HOME » NEWS » Coronavirus-latest-news » INDIA WELCOMES US DECISION TO BACK TRIPS WAIVER FOR COVID 19 VACCINES SNVS

ಕೋವಿಡ್-19 ಲಸಿಕೆಗಳಿಗೆ ಟ್ರಿಪ್ಸ್ ನಿಯಮ ಸಡಿಲಿಸಿದ ಅಮೆರಿಕಕ್ಕೆ ಭಾರತ ಧನ್ಯವಾದ

ಟ್ರಿಪ್ಸ್ ಹಕ್ಕು ನಿಯಮವಾಳಿಗಳ ಕೆಲ ಅಂಶಗಳನ್ನ ಅಮೆರಿಕ ಹಿಂಪಡೆಯುವ ಮೂಲಕ ಕಡಿಮೆ ವೆಚ್ಚದಲ್ಲಿ ಜಾಗತಿಕವಾಗಿ ಲಸಿಕೆ ಉತ್ಪಾದನೆ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕಾಗಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾಗೆ ಭಾರತ ಧನ್ಯವಾದ ಹೇಳಿದೆ.

news18
Updated:May 6, 2021, 11:18 AM IST
ಕೋವಿಡ್-19 ಲಸಿಕೆಗಳಿಗೆ ಟ್ರಿಪ್ಸ್ ನಿಯಮ ಸಡಿಲಿಸಿದ ಅಮೆರಿಕಕ್ಕೆ ಭಾರತ ಧನ್ಯವಾದ
ಸಾಂದರ್ಭಿಕ ಚಿತ್ರ
  • News18
  • Last Updated: May 6, 2021, 11:18 AM IST
  • Share this:
ನವದೆಹಲಿ(ಮೇ 06): ಕೋವಿಡ್ ಲಸಿಕೆ ದುಬಾರಿಯಾಗದ ರೀತಿಯಲ್ಲಿ ಪೂರೈಕೆ ಮಾಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿಯಮಾವಳಿಗಳನ್ನ ತಾತ್ಕಾಲಿಕವಾಗಿ ಸಡಿಲಿಸಿದ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಕ್ರಮವನ್ನ ಭಾರತ ಸ್ವಾಗತಿಸಿದೆ. ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳ ಅಂಶ (TRIPS - Trade-Related Aspects of Intellectual Property Rights)ದ ಕೆಲ ನಿಯಮಾವಳಿಗಳನ್ನ ಈ ಎರಡು ದೇಶಗಳು ಹಿಂಪಡೆದುಕೊಂಡಿವೆ. ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ತರನ್​ಜೀತ್ ಸಿಂಗ್ ಸಂಧು ಹಾಗೂ ದಕ್ಷಿಣ ಆಫ್ರಿಕಾದಲ್ಲಿರುವ ಕೆಲ ರಾಜತಾಂತ್ರಿಕರು ಕಳೆದ ಕೆಲ ವಾರಗಳಿಂದಲೂ ಅಮೆರಿಕದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನ ಭೇಟಿ ಮಾಡಿ ಈ ನಿಟ್ಟಿನಲ್ಲಿ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದರು. ಅದೀಗ ಯಶಸ್ವಿಯಾಗಿದೆ.

“ಜೋ ಬೈಡನ್ ನೇತೃತ್ವದ ಸರ್ಕಾರಕ್ಕೆ ಬೌದ್ಧಿಕ ಆಸ್ತಿ ರಕ್ಷಣೆಯ ಅಗತ್ಯತೆ ಚೆನ್ನಾಗಿ ಅರಿವಿದೆ. ಆದರೆ, ಕೋವಿಡ್ ಸಾಂಕ್ರಾಮಿಕ ಸಂಕಷ್ಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಕೋವಿಡ್-19 ಲಸಿಕೆಗಳ ಹಕ್ಕು ರಕ್ಷಣೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಮನಸು ಮಾಡಿದೆ” ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ಟಾಯ್ ಅವರು ಹೇಳಿದ್ದಾರೆ. ಇದು ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿದ್ದು, ಇಂಥ ಕಾಲಘಟ್ಟದಲ್ಲಿ ಅಸಾಮಾಮಾನ್ಯ ಕ್ರಮಗಳನ್ನ ಕೈಗೊಳ್ಳುವ ಅಗತ್ಯವಿದೆ ಎಂಬುದು ಟಾಯ್ ಅಭಿಪ್ರಾಯ.

ಇದನ್ನೂ ಓದಿ: Shopian Encounter: ಕಾಶ್ಮೀರದ ಶೋಪಿಯಾನ್​ನಲ್ಲಿ ಗುಂಡಿನ ದಾಳಿ; ಬಿಎಸ್​ಎಫ್ ಯೋಧರಿಂದ ಮೂವರು ಉಗ್ರರ ಎನ್​ಕೌಂಟರ್

ಟ್ರಿಪ್ಸ್ ನಿಯಮಾವಳಿಯನ್ನ ಸಡಿಲಿಸುವುದರಿಂದ ಅಮೆರಿಕನ್ ಕಂಪನಿಗಳ ಕೋವಿಡ್ ಲಸಿಕೆಗಳ ಉತ್ಪಾದನಾ ವೆಚ್ಚ ಕಡಿಮೆ ಇರಲಿದೆ. ಡೆಮಾಕ್ರಾಟ್ ಪಕ್ಷದ ಬಹುತೇಕ ಸಂಸದರು ಇಂಥದ್ದೊಂದು ಪ್ರಸ್ತಾವಕ್ಕೆ ಬೆಂಬಲ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಿದ್ದರು. ಇವರೆಲ್ಲರಿಗೂ ಭಾರತೀಯ ರಾಯಭಾರಿ ಸಂಧು ಧನ್ಯವಾದ ಹೇಳಿದ್ಧಾರೆ.

“ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದ ಜನಪ್ರತಿನಿಧಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಕಷ್ಟ ಸ್ಥಿತಿಯಲ್ಲಿ ಜಾಗತಿಕವಾಗಿ ಜನರ ಆರೋಗ್ಯ ಸುರಕ್ಷತೆಗೆ ಕಡಿಮೆ ಬೆಲೆಯಲ್ಲಿ ಲಸಿಕೆಗಳನ್ನ ಸಮವಾಗಿ ಹಂಚಿಕೆ ಮಾಡುವ ಮೂಲಕ ಕೋವಿಡ್ ವಿರುದ್ಧ ಸಂಘಟಿತ ಹೋರಾಟ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅಮೆರಿಕದ ಜೊತೆ ನಾವು ಕೈಜೋಡಿಸಿ ಕೆಲಸ ಮಾಡುತ್ತೇವೆ” ಎಂದು ತರನ್​ಜೀತ್ ಸಿಂಗ್ ಸಂಧು ತಿಳಿಸಿದ್ಧಾರೆ.

ಇದನ್ನೂ ಓದಿ: Third Wave of Coronavirus: ಕೊರೋನಾ ಮೂರನೇ ಅಲೆ ಕಟ್ಟಿಟ್ಟ ಬುತ್ತಿ; ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಕೋವಿಡ್-19 ಲಸಿಕೆಯ ಪೇಟೆಂಟ್ ಹಕ್ಕನ್ನು ತಾತ್ಕಾಲಿಕವಾಗಿ ಹಿಂಪಡೆಯುವುದರಿಂದ ಜಾಗತಿಕವಾಗಿ ಲಸಿಕೆ ಉತ್ಪಾದನೆ ವೆಚ್ಚ ಕಡಿಮೆ ಆಗುತ್ತದೆ. ಸದ್ಯ ಪೇಟೆಂಟ್ ಹೊಂದಿರುವ ಕಂಪನಿಗೆ ಮಾತ್ರ ಲಸಿಕೆ ಉತ್ಪಾದಿಸುವ ಹಕ್ಕು ಇರುತ್ತದೆ. ಅದಕ್ಕೆ ಇಂತಿಷ್ಟು ರಾಯಧನ ನೀಡಿ ಬೇರೆ ಕಂಪನಿಗಳು ಲಸಿಕೆ ಉತ್ಪಾದಿಸಬಹುದು. ಹೀಗಾಗಿ, ಸಹಜವಾಗಿಯೇ ಉತ್ಪಾದನಾ ವೆಚ್ಚ ಅಧಿಕವಾಗಿರುತ್ತದೆ. ಈಗ ಪೇಟೆಂಟ್ ವೆಚ್ಚ ಇಲ್ಲವಾದರೆ ಕಡಿಮೆ ಬೆಲೆಯಲ್ಲಿ ಲಸಿಕೆ ಮಾರುಕಟ್ಟೆಗೆ ಬರುತ್ತದೆ. ಭಾರತದಂಥ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಿಗೆ ಬಹಳ ಅನುಕೂಲವಾಗುತ್ತದೆ. ಕೊರೋನಾ ಅಕ್ಷರಶಃ ಕೇಕೆ ಹಾಕುತ್ತಿರುವ ಭಾರತದಲ್ಲಿ ಈಗ ಲಸಿಕೆಗೆ ವಿಪರೀತ ಬೇಡಿಕೆ ಇದೆ. ಇಲ್ಲಿ ಉತ್ಪಾದನೆ ಆಗುತ್ತಿರುವ ಲಸಿಕೆ ಪ್ರಮಾಣ ಸದ್ಯಕ್ಕೆ ಕಡಿಮೆ ಇದೆ. ಹೀಗಾಗಿ, ಭಾರತ ವಿವಿಧ ದೇಶಗಳಿಂದ ಲಸಿಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.ಮತ್ತೊಂದು ವಿಷಯವೆಂದರೆ, ಆದಷ್ಟೂ ಬೇಗ ಇಡೀ ವಿಶ್ವದ ಜನತೆಗೆ ಲಸಿಕೆ ಹಾಕಿಸದೇ ಹೋದರೆ ವೈರಸ್ ಹೊಸ ಹೊಸ ರೂಪ ಪಡೆದು ಹೆಚ್ಚೆಚ್ಚು ಅಪಾಯಕಾರಿಯಾಗುತ್ತಾ ಹೋಗುತ್ತದೆ. ಹೊಸ ರೂಪಾಂತರಿ ವೈರಸ್​ಗಳಿಗೆ ಹಳೆಯ ಲಸಿಕೆ ಪರಿಣಾಮಕಾರಿ ಅನಿಸದೇ ಹೋಗಬಹುದು. ಇದು ವಿಜ್ಞಾನಿಗಳ ಚಿಂತೆಗೆ ಕಾರಣವಾಗಿದೆ.
Published by: Vijayasarthy SN
First published: May 6, 2021, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories