ಮಂಗಳೂರು: ರೈತರ ನೆರವಿಗೆ ನಿಂತ ಭಾರತೀಯ ರೈಲ್ವೆ ಇಲಾಖೆ

ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕೊಂಕಣ ರೈಲ್ವೇ ಮೂಲಕ ರಿಯಾಯಿತಿ ದರದಲ್ಲಿ ಸಾಗಿಸಲು ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ 25ರಿಂದ ಇದರ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ಮಂಗಳೂರು ರೈಲ್ವೆ

ಮಂಗಳೂರು ರೈಲ್ವೆ

  • Share this:
ಮಂಗಳೂರು(ಸೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳ್ಳಿಯ ಕೃಷಿಕರ ಬೆಳೆಗೆ ಮಾನ್ಯತೆ ನೀಡಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ದಳ್ಳಾಳಿತನ, ಸೂಕ್ತ ಬೆಲೆ ಸಿಗದ ಹಿನ್ನಲೆಯಲ್ಲಿ ದೇಶದ ಅತ್ಯುನ್ನತ ಮಾರುಕಟ್ಟೆಗಳಿಗೆ ರೈತರ ಬೆಳೆಗಳು ನೇರವಾಗಿ ಸಾಗಾಣೆಯಾಗಲಿದೆ. ಇದಕ್ಕಾಗಿ ಭಾರತೀಯ ರೈಲ್ವೇ ಇಲಾಖೆ ಕೈಜೋಡಿಸಿದೆ.

ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕೊಂಕಣ ರೈಲ್ವೇ ಮೂಲಕ ರಿಯಾಯಿತಿ ದರದಲ್ಲಿ ಸಾಗಿಸಲು ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ 25ರಿಂದ ಇದರ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಕೇಂದ್ರ ಸರ್ಕಾರ ಕಿಸಾನ್ ರೈಲು ಯೋಜನೆ ಆರಂಭಿಸಿದ್ದು, ಕೃಷಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಸೂಕ್ತ ಸಾಗಾಣಿಕ ಸೌಲಭ್ಯವಿದ್ದರೆ ದರ ಕುಸಿತ ತಡೆಯಲು ಸಾಧ್ಯ ಅನ್ನೋದು ಸರ್ಕಾರದ ಯೋಜನೆಯಾಗಿದೆ.

ಜಿಲ್ಲೆಯ ಚಾಲ್ತಿ ಆಡಿಕೆಗೆ ಗುಜರಾತ್ ಮಹಾರಾಷ್ಟ್ರದಲ್ಲಿ ಬಹು ಬೇಡಿಕೆಯಿದ್ದು,ಕೊಂಕಣ ರೈಲ್ವೇಯು ರಿಯಾಯಿತಿ ದರದಲ್ಲಿ ಸಾಗಾಟಕ್ಕೆ ಮುಂದೆ ಬಂದಿದೆ. ಇದರಿಂದ ಸಾಗಾಟ ವೆಚ್ಚ ಇಳಿಕೆಯಾಗಿ ಸಮಯ ಉಳಿತಾಯವಾಗಲಿದೆ.

ಅಡಿಕೆ ಮಾತ್ರವಲ್ಲದೆ ಕೊಕ್ಕೋ, ಗೇರು ಬೀಜ, ರಬ್ಬರ್, ಕರಿಮೆಣಸನ್ನು ಕೊಂಕಣ ರೈಲ್ವೇ ಮೂಲಕ ಸಾಗಾಟ ಮಾಡಬಹುದಾಗಿದೆ. ರೈಲ್ವೇ ಇಲಾಖೆ ಪುತ್ತೂರು ತಾಲೂಕನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಯೋಜನೆಗೆ ಸಿದ್ಧತೆ ಮಾಡಿದ್ದು, ನೆರೆಯ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕಿನ ಕೃಷಿಕರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಇದಕ್ಕಾಗಿ ಸ್ಥಳೀಯ ಎಪಿಎಂಸಿಯಲ್ಲಿ ತಾತ್ಕಾಲಿಕ ಗೋದಾಮು ವ್ಯವಸ್ಥೆ ಮಾಡಲಾಗುತ್ತದೆ.

ಇದನ್ನೂ ಓದಿ: ‘ಅಧಿಕಾರದ ಮತ್ತಿನಲ್ಲಿ ನನ್ನ ಬಗ್ಗೆ ಏನೇನೋ ಮಾತಾಡಿದರೆ ಚೆನ್ನಾಗಿರಲ್ಲ‘ - ಸಿಟಿ ರವಿಗೆ ಎಚ್​​.ಡಿ ಕುಮಾರಸ್ವಾಮಿ ಎಚ್ಚರಿಕೆ

ಕೇಂದ್ರ ಸರ್ಕಾರ ಕೊಂಕಣ ರೈಲ್ವೇ ಮೂಲಕ ಕೃಷಿ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮುಂಬೈ, ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಗೆ ಸಾಗಾಟ ಮಾಡಲಿದೆ. ಸಾಗಾಟದ ವೇಳೆಯಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಲಿದೆ. 48 ಗಂಟೆಯಲ್ಲಿ ರೈತರ ಬೆಳೆಗಳು ಸೂಕ್ತ ಸ್ಥಳವನ್ನು ತಲುಪಲಿದೆ.
Published by:Ganesh Nachikethu
First published: