100 Crore COVID-19 Vaccine Doses|100 ಕೋಟಿ ಕೋವಿಡ್ ಲಸಿಕೆ ಸಾಧನೆಯ ಸನಿಹದಲ್ಲಿ ಭಾರತ

100 ಕೋಟಿ ಡೋಸ್ ಲಸಿಕೆಯನ್ನು ಪೂರ್ಣಗೊಳಿಸುವ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಮನ್‍ಸುಖ್ ಮಾಂಡವೀಯಾ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಅ. 10): ಭಾರತ ಶೀಘ್ರದಲ್ಲಿಯೇ ಕೋವಿಡ್-19 ಲಸಿಕಾರಣ(COVID-19 Vaccination)ದಲ್ಲಿ 100 ಕೋಟಿಯ ಗಡಿ ತಲುಪಲಿದ್ದೇವೆ. 100 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆ ಬರೆಯಲಿದೆ. ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದಾರೆ. ಈಗಾಗಲೇ 95 ಕೋಟಿ ಕೊರೊನಾ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 18 ವರ್ಷ ಮೇಲ್ಪಟ್ಟವರು ಸೇರಿದ್ದಾರೆ. ಎರಡನೇ ಡೋಸ್ (Second Dose)ಲಸಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸುವತ್ತ ಕೆಲಸ ಮಾಡಲಿದ್ದೇವೆ. 100 ಕೋಟಿ ಡೋಸ್ ಲಸಿಕೆಯನ್ನು ಪೂರ್ಣಗೊಳಿಸುವ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಮನ್‍ಸುಖ್ ಮಾಂಡವೀಯಾ ಹೇಳಿದ್ದಾರೆ.

    ಹಂತ ಹಂತವಾಗಿ ಲಸಿಕಾಕರಣ:
    ಭಾರತದಲ್ಲಿ ಜನವರಿ 16, 2021ರಂದು ಮೊದಲ ಹಂತದಲ್ಲಿ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ವರ್ಕರ್ ಗಳಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಎರಡನೇ ಹಂತ ಮಾರ್ಚ್ 1ರಿಂದ ಆರಂಭಗೊಂಡಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟದವರಿಗೆ ಪ್ರಾಶಸ್ತ್ಯ ನೀಡಲಾಗಿತ್ತು. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಯ್ತು. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಅನುಮತಿ ನೀಡಿತ್ತು.

    ಕೋವಿಡ್ ಮೂರನೇ ಅಲೆ ಆತಂಕ:
    ಸದ್ಯ ದೇಶದಲ್ಲಿ ಕೋವಿಡ್ ಎರಡನೇ ಅಲೆ ಕ್ಷೀಣಗೊಂಡಿದ್ದು, ಜನರ ಜೀವನ ಸಹಜಸ್ಥಿತಿಯತ್ತ ಮರಳಿದೆ. ಆದರೂ ಮೂರನೇ ಆಲೆ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕೊರೊನಾ ಕಡಿಮೆಯಾದ್ರೂ ಸರ್ಕಾರ ಹೆಚ್ಚು ಜನರು ಸೇರುವ ಸಭೆಗಳ ಮೇಲೆ ಹಲವು ಷರತ್ತು ವಿಧಿಸಿದೆ. ಮೂರನೇ ಅಲೆ ಆತಂಕದ ನಡುವೆ ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ಎರಡು ಬಾರಿ ಲಾಕ್‍ಡೌನ್ ನಿಂದ ಕಷ್ಟ ಅನುಭವಿಸಿದ ಜನ ಮೂರನೇ ಅಲೆ ಬರದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಮೂರನೇ ಅಲೆ ಮಕ್ಕಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಜ್ಞರ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ ಸರ್ಕಾರಗಳು ಮಕ್ಕಳ ಕೋವಿಡ್ ಆರೈಕಾ ಕೇಂದ್ರದ ಜೊತೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿವೆ. ಮಕ್ಕಳ ಮೇಲೆಯೂ ಕೊರೊನಾ ಲಸಿಕೆ ಪ್ರಯೋಗ ನಡೆದಿದ್ದು, ವರದಿ ಬಂದಿಲ್ಲ.

    ಇದನ್ನು ಓದಿ: ಬೆಂಗಳೂರಿನಲ್ಲಿ ಗಗನ ಮುಖಿಯಾದ ತರಕಾರಿಗಳು; ಈರುಳ್ಳಿ, ಟೊಮೆಟೊ ದರ ಹೆಚ್ಚಳಕ್ಕೆ ಇದು ಕೂಡ ಕಾರಣ

    ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಪ್ರಕರಣಗಳು:
    ಇಂದು ದೇಶದಲ್ಲಿ 18,132 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 193 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ದೇಶದಲ್ಲಿ 2,.27,347 ಸಕಿರಯ ಪ್ರಕರಣಟಗಳಿವೆ. ಇಂದು ಒಟ್ಟು 21,563 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಭಾರತದಲ್ಲಿ ಮಹಾಮಾರಿ ಕೊರೊನಾಗೆ 4,50,782 ಜನರು ಪ್ರಾಣ ಕಳೆದುಕೊಂಡಿದ್ದಾರೆ. 95,19,84,373 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಅಕ್ಟೋಬರ್ 10ರಂದು 10,35,797 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಕ್ಟೋಬರ್ 10ರವರೆಗೆ 58,36,31,490 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಇದನ್ನು ಓದಿ: ಹೆಣ್ಣು ಮಗುವಿನ ತಾಯಿಯಾದ ಶ್ರಿಯಾ; ಎರಡು ವರ್ಷ ಈ ವಿಚಾರ ಮುಚ್ಚಿಟ್ಟಿದ್ದು ಯಾಕೆ?

    ನೆರೆಯ ರಾಜ್ಯಗಳಲ್ಲಿ ಮಹಾಮಾರಿ ಅಬ್ಬರ:
    ಕರ್ನಾಟಕದ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಕೊರೊನಾ ನರ್ತನಕ್ಕೆ ವಿರಾಮ ಬಿದ್ದಿಲ್ಲ. ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಎರಡು ಸಾವಿರದ ಆಸುಪಾಸಿನಲ್ಲಿ ಕೇಸ್ ಗಳು ದಾಖಲಾಗುತ್ತಿವೆ. ಸದ್ಯ ಮಹಾರಾಷ್ಟ್ರದಲ್ಲಿ 37,043 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿಯೂ 1,11,676 ಸಕ್ರಿಯ ಪ್ರಕರಣಗಳಿವೆ.

    ರಾಜ್ಯದಲ್ಲಿ ಇಂದು 373 ಕೊರೊನಾ ಸೋಂಕಿನ ಹೊಸ ಪ್ರಕರಣ ದಾಖಲಾಗಿದ್ದು, ಇಂದು 10 ಜನ ಕೊರೋನಾಗೆ ಬಲಿ ಆಗಿದ್ದಾರೆ. 611 ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ ಇಂದು 146 ಕೇಸ್ ಪತ್ತೆ ಆಗಿದೆ. ರಾಜ್ಯದಲ್ಲಿ ಇಂದು ಪಾಸಿಟಿವಿಟ್ 0.45 ರಷ್ಟಿದ್ದು, ಇಂದು ಸಾವಿನ ಪ್ರಮಾಣ 2.68 ರಷ್ಟಿದೆ.

    -ಮಹ್ಮದ್​ ರಫೀಕ್​ ಕೆ
    Published by:Seema R
    First published: