ಭಾರತೀಯ ನೌಕಾಪಡೆಯಿಂದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ; ದುಬೈ, ಮಾಲ್ಡೀವ್ಸ್​ನತ್ತ ಹೊರಟ 3 ಹಡಗುಗಳು

NRI Rescue Operation: ಇನ್ನೂ 11 ಹಡಗುಗಳು ಮತ್ತು 30 ವಿಮಾನಗಳು ಕೂಡ ಗಲ್ಫ್​ನಲ್ಲಿರುವ ಭಾರತೀಯರು ಮತ್ತು ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ಕರೆತರಲು ಸಿದ್ಧಗೊಂಡಿವೆ.

Sushma Chakre | news18-kannada
Updated:May 5, 2020, 9:17 AM IST
ಭಾರತೀಯ ನೌಕಾಪಡೆಯಿಂದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ; ದುಬೈ, ಮಾಲ್ಡೀವ್ಸ್​ನತ್ತ ಹೊರಟ 3 ಹಡಗುಗಳು
ಐಎನ್​ಎಸ್​ ಜಲಾಶ್ವ ಹಡಗು
  • Share this:
ನವದೆಹಲಿ (ಮೇ 5): ವಿದೇಶದಲ್ಲಿರುವ ಲಕ್ಷಾಂತರ ಭಾರತೀಯರು ಲಾಕ್​ಡೌನ್​ನಿಂದಾಗಿ ಭಾರತಕ್ಕೆ ವಾಪಾಸ್​ ಬರಲಾಗದೆ ಪರದಾಡುತ್ತಿದ್ದಾರೆ. ಲಾಕ್​ಡೌನ್​ ಅವಧಿ ವಿಸ್ತರಣೆಯಾಗುತ್ತಲೇ ಇರುವುದರಿಂದ ಆದಷ್ಟು ಬೇಗ ತಮ್ಮನ್ನು ವಾಪಾಸ್​ ಕರೆಸಿಕೊಳ್ಳುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಎಲ್ಲ ದೇಶಗಳಲ್ಲೂ ಕೊರೋನಾ ತೀವ್ರತೆ ಹೆಚ್ಚಾಗಿರುವುದರಿಂದ ಎನ್​ಆರ್​ಐಗಳು  ತಾಯ್ನಾಡಿಗೆ ವಾಪಾಸಾಗುವ ತವಕದಲ್ಲಿದ್ದಾರೆ. ಆ ರೀತಿ ಭಾರತಕ್ಕೆ ಮರಳಲು ಇಚ್ಛಿಸಿರುವ ಅನಿವಾಸಿ ಭಾರತೀಯರನ್ನು ಕರೆತರಲು ಇಂದಿನಿಂದ ರಕ್ಷಣಾ ಕಾರ್ಯ ಆರಂಭಿಸಲಾಗಿದೆ.

ಯುಎಇ ಮತ್ತು ಮಾಲ್ಡೀವ್ಸ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಇಂದು ನೌಕಾಪಡೆಯ 3 ಹಡಗುಗಳನ್ನು ಕಳುಹಿಸಲಾಗಿದೆ. ಗಲ್ಫ್​ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಾಸ್ ಕರೆತರಲು ಭಾರತ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ವಿದೇಶಗಳಲ್ಲಿ ಸಿಲುಕಿಕೊಂಡು, ಭಾರತಕ್ಕೆ ಮರಳಲು ಬಯಸಿರುವ ಭಾರತೀಯರನ್ನು ಕರೆತರಲು ಭಾರತೀಯ ಹಡಗುಗಳ ಮೂಲಕ ಕರೆತರಲಾಗುತ್ತಿದೆ. ಈ ಹಡಗುಗಳಲ್ಲಿ ಭಾರತದಿಂದ ವಲಸೆ ಹೋಗಿರುವ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ; ಮೇ 7ರಿಂದ ಹಂತ ಹಂತವಾಗಿ ಭಾರತಕ್ಕೆ ವಾಪಸ್

ಅನಿವಾಸಿ ಭಾರತೀಯರನ್ನು ಕರೆತರಲು ಇಂದು ಮುಂಬೈ ಬಂದರಿನಿಂದ ಐಎನ್​ಎಸ್​ ಜಲಾಶ್ವ, ಐಎನ್​ಎಸ್​ ಮಗಾರ್, ಐಎನ್​ಎಸ್​ ಶಾರ್ದೂಲ್ ಹಡಗುಗಳನ್ನು ಕಳುಹಿಸಲಾಗಿದೆ. ಐಎನ್​ಎಸ್​ ಜಲಾಶ್ವ ಭಾರತೀಯ ನೌಕಾ ಸೇನೆಯ ಎರಡನೇ ಅತಿ ದೊಡ್ಡ ಹಡಗಾಗಿದೆ. ಇದು ಒಂದೇ ಬಾರಿಗೆ 500 ಜನರನ್ನು ಕರೆತರುವ ಸಾಮರ್ಥ್ಯ ಹೊಂದಿದೆ. ಇವುಗಳ ಜೊತೆಗೆ ಇನ್ನೂ 11 ಹಡಗುಗಳು ಮತ್ತು 30 ವಿಮಾನಗಳು ಕೂಡ ಗಲ್ಫ್​ನಲ್ಲಿರುವ ಭಾರತೀಯರು ಮತ್ತು ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ಕರೆತರಲು ಸಿದ್ಧಗೊಂಡಿವೆ.


ಮುಂಬೈನಿಂದ ಐಎನ್​ಎಸ್​ ಜಲಾಶ್ವ ಮತ್ತು ಐಎನ್​ಎಸ್​ ಮಗಾರ್​ ಹಡಗುಗಳು ಸೋಮವಾರ ರಾತ್ರಿ ಮಾಲ್ಡೀವ್ಸ್​ನತ್ತ ತೆರಳಿವೆ. ಐಎನ್​ಎಸ್​ ಶಾರ್ದೂಲ್ ಹಡಗು ದುಬೈಗೆ ತೆರಳಿದೆ. ಈ ಮೂರೂ ಹಡಗುಗಳು ಕೊಚ್ಚಿಗೆ ವಾಪಾಸ್ ಆಗಲಿವೆ. ಅಲ್ಲಿಂದ ಜನರನ್ನು ತಪಾಸಣೆ ನಡೆಸಿ, ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.

ಇದನ್ನೂ ಓದಿ: ಬದುಕು ಬದಲಾಯಿಸಿದ ಲಾಟರಿ!; 41.50 ಕೋಟಿ ರೂ. ಒಡೆಯರಾದ ಅಬುಧಾಬಿಯ ಮೂವರು ಭಾರತೀಯರು

ಅಮೆರಿಕ ಮತ್ತು ಫ್ರೆಂಚ್ ನೌಕಾದಳದಲ್ಲಿ ಆದ ಪರಿಸ್ಥಿತಿ ಮರುಕಳಿಸದಂತೆ ಭಾರತದ ಹಡಗುಗಳಲ್ಲಿ ಎಚ್ಚರ ವಹಿಸಬೇಕಾಗಿದೆ. ಹಡಗಿನಲ್ಲಿ ಸಂಚರಿಸುವಾಗ ಕೊರೋನಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಮುಂಚಿತವಾಗಿಯೇ ವೈದ್ಯಕೀಯ ತಪಾಸಣೆ ನಡೆಸಿ, ಕೊರೋನಾ ನೆಗೆಟಿವ್ ವರದಿ ಇರುವವರನ್ನು ಮಾತ್ರ ಹಡಗಿನಲ್ಲಿ ಕರೆತರಲಾಗುವುದು. ಹಡಗಿನ ಮೇಲ್ಭಾಗದಲ್ಲಿ ಪುರುಷರನ್ನು ಮತ್ತು ಮಹಿಳೆಯರು- ಮಕ್ಕಳನ್ನು ಕೆಳಗಿನ ಭಾಗದಲ್ಲಿ ಕರೆತರಲಾಗುವುದು. ಹೆಚ್ಚುವರಿ ಔಷಧಗಳು, ಆಹಾರ ವಸ್ತುಗಳನ್ನು ಹಡಗಿನಲ್ಲಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
First published: May 5, 2020, 9:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading