ಏ.15ರ ನಂತರ ಹಂತಹಂತವಾಗಿ ರೈಲು ಸಂಚಾರ ಆರಂಭಿಸುವಂತೆ ವಲಯಗಳಿಗೆ ಸೂಚನೆ ನೀಡಿದ ಭಾರತೀಯ ರೈಲ್ವೆ

ಏಪ್ರಿಲ್ 15 ರ ನಂತರ ಶೇ. 100ರಷ್ಟು ಸಾಮಾನ್ಯ ಸೇವೆಗಳನ್ನು ಅಂದರೆ 13,000 ರೈಲುಗಳನ್ನು ಒಂದೇ ಬಾರಿಗೆ ಪುನರಾರಂಭಿಸುವ ಬಗ್ಗೆ ಸರ್ಕಾರದ ಜೊತೆ ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಲಾಕ್​ಡೌನ್​ನಿಂದಾಗಿ ರದ್ದುಗೊಂಡಿರುವ ರೈಲು ಸಂಚಾರವನ್ನು ವಲಯವಾರು ಹಂತಹಂತವಾಗಿ ಪುನರಾರಂಭಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಮಂಡಳಿ ಸಿದ್ಧಪಡಿಸುತ್ತಿದೆ. ಈ ಸಂಬಂಧ ಆಯಾ ವಲಯಗಳಿಗೂ ಮಂಡಳಿ ಸೂಚನೆ ನೀಡಿದೆ. ಆದರೆ ಈ ವಿಷಯದ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

  ರೈಲ್ವೆ ಮಂಡಳಿ ಈ ಕುರಿತು ಸರ್ಕಾರದ ಸೂಚನೆಗಾಗಿ ಕಾಯುತ್ತಿರುವುದರಿಂದ, ಏಪ್ರಿಲ್ 14 ರ ನಂತರ ಹಂತಹಂತವಾಗಿ ಸೇವೆಗಳನ್ನು ಪುನರಾರಂಭಿಸಲು ಯೋಜನೆ ಸಿದ್ಧಪಡಿಸಿ ಅದನ್ನು ಸಚಿವಾಲಯಕ್ಕೆ ಸಲ್ಲಿಸುವಂತೆ ತನ್ನ ವಲಯಗಳಿಗೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

  ಏಪ್ರಿಲ್ 15 ರ ನಂತರ ಶೇ. 100ರಷ್ಟು ಸಾಮಾನ್ಯ ಸೇವೆಗಳನ್ನು ಅಂದರೆ 13,000 ರೈಲುಗಳನ್ನು ಒಂದೇ ಬಾರಿಗೆ ಪುನರಾರಂಭಿಸುವ ಬಗ್ಗೆ ಸರ್ಕಾರದ ಜೊತೆ ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

  ಲಾಕ್ ಡೌನ್ ಮುಗಿದ ನಂತರ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ.

  ಕೆಲವು ರೈಲುಗಳು ಪ್ರಾರಂಭವಾಗುತ್ತಿದ್ದರೂ ಸಹ, ಆ ರೈಲುಗಳು ಯಾವ ಅಂತರ್-ರಾಜ್ಯ ಮಾರ್ಗವನ್ನು ಸಂಪರ್ಕಿಸುತ್ತವೆ ಎಂಬುದರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಕೆಲವು ವಲಯ ಅಧಿಕಾರಿಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

  ಇದನ್ನು ಓದಿ: ಆಸ್ತಿ ಮಾರಿ ಲಾಕ್​ಡೌನ್ ಸಮಯದಲ್ಲಿ ಬಡವರಿಗೆ ನೆರವಾದ ಸಹೋದರರು; ಫೋನ್ ಮಾಡಿದರೆ ಮನೆಗೆ ಬರುತ್ತೆ ಉಚಿತ ರೇಷನ್!

  ಸರ್ಕಾರ ಯಾವ ರೀತಿಯಲ್ಲಿ ನಿರ್ಧರಿಸಿದರೂ ನಾವು ಸಿದ್ಧರಿದ್ದೇವೆ. ಆದರೆ ಎರಡೂ ಸನ್ನಿವೇಶಗಳಿಗೆ ನಮಗೆ ಒಂದು ತಂತ್ರ ಬೇಕು ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ವರದಿ: ಸಂಧ್ಯಾ ಎಂ


  First published: