Covid-19 Vaccine - ವಿಜ್ಞಾನಿಗಳು ಒಪ್ಪಿದರೆ ದೊಡ್ಡ ಪ್ರಮಾಣದಲ್ಲಿ ಕೊರೋನಾ ವ್ಯಾಕ್ಸಿನ್ ತಯಾರಿಸಲು ಭಾರತ ಸಿದ್ಧ: ಪ್ರಧಾನಿ ಮೋದಿ

ಪ್ರತಿಯೊಬ್ಬ ಭಾರತೀಯನಿಗೂ ಕೊರೋನಾ ವೈರಸ್ ಲಸಿಕೆ ಲಭ್ಯವಾಗುವಂತೆ ಎಲ್ಲಾ ವ್ಯವಸ್ಥೆ ಸಿದ್ಧವಾಗಿದೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ಮೋದಿ ತಿಳಿಸಿದ್ದಾರೆ.

news18-kannada
Updated:August 15, 2020, 2:38 PM IST
Covid-19 Vaccine - ವಿಜ್ಞಾನಿಗಳು ಒಪ್ಪಿದರೆ ದೊಡ್ಡ ಪ್ರಮಾಣದಲ್ಲಿ ಕೊರೋನಾ ವ್ಯಾಕ್ಸಿನ್ ತಯಾರಿಸಲು ಭಾರತ ಸಿದ್ಧ: ಪ್ರಧಾನಿ ಮೋದಿ
ಕೋವಿಡ್ ಲಸಿಕೆ
  • Share this:
ನವದೆಹಲಿ(ಆ. 15): ಕೊರೋನಾ ವೈರಸ್ ಲಸಿಕೆಗೆ ವಿಜ್ಞಾನಿಗಳು ಒಪ್ಪಿಗೆ ನೀಡಿದರೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ತಯಾರಿಸಲು ಭಾರತ ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಲಸಿಕೆ ಉತ್ಪಾದನೆಗೆ ಸಕಲ ಯೋಜನೆ ಸಿದ್ಧವಾಗಿದೆ ಎಂದಿದ್ದಾರೆ.

“ಒಂದಲ್ಲ, ಎರಡಲ್ಲ, ಭಾರತದಲ್ಲಿ ಮೂರು ಕೊರೋನಾ ವೈರಸ್ ಲಸಿಕೆಗಳ ಪರೀಕ್ಷೆಯಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದಷ್ಟೇ ಅಲ್ಲ ಅತಿ ಕಡಿಮೆ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಲಭ್ಯವಾಗುವಂತೆ ವಿತರಣೆಯ ವ್ಯವಸ್ಥೆಯನ್ನೂ ಯೋಜಿಸಲಾಗಿದೆ. ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ದೇಶ ಸಿದ್ಧವಿದೆ” ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಚಾಲನೆಗೊಳಿಸಿ ಮಾತನಾಡುತ್ತಾ, ತಮ್ಮ ಸರ್ಕಾರಕ್ಕೆ ಆರೋಗ್ಯ ಮತ್ತು ಆರ್ಥಿಕ ಸ್ವಾವಲಂಬನೆ ಪ್ರಮುಖ ಆದ್ಯತೆಗಳಾಗಿವೆ ಎಂದು ತಿಳಿಸಿದರು. ಪ್ರತಿಯೊಂದು ಆರೋಗ್ಯ ಪರೀಕ್ಷೆ, ಕಾಯಿಲೆ, ಔಷಧೋಪಚಾರ ಮತ್ತಿತರ ವಿವರಗಳನ್ನ ಹೆಲ್ತ್ ಐಡಿಯೊಂದರ ಅಡಿಯಲ್ಲಿ ಇರಿಸಲಾಗುವುದು ಎಂದು ಈ ಮಿಷನ್​ನ ಮುಖ್ಯಾಂಶವನ್ನ ಬಿಚ್ಚಿಟ್ಟರು.

ಇದನ್ನೂ ಓದಿ: Independence Day 2020: ಆತ್ಮನಿರ್ಭರ್ ಭಾರತ್​​ ಸಾಧನೆಗಾಗಿ ವೋಕಲ್​ ಫಾರ್​ ಲೋಕಲ್​​​ಗೆ ಕರೆಕೊಟ್ಟ ಪ್ರಧಾನಿ ಮೋದಿ

“ಚಿಕಿತ್ಸೆ ಪ್ರಕ್ರಿಯೆ ಸುಗಮವಾಗುವಂತೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಲಾಗುವುದು. ವೈದ್ಯರ ಅಪಾಯಿಂಟ್ಮೆಂಟ್ ಪಡೆಯುವುದು, ಹಣವನ್ನು ಡೆಪಾಸಿಟ್ ಮಾಡುವುದು, ಆಸ್ಪತ್ರೆಯಲ್ಲಿ ದಾಖಲೆಗಳಿಗಾಗಿ ಅಲೆದಾಡುವುದು ಇತ್ಯಾದಿ ಕಾರ್ಯಗಳಿಗೆ ಕಷ್ಟಪಡಬೇಕಾಗಿ ಬರುವುದಿಲ್ಲ” ಎಂದು ನರೇಂದ್ರ ಮೋದಿ ಅವರು ಎನ್​ಡಿಎಚ್​ಎಂ ಯೋಜನೆಯ ವಿವರ ನೀಡಿದರು.ಭಾರತದಲ್ಲಿ ಸಾಮಾನ್ಯ ಜನರಿಂದ ಹಿಡಿದು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಒಂದೇ ವೇದಿಕೆಯಲ್ಲಿ ಆರೋಗ್ಯ ಸೇವೆಗಳ ಒಂದು ಡಿಜಿಟಲ್ ವ್ಯವಸ್ಥೆ ಹಾಗು ಆರೋಗ್ಯ ಮಾಹಿತಿ ಶೇಖರಣೆ ವ್ಯವಸ್ಥೆಯನ್ನು ನಿರ್ಮಿಸುವುದು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್​ನ ಉದ್ದೇಶವಾಗಿದೆ. ಡಿಟಿಟಲ್ ರೂಪದಲ್ಲಿ ಆರೋಗ್ಯ ದತ್ತಾಂಶ ಶೇಖರಿಸಿಡಲು ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ಆರೋಗ್ಯ ವ್ಯವಸ್ಥೆ ಇತ್ಯಾದಿಯನ್ನು ರೂಪಿಸುವ ನ್ಯಾಷನಲ್ ಡಿಜಿಟಲ್ ಹೆಲ್ತ್ ಬ್ಲೂಪ್ರಿಂಟ್ ಅನ್ನು ಜಾರಿಗೆ ತರುವ ಹೊಣೆಗಾರಿಕೆಯು ಈ ಡಿಜಿಟಲ್ ಹೆಲ್ತ್ ಮಿಷನ್​ಗೆ ಇದೆ.
Published by: Vijayasarthy SN
First published: August 15, 2020, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading