಗಳು ನವದೆಹಲಿ ರೈಲ್ವೆ ನಿಲ್ದಾಣದಿಂದ ಹೊರಟು ಮುಂಬೈ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ಅಹಮದಾಬಾದ್, ಹೌರಾ, ತಿರುವನಂತಪುರಂ, ಪಾಟ್ನಾ, ಜಮ್ಮು, ದಿಬ್ರುಗರ್, ಅಗರ್ತಲಾ, ಬಿಲಾಸ್ಪುರ, ರಾಂಚಿ, ಭುವನೇಶ್ವರ ಮತ್ತು ಮಡ್ಗಾಂವ್‌ಗೆ ಸಂಪರ್ಕ ಕಲ್ಪಿಸಲಿವೆ.

ಟಿಕೆಟ್‌ಗಳನ್ನು ಹೇಗೆ ಬುಕ್ ಮಾಡಬಹುದು?

ಈ ರೈಲುಗಳಿಗೆ ಟಿಕೆಟ್ ಬುಕಿಂಗ್ ಮೇ 11 ರಂದು ಸಂಜೆ 4 ಗಂಟೆಗೆ ಪ್ರಾರಂಭವಾಗಲಿದ್ದು, ಐಆರ್‌ಸಿಟಿಸಿ ವೆಬ್‌ಸೈಟ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಬುಕಿಂಗ್ ಕೌಂಟರ್‌ಗಳು ಮುಚ್ಚಲ್ಪಟ್ಟಿರುತ್ತವೆ ಮತ್ತು ಯಾವುದೇ ಕೌಂಟರ್‌ಗಳಲ್ಲೂ ಟಿಕೆಟ್‌ಗಳನ್ನು (ಪ್ಲಾಟ್‌ಫಾರ್ಮ್‌ ಟಿಕೆಟ್ ಸೇರಿದಂತೆ) ನೀಡಲಾಗುವುದಿಲ್ಲ.

ರೈಲ್ವೆ ಬೋಗಿಗಳು ಸಂಪೂರ್ಣ ಸಾಮರ್ಥ್ಯದಲ್ಲಿರುತ್ತವೆಯೇ?

ಒಂದು ರೈಲಿನ ಬೋಗಿಯಲ್ಲಿ 72 ಆಸನ ಇರುತ್ತದೆ. ಆದರೆ, ಶ್ರಮಿಕ್ ರೈಲಿನಲ್ಲಿ ಕೇವಲ 54 ಪ್ರಯಾಣಿಕರನ್ನು ಮಾತ್ರ ಅನುಮತಿಸಲಾಗಿತ್ತು. ಈ ವಿಶೇಷ ರೈಲು ಶ್ರಮಿಕ್ ರೈಲಿನಂತಲ್ಲದೆ 72 ಜನ ಪ್ರಯಾಣಿಕರೊಂದಿಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಶುಲ್ಕದಲ್ಲೂ ಯಾವುದೇ ರಿಯಾಯಿತಿ ಇರುವುದಿಲ್ಲ.

ಪಾಸೆಂಜರ್‌ಗಳು ಯಾವ ನಿಯಮಗಳನ್ನು ಪಾಲಿಸಬೇಕು?

ರೈಲು ನಿರ್ಗಮನಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಪ್ರಯಾಣಿಕರು ನಿಲ್ದಾಣಕ್ಕೆ ಬರಬೇಕಾಗುತ್ತದೆ. ಆರಂಭದಲ್ಲಿ, ಎಲ್ಲಾ ಹವಾನಿಯಂತ್ರಿತ ಸೇವೆಗಳು 15 ರಾಜಧಾನಿ ಮಾರ್ಗಗಳಲ್ಲಿ ಪ್ರಾರಂಭವಾಗಲಿದ್ದು, ಶುಲ್ಕವು ಸೂಪರ್-ಫಾಸ್ಟ್ ರೈಲಿಗೆ ಸಮನಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ ಪ್ರಯಾಣಿಕರಿಗೆ ನೀಡುವ ಟಿಕೆಟ್‌ನಲ್ಲಿ ಏನು ಮಾಡಬೇಕು? ಮತ್ತು ಏನು ಮಾಡಬಾರದು? ಎಂಬ ಸಂಪೂರ್ಣ ವಿವರವನ್ನು ಮುದ್ರಿಸಲಾಗಿರುತ್ತದೆ.- ಉದಾಹರಣೆಗೆ:- ಸ್ಕ್ರೀನಿಂಗ್ ಮತ್ತು ಇತರ ಕರೋನವೈರಸ್ ಪ್ರೋಟೋಕಾಲ್‌ಗಳಿಗಾಗಿ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಆಗಮಿಸುವುದು, ಮಾಸ್ಕ್‌ಗಳ ಕಡ್ಡಾಯ ಬಳಕೆ ಮತ್ತು ಆರೋಗ್ಯಾ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುಬೇಕು ಎಂದು ಸೂಚಿಸಲಾಗುತ್ತದೆ.

ಪ್ರಯಾಣಿಕರು ಮಾಸ್ಕ್ ಧರಿಸಬೇಕು ಮತ್ತು ನಿರ್ಗಮನದ ಸಮಯದಲ್ಲಿ ಸ್ಕ್ರೀನಿಂಗ್‌ಗೆ ಒಳಗಾಗುವುದು ಕಡ್ಡಾಯವಾಗಿರುತ್ತದೆ. ರೋಗ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ. ಪ್ರಯಾಣದ ಸಮಯದಲ್ಲಿ ಕೆಲವು ನಿಲುಗಡೆಗಳಲ್ಲಿ ಮಾತ್ರ ರೈಲನ್ನು ನಿಲ್ಲಿಸಲಾಗುವುದು.

ದೃಢಪಡಿಸಿದ ರೈಲ್ವೆ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ನಿಲ್ದಾಣಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗಳನ್ನು ಕ್ರಮೇಣ ವಿಸ್ತರಿಸಲಾಗುವುದು ಮತ್ತು ಹೊಸ ಮಾರ್ಗಗಳಲ್ಲಿ ಹೆಚ್ಚಿನ ವಿಶೇಷ ಸೇವೆಗಳನ್ನು ಘೋಷಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಮೇ 12ರಿಂದ ವಿಶೇಷ ರೈಲು ಸಂಚಾರ ಆರಂಭ: ನಾಳೆಯಿಂದ ಆನ್‌ಲೈನ್ ಬುಕಿಂಗ್ ಶುರು
First published: