Indian Railways: ಜೂನ್ 30ವರೆಗೂ ರೈಲು ಸಂಚಾರ ರದ್ದು; ರೈಲ್ವೆ ಇಲಾಖೆ ಘೋಷಣೆ

IRCTC Special Trains: ಮೂರನೇ ಹಂತದ ಲಾಕ್​ಡೌನ್​ ಪೂರ್ಣಗೊಂಡ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಇಲಾಖೆ ಹೇಳಿತ್ತು. ಅಲ್ಲದೆ, ಆನ್​ಲೈನ್ ಬುಕ್ಕಿಂಗ್​​ಗೂ ಅವಕಾಶ ನೀಡಿತ್ತು.

 ಸಾಂರ್ಭಿಕ ಚಿತ್ರ

ಸಾಂರ್ಭಿಕ ಚಿತ್ರ

 • Share this:
  ನವದೆಹಲಿ (ಮೇ 14): ಕೊರೋನಾ ವೈರಸ್​ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮುಂದುವರಿಯುತ್ತಲೇ ಇದೆ. ಹೀಗಾಗಿ, ಜೂನ್​ 30ರವರೆಗೂ ರೈಲು ಸಂಚಾರವನ್ನು ರದ್ದು ಮಾಡಿರುವುದಾಗಿ ರೈಲ್ವೆ ಇಲಾಖೆ ಘೋಷಣೆ ಮಾಡಿದೆ. ಮೂರನೇ ಹಂತದ ಲಾಕ್​ಡೌನ್​ ಪೂರ್ಣಗೊಂಡ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಇಲಾಖೆ ಹೇಳಿತ್ತು. ಅಲ್ಲದೆ, ಆನ್​ಲೈನ್ ಬುಕ್ಕಿಂಗ್​​ಗೂ ಅವಕಾಶ ನೀಡಿತ್ತು. ಆದರೆ, ಈಗ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜೂನ್​ 30ರವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ಹೇಳಿದೆ. ಈಗಾಗಲೇ ಬುಕ್​ ಮಾಡಲಾದ ಟಿಕೆಟ್​ಗಳನ್ನು ಕ್ಯಾನ್ಸಲ್​ ಮಾಡಿ ಹಣ ಹಿಂದಿರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  ಇನ್ನು, ಶ್ರಮಿಕ್​ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ರೈಲಿನ ಮೂಲಕ ಆಯಾ ರಾಜ್ಯಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಈ ರೈಲುಗಳು ನಿಗಧಿತ ಸಮಯಕ್ಕೆ ಸಂಚಾರ ನಡೆಸಲಿವೆ.

  ಇದನ್ನೂ ಓದಿ: ಕೊರೋನಾ ಎಫೆಕ್ಟ್​​​: ದೇಶಾದ್ಯಂತ ಏ.14ರವರೆಗೂ ರೈಲು ಸಂಚಾರ ಸ್ತಬ್ಧ; ರೈಲ್ವೆ ಇಲಾಖೆ ಅಧಿಕೃತ ಆದೇಶ

  ಮೇ 17ಕ್ಕೆ ಮೂರನೇ ಹಂತದ ಲಾಕ್​ಡೌನ್​ ಪೂರ್ಣಗೊಳ್ಳಲಿದೆ. ಹೀಗಾಗಿ, ಕೆಲ ಪ್ರದೇಶಗಳಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲು ರೈಲ್ವೆ ಇಲಾಖೆ ಮುಂದಾಗಿತ್ತು. ಆದರೆ, ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಲಾಕ್​ಡೌನ್​ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬಂದಿದೆ.
  First published: