ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 4 ವಿಶೇಷ ಶ್ರಮಿಕ್​​​​ ರೈಲು: 6 ಸಾವಿರ ವಲಸಿಗರು ತಾಯ್ನಾಡಿಗೆ ವಾಪಸ್​​​

Shramik Train: ಸೇವಾ ಸಿಂಧು ಪೋರ್ಟಲ್ ಮೂಲಕ ಮೊದಲು ವಲಸಿಗರು ಹೆಸರು ನೋಂದಣಿ ಮಾಡಬೇಕು. ಅವರ ತವರು ರಾಜ್ಯದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿಗಾಗಿ ಸರ್ಕಾರ ಬೇಡಿಕೆ ಇಡುತ್ತದೆ. ವಲಸಿಗರಿಗೆ ಯಾವುದೇ ಟಿಕೆಟ್ ಇಲ್ಲ. ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ತವರಿಗೆ ವಾಪಸ್ ಆಗಬಹುದಾಗಿದೆ.

news18-kannada
Updated:May 20, 2020, 8:55 AM IST
ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 4 ವಿಶೇಷ ಶ್ರಮಿಕ್​​​​ ರೈಲು: 6 ಸಾವಿರ ವಲಸಿಗರು ತಾಯ್ನಾಡಿಗೆ ವಾಪಸ್​​​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮೇ.20): ಕೋವಿಡ್​​​-19 ಲಾಕ್​ಡೌನ್​​ನಿಂದ ಲಕ್ಷಾಂತರ ವಲಸೆ ಕಾರ್ಮಿಕರು ತವರಿಗೆ ಮರಳಲಾಗದೆ ಇನ್ನೂ ದೇಶದ ಪ್ರಮುಖ ನಗರಗಳಲ್ಲೇ ಸಿಲುಕಿಕೊಂಡಿದ್ದಾರೆ. ಇಂತಹ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು ತವರು ರಾಜ್ಯಕ್ಕೆ ವಾಪಸ್ಸಾಗಲು ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇಲಾಖೆ  ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರಗಳು ತಮ್ಮಲ್ಲಿರುವ ವಲಸೆ ಕಾರ್ಮಿಕರನ್ನು ತಮ್ಮ ತವರಿಗೆ ಈ ಶ್ರಮಿಕ್​​ ರೈಲಿನ ಮೂಲಕ ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಹತ್ತಾರು ವಲಸೆ ಕಾರ್ಮಿಕರು ತಮ್ಮ ಊರಿಗಳಿಗೆ ವಾಪಸ್ಸಾಗಿದ್ದಾರೆ.

ಇಂದು ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ನಾಲ್ಕು ವಿಶೇಷ ಶ್ರಮಿಕ್ ರೈಲು ಹೊರಟಿವೆ. ಈ ರೈಲಿನಲ್ಲಿ ಹೊರಡಲು ಸಜ್ಜಾದವರು ಸೇವಾ ಸಿಂಧು ಪೋರ್ಟಲ್ ಎನ್ನುವ ಆ್ಯಪ್​​ನಲ್ಲಿ ನೊಂದಾಯಿಸಿಕೊಂಡವರು. ಹೀಗೆ ನೊಂದಾಯಿಸಿಕೊಂಡ ಸಾವಿರಾರು ವಲಸೆ ಕಾರ್ಮಿಕರು ಲಗೇಜ್​​​ ಸಮೇತ ತವರಿಗೆ ರೈಲಿನಲ್ಲಿ ಹೊರಟಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ಗೆ ಮಧ್ಯಾನ 2ಕ್ಕೆ 1500, ಉತ್ತರ ಪ್ರದೇಶದ ಮೌ ಎಂಬ ಪ್ರದೇಶಕ್ಕೆ ಸಂಜೆ 4ಕ್ಕೆ 1500 ಮತ್ತು ಉ.ಪ್ರ ಬಸ್ತಿಗೆ ಸಂಜೆ 6ಕ್ಕೆ 1500 ವಲಸಿಗರು ಹೊರಟಿದ್ದಾರೆ. ಜತೆಗೆ ಉತ್ತರಕಾಂಡದ ಹರಿದ್ವಾರಕ್ಕೆ ರಾತ್ರಿ 8ಕ್ಕೆ 1500 ಪ್ರಯಾಣಿಕರು ತೆರಳಿದ್ದಾರೆ. ಇನ್ನು ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಾಗೂ ಉತ್ತರ ವಿಭಾಗದ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: WHO ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್

ಸೇವಾ ಸಿಂಧು ಪೋರ್ಟಲ್ ಮೂಲಕ ಮೊದಲು ವಲಸಿಗರು ಹೆಸರು ನೋಂದಣಿ ಮಾಡಬೇಕು. ಅವರ ತವರು ರಾಜ್ಯದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿಗಾಗಿ ಸರ್ಕಾರ ಬೇಡಿಕೆ ಇಡುತ್ತದೆ. ವಲಸಿಗರಿಗೆ ಯಾವುದೇ ಟಿಕೆಟ್ ಇಲ್ಲ. ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ತವರಿಗೆ ವಾಪಸ್ ಆಗಬಹುದಾಗಿದೆ.
First published: May 20, 2020, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading