Indian Railway: ಟಿಕೆಟ್ ಕಾಯ್ದಿರಿಸಲು ರೈಲ್ವೇ ನಿಗಮ ತಂದಿದೆ ಹೊಸ ನಿಯಮ

ನೀವು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಕೊಟ್ಟಿರುವ ಫೋನ್ ಸಂಖ್ಯೆಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಕಳುಹಿಸಲಾಗುತ್ತದೆ. ನೀವು ಒಟಿಪಿಯನ್ನು ನಮೂದಿಸಿದ ನಂತರ, ಫೋನ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ ನಂತರ ನೀವು ಆರಮವಾಗಿ ಟಿಕೆಟ್‌ ಅನ್ನು ಬುಕ್‌ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

    ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಿಂದ (ಐಆರ್‌ಸಿಟಿಸಿ) ಯಿಂದ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಖರೀದಿಸಲು ಆದ್ಯತೆ ನೀಡುವ ಪ್ರಯಾಣಿಕರು ಈಗ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ರೈಲ್ವೇ ಇಲಾಖೆ ತಿಳಿಸಿದೆ.


    ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಜನರು ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಪರಿಶೀಲಿಸಿದ ನಂತರವೇ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯು ಬೇಸರ ಹಾಗೂ ತಡ ಮಾಡುವುದಿಲ್ಲ ಅಥವಾ ಸಮಯ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಇದು ಕೇವಲ 50-60 ಸೆಕೆಂಡುಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ ಎಂದು ಭಾರತೀಯ ರೈಲ್ವೆ ನಿಗಮ ತಿಳಿಸಿದೆ.


    ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ದೀರ್ಘ ಸಮಯದಿಂದ ಪ್ರಯಾಣಿಕರು ಟಿಕೆಟ್ ಅನ್ನು ಕಾಯ್ದಿರಿಸಿಲ್ಲ. ಆ ರೀತಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೇಯ ಈ ಹೊಸ ನಿಯಮ ಅನ್ವಯವಾಗುತ್ತದೆ. ಅಂತಹ ಬಳಕೆದಾರರು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಟಿಕೆಟ್ ಖರೀದಿಸುವ ಮೊದಲು ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸೇಕಾಗುತ್ತದೆ. ಪ್ರಯಾಣಿಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲೇ ಬೇಕು ಇಲ್ಲವಾದರೆ ಅವರಿಗೆ ಟಿಕೆಟ್‌ ಸಿಗುವುದಿಲ್ಲ ಎಂದು ರೈಲ್ವೇ ತಿಳಿಸಿದೆ. ಆದರೆ, ನಿಯಮಿತವಾಗಿ ಟಿಕೆಟ್ ಕಾಯ್ದಿರಿಸುವವರಿಗೆ ಈ ನಿಯಮವು ಅನ್ವಯಿಸುವುದಿಲ್ಲ ಎಂದು ರೈಲ್ವೆ ನಿಗಮ ತಿಳಿಸಿದೆ.


    ಆನ್ಲೈನ್ನಲ್ಲಿ ಟಿಕೆಟ್​ ಬುಕ್ ಮಾಡುವುದು ಹೇಗೆ?


    ಐಆರ್‌ಸಿಟಿಸಿ ಭಾರತೀಯ ರೈಲ್ವೇ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ರಚಿಸಬೇಕಾಗುತ್ತದೆ. ಲಾಗಿನ್ ಪಾಸ್‌ವರ್ಡ್ ಕ್ರಿಯೇಟ್​ ಮಾಡಲು, ಪ್ರಯಾಣಿಕರು ತಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನೀವು ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು.


    ಇಮೇಲ್ ಐಡಿ ಮತ್ತು ಫೋನ್​ಸಂಖ್ಯೆಯನ್ನು ಪರಿಶೀಲನೆಯನ್ನು ಹೇಗೆ ಮಾಡಲಾಗುತ್ತದೆ?


    ಪ್ರಯಾಣಿಕರು ಐಆರ್‌ಸಿಟಿಸಿ ಪೋರ್ಟಲ್‌ಗೆ ಲಾಗ್ ಇನ್ ಮಾಡಿದಾಗ, ಪರಿಶೀಲನಾ ವಿಂಡೋ ಕಾಣಿಸುತ್ತದೆ. ಈಗಾಗಲೇ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ನಿರೀಕ್ಷೆಯಿಂದ ಅದಕ್ಕೆ ಸೂಕ್ತವಾದ ರೀತಿಯಲ್ಲಿ ವಿಂಡೋವನ್ನು ರಚಿಸಿದ್ದಾರೆ. ಪರಿಶೀಲನೆ ವಿಂಡೋದಲ್ಲಿ, ಬಲಭಾಗದಲ್ಲಿ ಪರಿಶೀಲನೆಯ ಆಯ್ಕೆ ಮತ್ತು ಎಡಭಾಗದಲ್ಲಿ ಎಡಿಟ್‌ ಆಯ್ಕೆ ಇದೆ. ಇಮೇಲ್ ಮತ್ತು ಫೋನ್ ಸಂಖ್ಯೆ ಸೇರಿದಂತೆ ವಿವರಗಳನ್ನು ಬದಲಾಯಿಸಲು ನೀವು ಬಯಸಿದರೆ, ನೀವು ಎಡಿಟ್‌ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಬಹುದು.


    ಇದನ್ನೂ ಓದಿ: ಒರಿಸ್ಸಾ: 3 ವರ್ಷದ ಬಾಲಕಿಯ ಮೇಲೆ 15 ವರ್ಷದ ಬಾಲಕನಿಂದ ಅತ್ಯಾಚಾರ

    ನೀವು ವಿವರಗಳೊಂದಿಗೆ ತೃಪ್ತರಾದಾಗ, ನೀವು ಪರಿಶೀಲನೆ ಆಯ್ಕೆಯನ್ನು ಆರಿಸಬೇಕು. ಇದರ ನಂತರ, ನೀವು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಕೊಟ್ಟಿರುವ ಫೋನ್ ಸಂಖ್ಯೆಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಕಳುಹಿಸಲಾಗುತ್ತದೆ. ನೀವು ಒಟಿಪಿಯನ್ನು ನಮೂದಿಸಿದ ನಂತರ, ಫೋನ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ ನಂತರ ನೀವು ಆರಮವಾಗಿ ಟಿಕೆಟ್‌ ಅನ್ನು ಬುಕ್‌ ಮಾಡಬಹುದು. ಇಮೇಲ್ ಐಡಿಯನ್ನು ಪರಿಶೀಲಿಸಲು ಇದೇ ರೀತಿಯ ಪ್ರಕ್ರಿಯೆಯನ್ನು ಅನ್ವಯಿಸಲಾಗುತ್ತದೆ ಎಂದು ರೈಲ್ವೆ ನಿಗಮ ತಿಳಿಸಿದೆ.


    ಜನರ ಸುರಕ್ಷತೆ ಉದ್ದೇಶಕ್ಕಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರವು ತಿಳಿಸಿದೆ ಹಾಗೂ ಇದಕ್ಕೆ ಜನರ ಸಹಕಾರ ಬೇಕು ಎಂದು ಕೋರಿದೆ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:HR Ramesh
    First published: