ಟೀಂ ಇಂಡಿಯಾ ಆಟಗಾರರ ಜೊತೆ ನಾವು ಶೇಕ್​​ಹ್ಯಾಂಡ್​ ಮಾಡಲ್ಲ ಎಂದ ದ. ಆಫ್ರಿಕಾ ಆಟಗಾರರು!

India vs South Africa ODI: ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಣಾಂತಿಕ ಕೊರೋನಾ ವೈರಸ್​ಗೆ ಲಕ್ಷಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, ಸದ್ಯ ಕ್ರಿಕೆಟ್ ಜಗತ್ತಿನ ಮೇಲೂ ಪರಿಣಾಮಬೀರಿದೆ.

ಇನ್ನೂ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಪರಿಣಾಮಬೀರಿದೆ. ಕೊರೋನಾ ಬಗ್ಗೆ ಅತೀವ ಜಾಗರೂಕತೆ ವಹಿಸಲಾಗುತ್ತಿದೆ. ಹೀಗಾಗಿ ಪಂದ್ಯದ ಬಳಿಕ ನಾವು ಟೀಂ ಇಂಡಿಯಾ ಆಟಗಾರರ ಜೊತೆ ಶೇಕ್ಹ್ಯಾಂಡ್ ಆಡುವುದಿಲ್ಲ ಎಂದು ದ. ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

ಇನ್ನೂ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಪರಿಣಾಮಬೀರಿದೆ. ಕೊರೋನಾ ಬಗ್ಗೆ ಅತೀವ ಜಾಗರೂಕತೆ ವಹಿಸಲಾಗುತ್ತಿದೆ. ಹೀಗಾಗಿ ಪಂದ್ಯದ ಬಳಿಕ ನಾವು ಟೀಂ ಇಂಡಿಯಾ ಆಟಗಾರರ ಜೊತೆ ಶೇಕ್ಹ್ಯಾಂಡ್ ಆಡುವುದಿಲ್ಲ ಎಂದು ದ. ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

 • Share this:
  ಟೀಂ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತಕ್ಕೆ ಬಂದಿಳಿದಿದೆ. ಭಾರತ ತಂಡದವರು ಮಂಗಳವಾರ ಧರ್ಮಶಾಲಾಕ್ಕೆ ತೆರಳಲಿದ್ದಾರೆ. ಉಭಯ ತಂಡಗಳ ನಡುವಣ ಮೊದಲ ಏಕದಿನ ಪಂದ್ಯ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ.

  India vs South Africa: African players avoid customary handshakes, says coach Mark Boucher
  ಭಾರತ vs ದಕ್ಷಿಣ ಆಫ್ರಿಕಾ ತಂಡದ ಆಟಗಾರರು.


  37 ಸಿಡಿಲಬ್ಬರದ ಸಿಕ್ಸರ್, 441 ರನ್: ಆದರೂ ಟೀಂ ಇಂಡಿಯಾದಲ್ಲಿ ಮಾತ್ರ ಸ್ಥಾನವಿಲ್ಲ..!

  ಈ ನಡುವೆ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಪರಿಣಾಮಬೀರಿದೆ. ಕೊರೋನಾ ಬಗ್ಗೆ ಅತೀವ ಜಾಗರೂಕತೆ ವಹಿಸಲಾಗುತ್ತಿದೆ. ಹೀಗಾಗಿ ಪಂದ್ಯದ ಬಳಿಕ ನಾವು ಟೀಂ ಇಂಡಿಯಾ ಆಟಗಾರರ ಜೊತೆ ಶೇಕ್​ಹ್ಯಾಂಡ್​​ ಆಡುವುದಿಲ್ಲ ಎಂದು ದ. ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

  ಈ ಬಗ್ಗೆ ಮಾತನಾಡಿದ ಬೌಚರ್, 'ಭಾರತದಲ್ಲೂ ಕೆಲವೊಂದು ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಕಾರಣ ತಾವು ಈ ನಿರ್ಧಾರ ಕೈಗೊಂಡಿದ್ದೇವೆ. ಶೇಕ್ ಹ್ಯಾಂಡ್ ಪದ್ಧತಿಯನ್ನು ಬಿಟ್ಟು ನಿಲ್ಲಲು ದಕ್ಷಿಣ ಆಫ್ರಿಕಾ ಮುಂದಾಗಿದೆ. ನಮ್ಮ ತಂಡದ ಆಟಗಾರರಿಗೆ ಏನು ಆಗದಂತೆ ತಡೆಯುವ ಮಾರ್ಗ ಇದಾಗಿದೆ' ಎಂದಿದ್ದಾರೆ.

  IND vs SA: ದ. ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಕಮ್​ಬ್ಯಾಕ್ ಮಾಡಿದ 3 ಸ್ಟಾರ್ ಆಟಗಾರರು!

  ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಣಾಂತಿಕ ಕೊರೋನಾ ವೈರಸ್​ಗೆ ಲಕ್ಷಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, 3,800 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿಯೂ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಈವರೆಗೆ ಒಟ್ಟು 44 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೆ ರಾಜ್ಯದಲ್ಲೂ ಮೊದಲ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

  ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಇಲ್ಲಿದೆ.

  ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ, ಕುಲ್ದೀಪ್ ಯಾದವ್, ಶುಭ್ಮನ್ ಗಿಲ್.

  First published: