news18-kannada Updated:April 22, 2020, 4:08 PM IST
ಪ್ರಾತಿನಿಧಿಕ ಚಿತ್ರ
ನವದೆಹಲಿ: ಸಾಂಕ್ರಾಮಿಕ ರೋಗ ಎದುರಿಸಲು ನಾಗರಿಕ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲು ಭಾರತೀಯ ಸೇನೆಯು ಶ್ರೀನಗರ ಮತ್ತು ಜಮ್ಮುವಿನಲ್ಲಿ ಕೋವಿಡ್ -19 ಎರಡು ಆಸ್ಪತ್ರೆಗಳನ್ನು ಆರಂಭಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದ ರಂಗ್ರೆತ್ನಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ಆರಂಭಿಸುವ ಪ್ರಯತ್ನಗಳು ನಡೆಯುತ್ತಿದ್ದರೆ, ಮುಂದಿನ ಎರಡು, ಮೂರು ದಿನಗಳಲ್ಲಿ 100 ಹಾಸಿಗೆಗಳ ಕೋವಿಡ್-19 ಆರೈಕೆ ಕೇಂದ್ರವು ಆರ್ಮಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹಣಕಾಸು ಆಯುಕ್ತ ಅಟಲ್ ಡಲ್ಲೂ ಅವರು ಉತ್ತರ ಕಮಾಂಡ್ನ ಹಿರಿಯ ಅಧಿಕಾರಿ ಮೇಜರ್ ಜನರಲ್ ಹರಿ ಮೋಹನ್ ಅಯ್ಯರ್ ಅವರೊಂದಿಗೆ ಸಭೆ ನಡೆಸಿ ಆಸ್ಪತ್ರೆಗಳನ್ನು ಆರಂಭಿಸಲು ಬೇಕಾಗುವ ವ್ಯವಸ್ಥೆಯನ್ನು ಪರಿಶೀಲಿಸಿದರು.
ರಂಗ್ರೆತ್ನಲ್ಲಿರುವ ಆಸ್ಪತ್ರೆಯನ್ನು ಕಡಿಮೆ ಸಮಯದಲ್ಲಿ ಕಾರ್ಯರೂಪಕ್ಕೆ ತರಲು ಸಿಬ್ಬಂದಿ ಮತ್ತು ಯಂತ್ರೋಪಕರಣಗಳು ಹಾಗೂ ಇತರ ಸಲಕರಣೆಗಳ ಬಗ್ಗೆ ಎಲ್ಲ ಸಹಾಯವನ್ನು ನೀಡುವಂತೆ ಕಾಶ್ಮೀರದ ಆರೋಗ್ಯ ಸೇವೆಗಳ ನಿರ್ದೇಶಕರಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯನ್ನು ಒಂದೆರಡು ದಿನಗಳಲ್ಲಿ ಆರಂಭಿಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಜಮ್ಮು ಮತ್ತು ಸೈನ್ಯದ ಆರೋಗ್ಯ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇದನ್ನು ಓದಿ: ಕೊರೋನಾಕ್ಕೆ ಮದ್ದು ಕಂಡುಹಿಡಿದ ಆಕ್ಸ್ಫರ್ಡ್, ನಾಳೆ ಭಾರತದಲ್ಲಿ ಲಸಿಕೆಯ ಪ್ರಯೋಗ
ಕೋವಿಡ್-19 ಆಸ್ಪತ್ರೆಗಳ ನಿರ್ವಹಣೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಮೇಜರ್ ಜನರಲ್ ಅಯ್ಯರ್ ಅಧಿಕಾರಿಗಳಿಗೆ ಭರವಸೆ ನೀಡಿದರು.
ವರದಿ: ಸಂಧ್ಯಾ ಎಂ
First published:
April 22, 2020, 4:08 PM IST