South Africa Cricket: ಭಾರತದಿಂದ ಮರಳಿದ ಆಫ್ರಿಕಾ ಕ್ರಿಕೆಟಿಗರಿಗೆ ಕೊರೋನಾ ಸೋಂಕಿಲ್ಲ

ಉಳಿದ ಎರಡು ಪಂದ್ಯಗಳು ಕೊರೋನಾ ವೈರಸ್‌ ಭೀತಿಯಿಂದಾಗಿ ರದ್ದಾಯಿತು. ಅಲ್ಲಿಗೆ ಪ್ರವಾಸದ ಒಂದೂ ಪಂದ್ಯ ಆಡದೆ ಆಫ್ರಿಕಾ ತಂಡ ತವರಿಗೆ ವಾಪಸ್ಸಾಗುವಂತಾಗಿತ್ತು.

ಇದರ ಬೆನ್ನಲ್ಲೇ ಟಿ20 ವಿಶ್ವಕಪ್​ಗಾಗಿ ಹೊಸ ನಾಯಕನನ್ನು ಆರಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಚಿಂತಿದೆ. ಇದಕ್ಕೆ ಪುರಾವೆ ಎಂಬಂತೆ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಲಿದ್ದಾರೆ, ಸೌತ್ ಆಫ್ರಿಕಾ ತಂಡವನ್ನು ಚುಟುಕು ವಿಶ್ವಕಪ್​ನಲ್ಲಿ ಮುನ್ನಡೆಸಲಿದ್ದಾರೆ ಎಂಬ ವದಂತಿ ಹರಿದಾಡಿತ್ತು.

ಇದರ ಬೆನ್ನಲ್ಲೇ ಟಿ20 ವಿಶ್ವಕಪ್​ಗಾಗಿ ಹೊಸ ನಾಯಕನನ್ನು ಆರಿಸಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಚಿಂತಿದೆ. ಇದಕ್ಕೆ ಪುರಾವೆ ಎಂಬಂತೆ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಲಿದ್ದಾರೆ, ಸೌತ್ ಆಫ್ರಿಕಾ ತಂಡವನ್ನು ಚುಟುಕು ವಿಶ್ವಕಪ್​ನಲ್ಲಿ ಮುನ್ನಡೆಸಲಿದ್ದಾರೆ ಎಂಬ ವದಂತಿ ಹರಿದಾಡಿತ್ತು.

 • Share this:
  ಟೀಂ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕೊರೋನಾ ವೈರಸ್ ಹಾವಳಿಯಿಂದಾಗಿ ಅರ್ಧದಿಂದಲೇ ತಾಯ್ನಾಡಿಗೆ ಮರಳುತ್ತು. ಸದ್ಯ ಭಾರತದಿಂದ ತೆರಳಿದ ಆಫ್ರಿಕಾ ಆಟಗಾರರಿಗೆ ಕೊರೋನಾ ವೈರಸ್ ಸೋಂಕು ಇಲ್ಲ ಎಂದು ತಿಳಿದುಬಂದಿದೆ.

  ಈ ಬಗ್ಗೆ ಮಾಹಿತಿ ನೀಡುರುವ ತಂಡದ ಮುಖ್ಯ ಮೈದ್ಯಾಧಿಕಾರಿ ಶುಯೀಬ್ ಮಾಂಜ್ರಾ, ಭಾರತ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಹಿಂತಿರುಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರರಿಗೆ ಕೊರೋನಾ ಸೋಂಕು ತಗುಲಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಪ್ರೋಟಿಯಾಸ್‌ಗೆ ನಡೆಸಿದ ಕೊರೋನಾ ವೈರಸ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.

  ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡುವುದು ಬೇಡ ಎಂದಿದ್ದರು ಮಾಜಿ ನಾಯಕ ಧೋನಿ..!

  ದಕ್ಷಿಣ ಆಫ್ರಿಕಾ ಆಟಗಾರರು ಮಾ. 18ರಂದು ತವರಿಗೆ ಮರಳಿದ್ದರು. ಗುರುವಾರ ತಮ್ಮ 14 ದಿನಗಳ ಹೋಮ್‌ ಕ್ವಾರೆಂಟೈನ್‌ ಅವಧಿಯನ್ನು ಮುಗಿಸಿದ್ದಾರೆ. ಆದರೆ, ಆಫ್ರಿಕಾದಲ್ಲಿ ಲಾಕ್‌ಡೌನ್‌ ಇರುವುದರಿಂದ ಅವೆರಲ್ಲ ಇನ್ನೂ ಎರಡು ವಾರ ಮನೆಯಿಂದ ಹೊರಗೆ ಹೋಗುವಂತಿಲ್ಲ.

  ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಬೇಕಿತ್ತು. ಆದರೆ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

  ದೀಪ ಬೆಳಗಲು ಪ್ರಧಾನಿ ಮೋದಿ ಕರೆ: ಈ ಬಗ್ಗೆ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಕ್ರಿಕೆಟಿಗ ಜೋಫ್ರಾ..!

  ಹೀಗಾಗಿ ಎರಡನೇ ಪಂದ್ಯಕ್ಕಾಗಿ ಆಫ್ರಿಕಾ ಆಟಗಾರರು ಲಖನೌಗೆ ಪ್ರಯಾಣ ಬೆಳೆಸಿದ್ದರು. ಈ ನಡುವೆ ಉಳಿದ ಎರಡು ಪಂದ್ಯಗಳು ಕೊರೋನಾ ವೈರಸ್‌ ಭೀತಿಯಿಂದಾಗಿ ರದ್ದಾಯಿತು. ಅಲ್ಲಿಗೆ ಪ್ರವಾಸದ ಒಂದೂ ಪಂದ್ಯ ಆಡದೆ ಆಫ್ರಿಕಾ ತಂಡ ತವರಿಗೆ ವಾಪಸ್ಸಾಗುವಂತಾಗಿತ್ತು. ಸರಣಿ ರದ್ದಾದ ಕಾರಣ ಹರಿಣಗಳ ತಂಡದ ಆಟಗಾರರು ಕೋಲ್ಕತ್ತಾಕ್ಕೆ ಬಂದು ಅಲ್ಲಿಂದ ದುಬೈ ಮಾರ್ಗವಾಗಿ ತವರಿಗೆ ಹಿಂದಿರುಗಿದ್ದರು.
  First published: