Indian Railways: ಇಂದಿನಿಂದ ಅಂತರರಾಜ್ಯ ರೈಲು ಸಂಚಾರ ಪ್ರಾರಂಭ; ಇಲ್ಲಿದೆ ಮಾರ್ಗಗಳ ವಿವರ

IRCTC Bookings: ಪ್ರಮುಖವಾಗಿ ದೆಹಲಿ ಹಾಗೂ ಮುಂಬೈನಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್​​ನಲ್ಲಿ ಇರಿಸಲಾಗುತ್ತದೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್​ನಲ್ಲಿ ಇರಿಸಲು ನಿರ್ಧರಿಸಲಾಗಿದೆ.

Latha CG | news18-kannada
Updated:June 1, 2020, 8:42 AM IST
Indian Railways: ಇಂದಿನಿಂದ ಅಂತರರಾಜ್ಯ ರೈಲು ಸಂಚಾರ ಪ್ರಾರಂಭ; ಇಲ್ಲಿದೆ ಮಾರ್ಗಗಳ ವಿವರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ 01): ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆ ಹಂತ-ಹಂತವಾಗಿ ಸಂಚಾರ ವ್ಯವಸ್ಥೆ ಪ್ರಾರಂಭವಾಗುತ್ತಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳ ಸಂಚಾರ ಮತ್ತು ರಾಜ್ಯದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರ ಈಗಾಗಲೇ ಶುರುವಾಗಿದೆ. ಇನ್ನು, ರೈಲುಗಳ ವಿಚಾರ ನೋಡಿದರೆ ರಾಜ್ಯದೊಳಗೆ ಸಂಚರಿಸುವ ರೈಲುಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ಇದರ ಜೊತೆಗೆ ಇಂದಿನಿಂದ ಅಂತರರಾಜ್ಯ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.

ಇಂದಿನಿಂದ ದೇಶಾದ್ಯಂತ ಅಂತರರಾಜ್ಯ ರೈಲು ಸೇವೆ ಆರಂಭವಾಗಿದೆ. ರಾಜ್ಯದಲ್ಲಿ 16 ವಿಶೇಷ ರೈಲುಗಳು ತಮ್ಮ ಸಂಚಾರ ಪ್ರಾರಂಭಿಸಲು ಸನ್ನದ್ಧವಾಗಿವೆ. ದೇಶಾದ್ಯಂತ ಒಟ್ಟು 200 ರೈಲುಗಳು ಸಂಚಾರ ಆರಂಭಿಸಿವೆ. ಸುಮಾರು 72 ದಿನಗಳ ಬಳಿಕ ಅಂತರರಾಜ್ಯ ರೈಲು ಸಂಚಾರ ಶುರುವಾಗಿದೆ.  

ಸುಮಾರು ‌ಒಂದೂವರೆ ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಲಿದ್ದು, ಈಗಾಗಲೇ ಜೂನ್ 30ರವರೆಗೆ 26 ಲಕ್ಷ ಟಿಕೆಟ್ ಬುಕಿಂಗ್ ಆಗಿದೆ. ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯ. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು‌ ಕೂಡ ಕಡ್ಡಾಯ. ಎಸಿ‌‌‌‌ ಕೋಚ್ ಗಳಲ್ಲಿ ಬೆಡ್ ಶೀಟ್ ನೀಡಲಾಗುವುದಿಲ್ಲ. ಪ್ಯಾಕ್ ಮಾಡಿದ ಆಹಾರಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರೈಲ್ವೆ ಸಚಿವಾಲಯವು ಪ್ರಯಾಣಿಕರಿಗೆ ಕೆಲ ನಿರ್ಬಂಧ ಏರಿದೆ.

ಬೆಂಗಳೂರು - ಶಿವಮೊಗ್ಗ, ಬೆಂಗಳೂರು - ಹುಬ್ಬಳ್ಳಿ, ಮುಂಬೈ - ಗದಗ, ಮುಂಬೈ - ಬೆಂಗಳೂರು ಸೇರಿ ಹಲವು ಮಾರ್ಗಗಳ ರೈಲು ಸೇವೆ ಇಂದಿನಿಂದ ಆರಂಭವಾಗಿದೆ.

ಮುಂಬೈ- ಬೆಂಗಳೂರು  (ಟ್ರೈನ್ ನಂ 01301)

ಮುಂಬೈ- ಗದಗ (ಟ್ರೈನ್ ನಂಬರ್ 01139)

ಬೆಂಗಳೂರು- ದಾನಪುರ (ಟ್ರೈನ್ ನಂಬರ್    02295)ಹಬ್ಬಳ್ಳಿ-ನಿಜಾಮುದ್ದೀನ್ (ಟ್ರೈನ್ ನಂಬರ್  07305)

ಯಶವಂತಪುರ- ಶಿವಮೊಗ್ಗ (ಟ್ರೈನ್ ನಂಬರ್   02089)

ಹುಬ್ಬಳ್ಳಿ- ಬೆಂಗಳೂರು   (ಟ್ರೈನ್ ನಂಬರ್   02080)

ಬೆಂಗಳೂರು- ಹುಬ್ಬಳ್ಳಿ  (ಟ್ರೈನ್ ನಂಬರ್    02079)

ಹೌರಾ-ಯಶವಂತಪುರ ನಡುವೆ ರೈಲು ಸಂಚಾರ ಆರಂಭವಾಗಿದೆ.

ನಗರದಲ್ಲಿ ಇಂದಿನಿಂದ ಸಂಚಾರ ಆರಂಭಿಸಿದ ಬಿಎಂಟಿಸಿ ವೋಲ್ವೋ ಬಸ್​ಗಳು

ಪ್ರಮುಖವಾಗಿ ದೆಹಲಿ ಹಾಗೂ ಮುಂಬೈನಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ಕ್ವಾರಂಟೈನ್​​ನಲ್ಲಿ ಇರಿಸಲಾಗುತ್ತದೆ. ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್​ನಲ್ಲಿ ಇರಿಸಲು ನಿರ್ಧರಿಸಲಾಗಿದೆ.

ಇಂದಿನಿಂದ ಅಂತರರಾಜ್ಯ ರೈಲು ಸೇವೆ ಆರಂಭವಾದ ಹಿನ್ನಲೆ, ನೂರಾರು ಮಂದಿ ರೈಲಿಗಾಗಿ ಕಾಯುತ್ತಿರುವ ದೃಶ್ಯ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಕಂಡು ಬಂದಿತು. ರೈಲ್ವೆ ನಿಲ್ದಾಣದ ಬಳಿ ಬ್ಯಾರಿಕೇಡ್ ಹಾಕಿರುವುದರಿಂದ ಹೊರಗೆ ಸಾಕಷ್ಟು ಪ್ರಯಾಣಿಕರು ಕಾಯುತ್ತಿದ್ದಾರೆ. ಪ್ರತಿಯೊಬ್ಬರ ಟಿಕೆಟ್ ಹಾಗೂ ಮಾಸ್ಕ್ ಚೆಕ್ ಮಾಡಿ ಒಳ ಬಿಡಬೇಕಾದ ಹಿನ್ನಲೆ, ರೈಲ್ವೆ ನಿಲ್ದಾಣದ ಮುಂದೆ ಜನದಟ್ಟಣೆ ಹೆಚ್ಚಾಗಿದೆ.

ಇಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲು ಸಂಚಾರ ಆರಂಭಿಸಿದೆ. ಇಂದು ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್​​ನಿಂದ ದಾನಾಪುರ್​​ಗೆ ರೈಲು ಹೊರಡಲಿದೆ. ಇನ್ನು ರಾತ್ರಿ 8.30ಕ್ಕೆ ಮೆಜೆಸ್ಟಿಕ್​ನಿಂದ ದೆಹಲಿಗೆ ರೈಲು ಸಂಚಾರ ಪ್ರಾರಂಭಿಸಲಿದೆ.
First published: June 1, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading