Largest Vaccine Drive: 100 ಕೋಟಿ ಕೊರೋನಾ ಲಸಿಕೆ ಡೋಸ್ ಮೈಲಿಗಲ್ಲು; ಸಿಎಂ ಸೇರಿ ಇತರೆ ನಾಯಕರು ಹೇಳಿದ್ದೇನು?

100 ಕೋಟಿ ಕೊರೋನಾ ಲಸಿಕೆ (Corona vaccine) ಡೋಸ್ ಪೂರ್ಣಗೊಂಡಿರುವ ಸಂಭ್ರಮವನ್ನು ಎಲ್ಲಾ ರೈಲ್ವೆ ನಿಲ್ದಾಣ, ಎಲ್ಲಾ ವಿಮಾನ ನಿಲ್ದಾಣ , ಬಸ್ ನಿಲ್ದಾಣ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಬಗ್ಗೆ ಘೋಷಿಸುವ ಮೂಲಕ ಆಚರಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು: ದೇಶದಲ್ಲಿ ಕೊರೋನಾ ಲಸಿಕೆ (Corona vaccine) ಅಭಿಯಾನವು ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಭಾರತ 100 ಕೋಟಿ ಕೊರೋನಾ ಲಸಿಕೆ ಡೋಸ್ (100 Crore Corona Vaccine Dose) ಮೈಲಿಗಲ್ಲನ್ನು ಮುಟ್ಟಿದೆ. '100 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 15ಕ್ಕೆ 96 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಪೂರೈಕೆಯಾಗಿತ್ತು. ಈ ವಿಷಯವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವು ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಯಾರೂ ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ನೋಡಿ.

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ Koo ಮಾಡಿದ್ದು, 'ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗು ಮುಂಚೂಣಿಯಲ್ಲಿ ಕೆಲಸ ಮಾಡಿದ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು. ಈ #LargestVaccineDrive ದೊಡ್ಡ ಯಶಸ್ಸನ್ನು ಸಾಧಿಸಲು ಸಕ್ರಿಯವಾಗಿ ಭಾಗವಹಿಸಿದ ಎಲ್ಲ ನಾಗರಿಕರಿಗೂ ಅಭಿನಂದನೆಗಳು' ಎಂದು ಕೂ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಕೂ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ಅವರು ಭಾರತ ಲಸಿಕೆ ಪೂರೈಕೆಯಲ್ಲಿ ಸಾಧಿಸಿರುವ ಮೈಲಿಗಲ್ಲಿಗೆ ಸಂಭ್ರಮ ವ್ಯಕ್ತಪಡಿಸಿದ್ದು, 'ಈ ಮಹತ್ವದ ಸಾಧನೆಗೆ ಕೈಜೋಡಿಸಿದ ನಮ್ಮ ಎಲ್ಲಾ ಶ್ರಮಜೀವಿ ವಿಜ್ಞಾನಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಉತ್ಸಾಹಭರಿತ ನಾಗರಿಕರಿಗೆ ದೊಡ್ಡ ಚಪ್ಪಾಳೆ. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಭಾರತದ ಶತಕೋಟಿ ಡೋಸ್ ದೊಡ್ಡ ಉತ್ತೇಜನವಾಗಿದೆ' ಎಂದು ಹೇಳಿದ್ದಾರೆ.  'ಜಗತ್ತು ಜೈ ಹಿಂದ್ ಕಥೆಯನ್ನು ಕೇಳುತ್ತಿದೆ, ಏನು ಮಾಡಲಾಗದಿದ್ದರೂ, ಭಾರತ ಅದನ್ನು ಮಾಡಿದೆ. ಈಗ ಕೋವಿಡ್‌ನೊಂದಿಗೆ ಸ್ವಲ್ಪ ಹೆಚ್ಚು ಹೋರಾಟ, 100 ಕೋಟಿ ಲಸಿಕೆ ಹಾಕಿದ ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು' ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಕೂ ಮಾಡಿದೆ.  100 ಕೋಟಿ ಕೋವಿಡ್ - 19 ಲಸಿಕೆಗಳನ್ನು ನೀಡುವ ಮೂಲಕ ಭಾರತ ನರೇಂದ್ರ ಮೋದಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು ಮುಟ್ಟಿದೆ. ಇದಕ್ಕಾಗಿ ಶ್ರಮಿಸಿದ ಆರೋಗ್ಯ ಸಿಬ್ಬಂದಿಗೆ ಹಾಗೂ ಮಾರ್ಗದರ್ಶನ ನೀಡಿದ ಪ್ರಧಾನಿ ನರೇಂದ್ರ‌ ಮೋದಿಯವರಿಗೆ ವಂದನೆಗಳು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಕೂ ಮಾಡಿದ್ದಾರೆ.
  ಲಸಿಕಾ ಅಭಿಯಾನದಲ್ಲಿ ಭಾರತ ಇತಿಹಾಸ ಸೃಷ್ಠಿಸಿದೆ: ಕಟೀಲ್

  ಮೈಸೂರಿನಲ್ಲಿ ಇದೇ ವಿಷಯವಾಗಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಜಗತ್ತಿನ ಎಲ್ಲಾ ದೇಶಗಳು ಲಸಿಕೆ ಹುಡುಕುವ ಕೆಲಸ ಮಾಡಿದ್ವು. ಆದರೆ ನಮ್ಮ ಪ್ರಧಾನಿಯವರು ವೈದ್ಯರಿಗೆ ಧೈರ್ಯ ತುಂಬುವ ಕೆಲಸ‌ ಮಾಡಿದರು. ವಿಜ್ಞಾನಿಗಳಿಗೆ ಪ್ರೇರಣೆ ನೀಡಿ ಲಸಿಕೆ ಸಂಶೋಧನೆಗೆ ಉತ್ಸಾಹ ತುಂಬಿದರು. ಹಿಂದೆ ದೇಶದಲ್ಲಿ ವ್ಯಾಪಕವಾಗಿ ಪೊಲೀಯೋ ಬಂತು. ಆದಕ್ಕೆ ಲಸಿಕೆ ಹುಡುಕುವ ಕೆಲಸವನ್ನ ಕಾಂಗ್ರೆಸ್ ಮಾಡಲಿಲ್ಲ. ಆದರೆ ಕೋವಿಡ್ ಸಮಯದಲ್ಲಿ ಮೋದಿ 20 ಗಂಟೆ ಕೆಲಸ ಮಾಡಿದ್ದಾರೆ.  ನರೇಂದ್ರ ಮೋದಿ ಪ್ರೇರಣೆಯಿಂದ ಲಸಿಕಾ ಅಭಿಯಾನ ಸಾಧನೆ ಮಾಡಿದೆ. ಇದಕ್ಕಾಗಿ ದೇಶದ ವಿಜ್ಞಾನಿಗಳಿಗೆ, ತಜ್ಞರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಳ್ಳಿಹಳ್ಳಿಗೆ ಲಸಿಕೆ ತಲುಪಿಸಿದ ವೈದ್ಯರು, ದಾದಿಯರು, ಆಶಾಕಾರ್ಯಕರ್ತೆಯರಿಗೆ ಅಭಿನಂದನೆಗಳು. ಪೌರಕಾರ್ಮಿಕರು, ಪೊಲೀಸರಿಗೂ ಅಭಿನಂದನೆ ಸಲ್ಲಿಸಬೇಕು. ಇಂದು 100 ಕೋಟಿ ಲಸಿಕಾ ಅಭಿಯಾನ ಪೂರ್ಣಗೊಳಿಸಲಾಗಿದೆ. 70ಕೋಟಿ ಜನರಿಗೆ ಮೊದಲ ಡೋಸ್ ಹಾಗೂ 30ಕೋಟಿ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ವಿರೋಧ ಪಕ್ಷಗಳ ಟೀಕೆಗೆ ಲಸಿಕೆ ನೀಡುವ ಮೂಲಕ ಉತ್ತರ ನೀಡಲಾಗಿದೆ. ಲಸಿಕಾ ಅಭಿಯಾನದಲ್ಲಿ ಭಾರತ ಇತಿಹಾಸ ಸೃಷ್ಠಿಸಿದೆ.

  ಇದನ್ನು ಓದಿ: Covid Vaccination: 100 ಕೋಟಿ ಡೋಸ್ ಕೋವಿಡ್-19 ಲಸಿಕೆ ವಿತರಣೆ; ಕೆಂಪು ಕೋಟೆಯಲ್ಲಿ ಹಾರಾಡಲಿದೆ 1,400 ಕೆಜಿ ತೂಕದ ತಿರಂಗ!

  100 ಕೋಟಿ ಕೊರೋನಾ ಲಸಿಕೆ (Corona vaccine) ಡೋಸ್ ಪೂರ್ಣಗೊಂಡಿರುವ ಸಂಭ್ರಮವನ್ನು ಎಲ್ಲಾ ರೈಲ್ವೆ ನಿಲ್ದಾಣ, ಎಲ್ಲಾ ವಿಮಾನ ನಿಲ್ದಾಣ , ಬಸ್ ನಿಲ್ದಾಣ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಬಗ್ಗೆ ಘೋಷಿಸುವ ಮೂಲಕ ಆಚರಿಸಲಾಗುತ್ತಿದೆ.

  Published by:HR Ramesh
  First published: