ರೈಲು ಬೋಗಿಯೇ ಐಸೋಲೇಶನ್ ವಾರ್ಡ್; ಹೀಗಿರುತ್ತೆ ಇಲ್ಲಿನ ವ್ಯವಸ್ಥೆ

ಎರಡು ಟಾಯ್ಲೆಟ್​ಗಳನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗಿದೆ. ಕೆಳಗಿನ ಬರ್ತ್​ನಲ್ಲಿ ರೋಗಿಯನ್ನು ಇರಿಸಿಕೊಳ್ಳಬಹುದು.

ಐಸೋಲೇಶನ್ ವಾರ್ಡ್​ಗಳಾಗಿರುವ ರೈಲು ಬೋಗಿಗಳು

ಐಸೋಲೇಶನ್ ವಾರ್ಡ್​ಗಳಾಗಿರುವ ರೈಲು ಬೋಗಿಗಳು

 • News18
 • Last Updated :
 • Share this:
  ನವದೆಹಲಿ(ಮಾ. 28): ಕೊರೋನಾ ವೈರಸ್ ಹರಡದಂತೆ ತಡೆಯುವ ಕ್ರಮವಾಗಿ 21 ದಿನಗಳ ಲಾಕ್ ಡೌನ್ ಮಾಡಲಾಗುತ್ತಿದೆ. ಆದರೆ, ಕೊರೋನಾ ನಿಗ್ರಹಕ್ಕೆ ಬೇಕಾದ ಮೂಲ ಸೌಕರ್ಯದ ಕೊರತೆ ದೇಶಕ್ಕೆ ಕಾಡುತ್ತಿದೆ. ಪರೀಕ್ಷಾ ಲ್ಯಾಬ್​ಗಳು, ಐಸೋಲೇಶನ್ ವಾರ್ಡ್​ಗಳು, ಮಾಸ್ಕ್, ವೆಂಟಿಲೇಟರ್​ಗಳು ಇತ್ಯಾದಿಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ತನ್ನ ರೈಲುಗಳನ್ನೇ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆ ಮಾಡಲು ಮುಂದಾಗಿದೆ.

  ಲಾಕ್ ಡೌನ್ ಘೋಷಣೆಗೂ ಮುನ್ನವೇ ರೈಲ್ವೆ ಇಲಾಖೆ ತನ್ನ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಏಪ್ರಿಲ್ 14ರವರೆಗೂ ರೈಲು ಸ್ಥಗಿತಗೊಳ್ಳುತ್ತಿದೆ. ಇದೇ ವೇಳೆ, ದೇಶಾದ್ಯಂತ ಕೊರೋನಾ ಶಂಕಿತರು ಮತ್ತು ಸೋಂಕಿತರ ಚಿಕಿತ್ಸೆಗೆ ಐಸೋಲೇಶ್ ವಾರ್ಡ್​ಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನಲ್ಲಿರುವ ಅಪಾರ ಪ್ರಮಾಣದ ರೈಲುಗಳನ್ನ ಐಸೋಲೇಶನ್ ವಾರ್ಡ್​ಗಳಾಗಿ ಬಳಕೆ ಮಾಡುವ ಆಫರ್ ಮುಂದಿಟ್ಟಿದೆ. ರೈಲಿನಲ್ಲಿರುವ ವಿವಿಧ ಬೋಗಿಗಳನ್ನ ಐಸೋಲೇಶನ್ ವಾರ್ಡ್​ಗಳಾಗಿ ಮಾರ್ಪಾಡು ಮಾಡಲು ಸಿದ್ಧ ಎಂದು ಇಲಾಖೆ ಹೇಳಿದೆ. ಈಗಾಗಲೇ ಕೆಲ ಪ್ರೋಟೋಟೈಪ್​ಗಳನ್ನ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಿಕೊಟ್ಟಿದೆ.

  ಇದನ್ನೂ ಓದಿ: ಕೊರೋನಾ ಭೀತಿ: ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್​​ಗಳಾಗಿ ಮಾಡಲು ನಿರ್ಧಾರ

  Isolation ward in Indian rail coach
  ರೈಲ್ವೆ ಬೋಗಿಯ ಐಸೋಲೇಶನ್ ವಾರ್ಡ್​ನ ಒಂದು ಚಿತ್ರ


  ಹೇಗಿದೆ ಈ ಪ್ರೋಟೋಟೈಪ್?:

  ಈ ಪ್ರೋಟೋಟೈಪ್ ತಯಾರಿಸಲು ರೈಲ್ವೆ ಇಲಾಖೆ ನಾನ್ ಎಸಿ ಕೋಚ್ ಆರಿಸಿಕೊಂಡಿದೆ. ಇದರಲ್ಲಿ 10 ಕ್ಯಾಬಿನ್​ಗಳಿವೆ. ಒಂದು ಕ್ಯಾಬಿನ್​ನಲ್ಲಿ 3 ಭಾರತೀಯ ಶೈಲಿಯದ್ದು ಸೇರಿ 4 ಶೌಚಾಲಯಗಳಿವೆ. ಎರಡು ಟಾಯ್ಲೆಟ್​ಗಳನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗಿದೆ. ಕೆಳಗಿನ ಬರ್ತ್​ನಲ್ಲಿ ರೋಗಿಯನ್ನು ಇರಿಸಿಕೊಳ್ಳಬಹುದು. ರೋಗಿ ಇರುವ ಬರ್ತ್​ನ ಎದುರಿಗಿರುವ ಎಲ್ಲಾ 3 ಬರ್ತ್​ಗಳನ್ನ ತೆಗೆದುಹಾಕಲಾಗಿದೆ. ಮಧ್ಯ ಮತ್ತು ಮೇಲಿನ ಬರ್ತ್​ಗಳಿಗೆ ಹೋಗಲು ಉಪಯೋಗಿಸುವ ಏಣಿಯನ್ನು ತೆಗೆದುಹಾಕಲಾಗಿದೆ. ಒಂದು ಕಡೆ ಮಿಡಲ್ ಬರ್ತನ್ನೂ ತೆಗೆದುಹಾಕಲಾಗಿದೆ.

  Railway toilet converted into bathroom
  ಟಾಯ್ಲೆಟ್ ಅನ್ನು ಸ್ನಾನದ ಕೊಠಡಿಯಾಗಿ ಮಾರ್ಪಡಿಸಿರುವುದು


  ಪೇಷೆಂಟ್ ಇರುವ ಕ್ಯಾಬಿನ್​ನಲ್ಲೂ ಮೇಲೇರುವ ಏಣಿಯನ್ನು ತೆಗೆಯಲಾಗಿದೆ. ಪ್ಲಾಸ್ಟಿಕ್ ಕರ್ಟನ್​ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ. ಹೆಚ್ಚುವರಿ ಬಾಟಲ್ ಹೋಲ್ಡರ್​ಗಳು, ಕೋಟ್ ಹ್ಯಾಂಗರ್​ಗಳನ್ನು ಹಾಕಲಾಗಿದೆ. ಮೆಡಿಕಲ್ ಉಪಕರಣ ಇಟ್ಟುಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ.

  ಇಂಡಿಯನ್ ಸ್ಟೈಲ್ ಟಾಯ್ಲೆಟ್​ಗಳನ್ನು ಬಾಥ್ ರೂಮ್ ಆಗಿ ಪರಿವರ್ತಿಸಲಾಗಿದೆ. ಟ್ಯಾಪ್​ನ ಎತ್ತರವನ್ನು ಹೆಚ್ಚಿಸಲಾಗಿದೆ. ಹ್ಯಾಂಡ್  ಶವರ್​ಗಳನ್ನ ಹಾಕಲಾಗಿದೆ.

  Indian railways isolation ward
  ಐಸೋಲೇಶನ್ ವಾರ್ಡ್​ನ ಒಂದು ದೃಶ್ಯ


  ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ಕೊಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.

  ಈ ಮಾದರಿಗೆ ಕೇಂದ್ರ ಸರ್ಕಾರ ಒಪ್ಪಿದರೆ ರೈಲ್ವೆ ಇಲಾಖೆಯು ತನ್ನಲ್ಲಿರುವ 20 ಸಾವಿರ ಬೋಗಿಗಳನ್ನು 10 ಸಾವಿರ ಐಸೋಲೇಶನ್ ವಾರ್ಡ್​ಗಳಾಗಿ ಮಾರ್ಪಡಿಸಬಹುದು. ಇದರಿಂದ ಕೊರೋನಾ ಎದುರಿಸಲು ಹೆಚ್ಚು ಸಹಾಯಕವಾಗುವ ನಿರೀಕ್ಷೆ ಇದೆ. ರೈಲ್ವೆ ಇಲಾಖೆ ತನ್ನ ರೈಲು ಸಂಚಾರ ಸ್ಥಗಿತಗೊಳಿಸಿದ್ದರೂ ತನ್ನಲ್ಲಿರುವ ಉತ್ಪಾದಕ ವ್ಯವಸ್ಥೆ ಬಳಸಿಕೊಂಡು ವೆಂಟಿಲೇಟರ್, ಮಾಸ್ಕ್ ಇತ್ಯಾದಿ ತಯಾರಿಸಲು ಮುಂದಾಗಿದೆ.

  First published: