Viral Video: ದೇಶವೇ ಲಾಕ್​ಡೌನ್​ ಆದರೂ ಲೆಕ್ಕಕ್ಕಿಲ್ಲ; ಪೊಲೀಸರಿಗೇ ಮಚ್ಚು ತೋರಿಸಿದ ಸ್ವಘೋಷಿತ ದೇವಮಾತೆ!

ಕೆಂಪು ಸೀರೆಯುಟ್ಟು, ಕೈಯಲ್ಲಿ ಮಚ್ಚು ಹಿಡಿದಿರುವ ಮಾ ಆದಿಶಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಿಶಕ್ತಿ ಮಾ ಈಗ ಪೊಲೀಸರ ವಶದಲ್ಲಿದ್ದಾರೆ.

Sushma Chakre | news18-kannada
Updated:March 26, 2020, 9:56 AM IST
Viral Video: ದೇಶವೇ ಲಾಕ್​ಡೌನ್​ ಆದರೂ ಲೆಕ್ಕಕ್ಕಿಲ್ಲ; ಪೊಲೀಸರಿಗೇ ಮಚ್ಚು ತೋರಿಸಿದ ಸ್ವಘೋಷಿತ ದೇವಮಾತೆ!
ಸ್ವಘೋಷಿತ ದೇವಮಾತೆ ಆದಿ ಶಕ್ತಿ
  • Share this:
ಲಕ್ನೋ (ಮಾ. 26): ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ವೈರಸ್​ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ 21 ದಿನಗಳ ಕಾಲ ಲಾಕ್​ಡೌನ್ ಘೋಷಿಸಿದೆ. ಆದರೆ, ಅದಕ್ಕೆ ತಲೆ ಕೆಡಿಸಿಕೊಳ್ಳದ ಉತ್ತರಪ್ರದೇಶದ ಸ್ವಘೋಷಿತ ದೇವಮಾತೆ ರಸ್ತೆಗಿಳಿದು, ತನಗೆ ಬುದ್ಧಿವಾದ ಹೇಳಲು ಬಂದ ಪೊಲೀಸರಿಗೇ ಮಚ್ಚು ತೋರಿಸಿದ್ದಾರೆ.

ಉತ್ತರ ಪ್ರದೇಶದ ಸ್ವಘೋಷಿತ ದೇವಮಾತೆ ಮಾ ಆದಿ ಶಕ್ತಿ ತನ್ನ ಆಶ್ರಮದಲ್ಲಿ ಭಕ್ತರ ಸಭೆ ಕರೆದಿದ್ದರು. ಲಾಕ್​ಡೌನ್​ಗೆ ಘೋಷಿಸಿರುವ ಕೇಂದ್ರ ಸರ್ಕಾರ ಯಾವುದೇ ಧಾರ್ಮಿಕ ಸಭೆಯನ್ನು ನಡೆಸದಂತೆ ಸೂಚಿಸಿರುವುದರಿಂದ ಪೊಲೀಸರು ಮಾ ಆದಿಶಕ್ತಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ತನ್ನನ್ನು ಪ್ರಶ್ನಿಸಿದ ಪೊಲೀಸರ ವಿರುದ್ಧ ಕೂಗಾಡಿದ ಆಕೆ ಪೊಲೀಸರಿಗೆ ಮಚ್ಚು ತೋರಿಸಿದ್ದಾರೆ.

ಇದನ್ನೂ ಓದಿ: ಜೈಲುಗಳಲ್ಲೂ ಕೊರೋನಾ ವೈರಸ್ ಭೀತಿ; ಹರಿಯಾಣದ ಕೈದಿಗಳಿಗೆ 4 ವಾರ ರಜೆ ಘೋಷಣೆ

ತನ್ನನ್ನು ಮುಟ್ಟಲು ಬಂದರೆ ಭಕ್ತರನ್ನು ಕಳುಹಿಸುವುದಾಗಿ ಪೊಲೀಸರಿಗೆ ಅವಾಜ್ ಹಾಕಿದ ಸ್ವಘೋಷಿತ ದೇವಮಾತೆಗೆ ಆಕೆಯ ಭಕ್ತರು ಕೂಡ ಬೆಂಬಲ ನೀಡಿದ್ದಾರೆ. ಈ ವೇಳೆ ಪೊಲೀಸರು ಆಕೆಯ ಭಕ್ತರು ಮತ್ತು ಆಕೆಯ ಮೇಲೆ ಲಾಠಿಚಾರ್ಜ್ ಮಾಡಿ, ಕರೆದುಕೊಂಡು ಹೋಗಿದ್ದಾರೆ.ಕೆಂಪು ಸೀರೆಯುಟ್ಟು, ಕೈಯಲ್ಲಿ ಮಚ್ಚು ಹಿಡಿದಿರುವ ಮಾ ಆದಿಶಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಿಶಕ್ತಿ ಮಾ ಈಗ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: Video Viral: ಕೊರೋನಾ ಭೀತಿ; ಬಿಹಾರದ ಜೋಡಿಗೆ ವಿಡಿಯೋ ಕಾಲ್​ನಲ್ಲೇ ಮದುವೆ!
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading