ಕೊರೋನಾ ಸೋಂಕಿನ ಕಾರಣದಿಂದಾಗಿ ಯೂರೋಪಿಯನ್ ದೇಶಗಳು ಕಳೆದ ಹಲವು ತಿಂಗಳುಗಳಿಂದ ವಿಮಾಯನ ಯಾನವನ್ನು ಸ್ಥಗಿತಗೊಳಿಸಿತ್ತು. ಇತ್ತೀಚೆಗೆ ವಿಮಾನಯಾನ ಆರಂಭವಾಗಿದ್ದರೂ ಸಹ ಹತ್ತಾರು ನಿಯಮಗಳನ್ನು ಅನುಸರಿಸು ವುದು ಕಡ್ಡಾಯವಾಗಿದೆ. ಅದರಲ್ಲೂ ಏಷ್ಯಾದಿಂದ ಯಾರೇ ಪ್ರಯಾಣಿಕರು ಯೂರೋಪ್ಗೆ ತೆರಳಬೇಕು ಎಂದು ಲಸಿಕೆ ಪಡೆದಿರುವುದನ್ನೂ ಕಡ್ಡಾಯ ಮಾಡಲಾಗಿದೆ. ಆದರೆ, ಭಾರತದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಭಾರತದ ಪ್ರಯಾಣಿಕರಿಗೆ ವೀಸಾ ನೀಡುವುದನ್ನು ಯೂರೋಪ್ ಒಕ್ಕೂಟ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಈ ನಿಷೇಧವನ್ನು ತೆರವುಗೊಳಿಸಬೇಕು ಎಂದು ಭಾರತ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.
ಯೂರೋಪ್ ಒಕ್ಕೂಟ ಕಾಮಿರ್ನಾಟಿ ಆಫ್ ಫಿಜರ್ / ಬಯೋಟೆಕ್, ಮಾಡರ್ನಾ, ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ನ ವ್ಯಾಕ್ಸ್‌ಜೆರ್ವ್ರಿಯಾ ಮತ್ತು ಜಾನ್ಸನ್ ಮತ್ತು ಜಾನ್ಸನ್‌ರ ಜಾನ್ಸೆನ್ ಲಸಿಕೆಗಳನ್ನು ಮಾತ್ರ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಅನುಮೋದಿಸಿದೆ. ಹೀಗಾಗಿ ಕೇವಲ ಈ ನಾಲ್ಕು ಲಸಿಕೆಗಳನ್ನು ಪಡೆದವರಿಗೆ ಮಾತ್ರ ವ್ಯಾಕ್ಸಿನೇಷನ್ ವೀಸಾ ನೀಡಲಾಗುತ್ತಿದೆ. ಈ ಮೂಲಕ ಸಾಂಕ್ರಾಮಿಕ ಸಮಯದಲ್ಲೂ ಯೂರೋಪ್ನಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.
ಆದರೆ, ಭಾರತದ ಕೋವಾಕ್ಸಿನ್ ಮತ್ತು ಕೋವೀಶೀಲ್ಡ್ಗೆ ಯೂರೋಪ್ ದೇಶಗಳು ಅನುಮೋದನೆ ನೀಡಿಲ್ಲ. ಹೀಗಾಗಿ ಜುಲೈ 1 ರಿಂದ ಜಾರಿಗೆ ಬರಲಿರುವ ಲಸಿಕೆ ಪಾಸ್‌ಪೋರ್ಟ್‌ಗಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎರಡನ್ನೂ ತಮ್ಮ ವಿನಾಯಿತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಭಾರತ ಬುಧವಾರ ಔಪಚಾರಿಕವಾಗಿ ವಿನಂತಿಸಿದೆ ಎಂದು ತಿಳಿದುಬಂದಿದೆ.
"ವೈಯಕ್ತಿಕ ಸದಸ್ಯ ರಾಷ್ಟ್ರಗಳು ರಾಷ್ಟ್ರೀಯ ಮಟ್ಟದಲ್ಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾದ ಲಸಿಕೆಗಳನ್ನು ಸಹ ಸ್ವೀಕರಿಸುವ ನಮ್ಯತೆಯನ್ನು ಹೊಂದಿವೆ" ಎಂದು ಸರ್ಕಾರದ ಉನ್ನತ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ.
ಕೋವಿನ್ ಪೋರ್ಟಲ್ ಮೂಲಕ ನೀಡಲಾಗುವ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಸ್ವೀಕರಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದ ಭಾರತೀಯ ಅಧಿಕಾರಿಗಳು, "ಇಂತಹ ವ್ಯಾಕ್ಸಿನೇಷನ್ ಪ್ರಮಾಣೀಕರಣದ ನೈಜತೆಯನ್ನು ಕೋವಿನ್ ಮೂಲಕ ದೃಢೀಕರಿಸಬಹುದು" ಎಂದು ಹೇಳಿದ್ದಾರೆ.
"ಯುರೋಪಿಯನ್ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರವನ್ನು ಗುರುತಿಸಲು ಭಾರತವು ಪರಸ್ಪರ ನೀತಿಯನ್ನು ಸ್ಥಾಪಿಸುತ್ತದೆ ಎಂದು ನಾವು ಯೂರೋಪ್ ಸದಸ್ಯ ರಾಷ್ಟ್ರಗಳಿಗೆ ತಿಳಿಸಿದ್ದೇವೆ. ಇಯು ಡಿಜಿಟಲ್ ಕೋವಿಡ್ ಪ್ರಮಾಣಪತ್ರದಲ್ಲಿ ಸೇರ್ಪಡೆಗೊಳ್ಳಲು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅಧಿಸೂಚನೆ ಮತ್ತು ಭಾರತೀಯ ಕೋವಿನ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಗುರುತಿಸಿದ ನಂತರ, ಭಾರತೀಯ ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟ ಇಯು ಸದಸ್ಯ ರಾಷ್ಟ್ರವನ್ನು ಕಡ್ಡಾಯವಾದ ಕ್ಯಾರೆಂಟೈನ್‌ನಿಂದ ವಿನಾಯಿತಿಗಾಗಿ ಪರಸ್ಪರ ವಿನಾಯಿತಿ ನೀಡುತ್ತಾರೆ" ಎಂದು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: National Doctors Day 2021: ಜುಲೈ 1ರಂದೇ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವುದೇಕೆ?
ಇಟಲಿಯಲ್ಲಿ ನಡೆದ ಜಿ 20 ವಿದೇಶಾಂಗ ಮಂತ್ರಿಗಳ ಸಭೆಯ ಹೊರತಾಗಿ ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಅವರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಂಗಳವಾರ ಈ ವಿಷಯವನ್ನು ಚರ್ಚಿಸಿದ್ದಾರೆ ಎಂದೂ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ