• Home
 • »
 • News
 • »
 • coronavirus-latest-news
 • »
 • Good News: ಭಾರತಕ್ಕೆ ಶುಭ ಸಂಕೇತವಾದ ಮಂಗಳವಾರ; ಕಳೆದ 7 ತಿಂಗಳಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ದಾಖಲು

Good News: ಭಾರತಕ್ಕೆ ಶುಭ ಸಂಕೇತವಾದ ಮಂಗಳವಾರ; ಕಳೆದ 7 ತಿಂಗಳಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕದಲ್ಲಿ ಸೋಮವಾರ 373 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಮತ್ತು 10 ಸಾವುಗಳು ಸಂಭವಿಸಿವೆ. ಸೋಂಕಿತರ ಪ್ರಮಾಣ 29,81,400 ಮತ್ತು ಸಾವಿನ ಸಂಖ್ಯೆ 37,895 ಕ್ಕೆ ತಲುಪಿದೆ. ರಾಜ್ಯದಲ್ಲಿ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,33,570 ರಷ್ಟಿದೆ.

 • Share this:

  ನವದೆಹಲಿ: ಇಡೀ ದೇಶವನ್ನೇ ಕಳೆದ ಎರಡು ವರ್ಷಗಳಿಂದ ಬೆಂಬಿಡದೆ ಕಾಡಿದ ಕೊರೋನಾ ವೈರಸ್ (Coronavirus) ಇದೀಗ ದೇಶದೆಲ್ಲೆಡೆ ನಿಯಂತ್ರಣಕ್ಕೆ ಬಂದಿದೆ. ಮಂಗಳವಾರ ದೇಶದಲ್ಲಿ 14,313 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಕಳೆದ 224 ದಿನಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಕರಣಗಳ ಸಂಖ್ಯೆ ಇದಾಗಿದೆ. ಇದರೊಂದಿಗೆ ಮಂಗಳವಾರ ದೇಶವ್ಯಾಪಿ ಸೋಂಕಿತರ ಸಂಖ್ಯೆ (COVID-19 Positive Cases) 3,39,85,920 ತಲುಪಿದೆ. ಆದರೆ ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು (COVID Recovery Rate) ಶೇ. 98.04 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ- ಅಂಶಗಳು ತಿಳಿಸಿವೆ. ಮಂಗಳವಾರ 181 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,50,963 ಕ್ಕೆ ತಲುಪಿದೆ.


  ಕಳೆದ 18 ದಿನಗಳಿಂದ ದೈನಂದಿನ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 30,000 ಕ್ಕಿಂತ ಕಡಿಮೆಯಿದೆ ಮತ್ತು ಸತತ 107 ದಿನಗಳವರೆಗೆ 50,000ಕ್ಕೂ ಕಡಿಮೆ ದೈನಂದಿನ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,14,900 ಕ್ಕೆ ತಲುಪಿದ್ದು, ಒಟ್ಟು ಸೋಂಕಿತ ಪ್ರಮಾಣ ಮಾರ್ಚ್ 2020 ರ ನಂತರ ಶೇ. 0.63 ಇದೆ. ರಾಷ್ಟ್ರೀಯ ಕೋವಿಡ್ ಚೇತರಿಕೆಯ ದರವು ಶೇ. 98.04 ರಷ್ಟು ದಾಖಲಾಗಿದೆ, ಇದು ಮಾರ್ಚ್ 2020 ರ ನಂತರ ಅತಿ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.


  ದೈನಂದಿನ ಪಾಸಿಟಿವಿಟಿ ದರವು 1.21 ಶೇಕಡಾ ದಾಖಲಾಗಿದೆ. ಕಳೆದ 43 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆ ಇದೆ. ಸಾಪ್ತಾಹಿಕ ಪಾಸಿಟಿವಿಟಿ ದರವು 1.48 ಶೇಕಡಾ ದಾಖಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 109 ದಿನಗಳಲ್ಲಿ ಇದು ಮೂರು ಶೇಕಡಾಕ್ಕಿಂತ ಕಡಿಮೆಯಾಗಿದೆ.


  ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? 


  ಕಳೆದ 24 ಗಂಟೆಗಳಲ್ಲಿ ಕೇಂದ್ರಾಡಳಿತ ಪ್ರದೇಶವು ಕೇವಲ ಒಂದು ಕೋವಿಡ್ -19 ಪ್ರಕರಣವನ್ನು ದಾಖಲಿಸಿದ್ದರಿಂದ ಲಡಾಖ್‌ನ ಸಕ್ರಿಯ ಪ್ರಕರಣಗಳ ಸಂಖ್ಯೆ ಮಂಗಳವಾರ 46 ಕ್ಕೆ ಇಳಿದಿದೆ. ಯಾವುದೇ ಸಾವು ವರದಿಯಾಗಿಲ್ಲ.


  ಪಂಜಾಬ್ ಮತ್ತು ಹರಿಯಾಣದಲ್ಲಿ ಸೋಮವಾರ ಯಾವುದೇ ಕೊರೋನಾ ವೈರಸ್ ಸಾವುಗಳು ವರದಿಯಾಗಿಲ್ಲ. ಆದರೆ ಪಂಜಾಬ್​ನಲ್ಲಿ 19 ಪ್ರಕರಣಗಳನ್ನು ಸೇರಿಸಿ ಸೋಂಕಿನ ಸಂಖ್ಯೆ  6,01,894 ಕ್ಕೆ ಹೆಚ್ಚಾಗಿದೆ. ಹರಿಯಾಣದಲ್ಲಿ ಏಳು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 7,71,000 ಕ್ಕೆ ತಲುಪಿದೆ.


  ನಾಗಾಲ್ಯಾಂಡ್‌ನ ಕೋವಿಡ್ ಸಂಖ್ಯೆ ಸೋಮವಾರ 31,473 ಕ್ಕೆ ಏರಿಕೆಯಾಗಿದ್ದು, 24 ಜನರಿಗೆ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 671 ರಷ್ಟಿದೆ.


  ಸಿಕ್ಕಿಂನಲ್ಲೂ ಸೋಂಕಿತ ಪ್ರಕರಣಗಳು ಕಡಿಮೆಯಾಗಿವೆ. ಸೋಮವಾರ 10 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 31,677 ಕ್ಕೆ ಏರಿದೆ. ರಾಜ್ಯದ ಕೊರೋನಾ ವೈರಸ್ ಸಾವಿನ ಸಂಖ್ಯೆ 388 ರಷ್ಟಿದ್ದು, ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.


  ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಒಂದು ದಿನದಲ್ಲಿ 23 ಪ್ರಕರಣಗಳು ವರದಿಯಾಗಿವೆ.  ಮತ್ತು  ಯಾವುದೇ ಸಾವು ಸಂಭವಿಸಿಲ್ಲ. ಪಾಸಿಟಿವಿಟಿ ದರವು ಶೇಕಡಾ 0.05 ರಷ್ಟಿದೆ ಎಂದು ಆರೋಗ್ಯ ಇಲಾಖೆಯು ಸೋಮವಾರ ಮಾಹಿತಿ ಹಂಚಿಕೊಂಡಿದೆ. ಅಕ್ಟೋಬರ್‌ನಲ್ಲಿ ಇದುವರೆಗೆ ಸೋಂಕಿನಿಂದ ಎರಡು ಸಾವುಗಳು ವರದಿಯಾಗಿವೆ. ಕಳೆದ ತಿಂಗಳು, ಐದು ಜನರು ಈ ರೋಗಕ್ಕೆ ಬಲಿಯಾಗಿದ್ದರು.


  ಕರ್ನಾಟಕದಲ್ಲಿ ಸೋಮವಾರ 373 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಮತ್ತು 10 ಸಾವುಗಳು ಸಂಭವಿಸಿವೆ. ಸೋಂಕಿತರ ಪ್ರಮಾಣ 29,81,400 ಮತ್ತು ಸಾವಿನ ಸಂಖ್ಯೆ 37,895 ಕ್ಕೆ ತಲುಪಿದೆ. ರಾಜ್ಯದಲ್ಲಿ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,33,570 ರಷ್ಟಿದೆ.


  ಇದನ್ನು ಓದಿ: EPF: PF ಖಾತೆಯಿಂದ 1 ಗಂಟೆಯಲ್ಲಿ 1 ಲಕ್ಷ ಹಣ ಪಡೆಯಬಹುದು, ಹೀಗೆ ಮಾಡಿ ಕುಳಿತಲ್ಲೇ ದುಡ್ಡು ಡ್ರಾ ಮಾಡಿ


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:HR Ramesh
  First published: