Corona Vaccine: ಸಿಹಿ ಸುದ್ದಿ- ಈ ವರ್ಷದೊಳಗೆ ಭಾರತಕ್ಕೆ ಬರಲಿವೆ ಇನ್ನೂ 4 ಹೊಸ ಕೊರೋನಾ ಲಸಿಕೆಗಳು

ಬಯೋಲಾಜಿಕಲ್‌ ಇ ಜಾನ್ಸನ್ ಅಂಡ್‌ ಜಾನ್ಸನ್‌ನ ಕೋವಿಡ್ -19 ಲಸಿಕೆಯನ್ನು ಭಾರತಕ್ಕೆ ತರುತ್ತಿದೆ. ಭಾರತೀಯ ಕಂಪನಿಯು ಜಾನ್ಸೆನ್ ಎಂಬ ಹೆಸರಿನ ಲಸಿಕೆಯನ್ನು ಸುಮಾರು 600 ಮಿಲಿಯನ್ ಡೋಸ್ ಉತ್ಪಾದಿಸುವ ಒಪ್ಪಂದವನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಭಾರತದಲ್ಲಿ ಸದ್ಯ ನೀಡಲಾಗುತ್ತಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್ ವಿ ಸೇರಿ ಮೂರು ಕೋವಿಡ್ -19 ಲಸಿಕೆಗಳ ಬಗ್ಗೆ ದೇಶದ ಜನತೆ ಮಾತನಾಡುತ್ತಿದ್ದಾರೆ. ಲಸಿಕೆಗಳ ಕೊರತೆಯ ಬಗ್ಗೆ ಪ್ರಸ್ತಾಪವಾಗುತ್ತಿದೆ. ಈ ಹಿನ್ನೆಲೆ ಈ ಕೊರತೆ ನೀಗಿಸಲು ಹಾಗೂ ಭಾರತದಲ್ಲಿ ಇನ್ನೂ ಅನೇಕ ಕೋವಿಡ್ -19 ಲಸಿಕೆಗಳು ಪೈಪ್‌ಲೈನ್‌ನಲ್ಲಿವೆ. ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ಸುಮಾರು ಅರ್ಧ ಡಜನ್ ಲಸಿಕೆಗಳು ಬರುವ ಸಾಧ್ಯತೆ ಇದೆ. ಇದು ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಬೆಲೆಗಳನ್ನು ತಗ್ಗಿಸುತ್ತದೆ. ಇದರಿಂದ ಲಸಿಕೆಯ ಕೊರತೆಯೂ ನೀಗಲಿದೆ.


  ಇನ್ನು, ದೇಶಕ್ಕೆ ಬರುವ ಈ ಹೊಸ ಲಸಿಕೆಗಳು ಯಾವ್ಯಾವು ಅಂತೀರಾ..? ಇಲ್ಲಿ ತಿಳಿದುಕೊಳ್ಳಿ..


  COVOVAX
  ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಕ್ಸ್‌ಫರ್ಡ್ ಆ್ಯಸ್ಟ್ರಾಜೆನಿಕಾ ಲಸಿಕೆಯನ್ನು ‘ಕೋವಿಶೀಲ್ಡ್’ ಹೆಸರಿನಲ್ಲಿ ತಯಾರಿಸುತ್ತಿತ್ತಿರುವುದು ನಿಮಗೆ ಗೊತ್ತಿರುವ ವಿಚಾರ. ಆದರೆ, ಇದರೊಂದಿಗೆ ಪ್ರೋಟೀನ್ ಆಧಾರಿತ ಕೋವಿಡ್ -19 ಲಸಿಕೆ NVX-CoV2373 ‘ಕೋವೋವ್ಯಾಕ್ಸ್’ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಉತ್ಪಾದಿಸುತ್ತಿದೆ. ಈ ಲಸಿಕೆಯನ್ನು ಯುಎಸ್ ಜೈವಿಕ ತಂತ್ರಜ್ಞಾನ ಕಂಪನಿ ನೋವೋವ್ಯಾಕ್ಸ್‌ ಅಭಿವೃದ್ಧಿಪಡಿಸಿದೆ. ಎಸ್‌ಐಐನ ಕೋವೋವ್ಯಾಕ್ಸ್ ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ.


  ವಿದೇಶದಲ್ಲಿ ಪರಿಣಾಮಕಾರಿತ್ವದ ಪ್ರಯೋಗಗಳ ವಿಷಯದಲ್ಲಿ ನೋವೋವ್ಯಾಕ್ಸ್‌ಗೆ ಅಗತ್ಯವಾದ ಅನುಮೋದನೆಗಳು ದೊರೆತ ನಂತರ, ಎಸ್‌ಐಐ ಭಾರತದಲ್ಲಿಯೂ ಸಹ ಅದೇ ರೀತಿ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


  ಕೋವೋವ್ಯಾಕ್ಸ್ 2 - 3 ತಿಂಗಳಲ್ಲಿ ಹೊರಬರುವ ನಿರೀಕ್ಷೆಯಿದೆ. ಲಸಿಕೆಯ 20 ಕೋಟಿ ಪ್ರಮಾಣವನ್ನು ಡಿಸೆಂಬರ್ ವೇಳೆಗೆ ಉತ್ಪಾದಿಸುವ ಸಾಧ್ಯತೆಯಿದೆ.

  HGC019
  ಪುಣೆ ಮೂಲದ ಮತ್ತೊಂದು ಕಂಪನಿ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್‌ ಭಾರತದ ಮೊದಲ mRNA ಕೋವಿಡ್ -19 ಲಸಿಕೆಯನ್ನು HGC019 ಹೆಸರಿನಲ್ಲಿ ಅಭಿವೃದ್ಧಿಪಡಿಸಿದೆ. ಈ ಲಸಿಕೆಯ ಮೊದಲ ಹಂತದ ಪ್ರಯೋಗಗಳು ಕಳೆದ ತಿಂಗಳು ಪ್ರಾರಂಭವಾಗಿದೆ. ಈ ಕಂಪನಿಗೆ ಕೇಂದ್ರ ಸರ್ಕಾರ 250 ಕೋಟಿ ರೂ. ನೆರವು ನೀಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಈ ಲಸಿಕೆ ಮಾರಾಟಕ್ಕೆ ಲಭ್ಯವಾಗುವ ನಿರೀಕಷ್ಎ ಇದೆ.


  ನೇಸಲ್‌ ಲಸಿಕೆ
  ಭಾರತ್ ಬಯೋಟೆಕ್‌ನ ಮೂಗಿಗೆ ಹಾಕುವ ಲಸಿಕೆ ಪ್ರಸ್ತುತ ಮೊದಲ ಹಂತದ ಪ್ರಯೋಗ ನಡೆಸುತ್ತಿದೆ.


  ಇದನ್ನೂ ಓದಿ:Supersonic Flights: ಬರಲಿವೆ ಶಬ್ಧಕ್ಕಿಂತ ವೇಗವಾಗಿ ಹೋಗೋ ವಿಮಾನಗಳು; ಪ್ರಯಾಣ ಸಮಯ ಅರ್ಧಕ್ಕರ್ಧ ಕಡಿತ !

  ಇಂಟ್ರಾನೇಸಲ್‌ ಲಸಿಕೆ BBV154 ಸೋಂಕು ಹೆಚ್ಚು ತಗುಲುವ ಸ್ಥಳದಲ್ಲಿ ಅಂದರೆ ಮೂಗಿನ ಲೋಳೆಪೊರೆಯಲ್ಲಿ ಇಮ್ಯುನಿಟಿ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ಕೋವಿಡ್ -19 ರ ಸೋಂಕು ಮತ್ತು ಪ್ರಸರಣ ಎರಡನ್ನೂ ತಡೆಯಲು ಇದು ಸಹಾಯ ಮಾಡುತ್ತದೆ.


  ಕೋವ್ಯಾಕ್ಸಿನ್‌ ಅನ್ನು ಸಹ ತಯಾರಿಸುತ್ತಿರುವ ಭಾರತ್ ಬಯೋಟೆಕ್, ವರ್ಷಾಂತ್ಯದ ವೇಳೆಗೆ ತನ್ನ ಮೂಗಿನ ಲಸಿಕೆಯ ಹತ್ತು ಕೋಟಿ ಪ್ರಮಾಣವನ್ನು ಹೊರಹಾಕುವ ನಿರೀಕ್ಷೆಯಿದೆ.


  ZyCoV-D
  ಗುಜರಾತ್‌ನ ಝೈಡಸ್‌ ಕ್ಯಾಡಿಲಾ ಕಂಪನಿ ZyCoV-D ಎಂಬ ಇಂಟ್ರಾಡರ್ಮಲ್ ಪ್ರಸ್ತಾವಿತ ಕೋವಿಡ್ -19 ಲಸಿಕೆಯನ್ನು ಉತ್ಪಾದಿಸುತ್ತಿದೆ. ಇದು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಡಿಎನ್‌ಎ ಲಸಿಕೆ ಯಾಗುವ ಸಾಧ್ಯತೆ ಇದ್ದು, ಪ್ರಸ್ತುತ ಇದನ್ನು ಮಕ್ಕಳ ಮೇಲೆ ಪರೀಕ್ಷಿಸಲಾಗುತ್ತಿದೆ.


  ವರ್ಷಾಂತ್ಯದ ವೇಳೆಗೆ ಕಂಪನಿಯು ಐದು ಕೋಟಿ ಡೋಸ್‌ಗಳನ್ನು ನೀಡುವ ನಿರೀಕ್ಷೆಯಿದೆ. ZyCoV-D ಅನ್ನು ಒಂದು ತಿಂಗಳ ಅವಧಿಯಲ್ಲಿ ಹೊರತರುವ ಸಾಧ್ಯತೆಯಿದೆ. ಝೈಡಸ್‌ ಕ್ಯಾಡಿಲಾ ಇನ್ನೆರಡು ವಾರಗಳಲ್ಲಿ ತುರ್ತು ಬಳಕೆಯ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಲಿದ್ದಾರೆ.

  ಇದನ್ನೂ ಓದಿ:Viral Video: ಅಗಲಿದ ಮಾವುತನಿಗೆ ಗಜರಾಜನ ಅಂತಿಮ ವಿದಾಯ; ಕೇರಳದಲ್ಲೊಂದು ಮನಕಲಕುವ ದೃಶ್ಯ !

  CORBEVAX
  ಹೈದರಾಬಾದ್ ಮೂಲದ ಬಯೋಲಾಜಿಕಲ್‌ ಇ ಕಾರ್ಬೆವಾಕ್ಸ್ ಎಂಬ ಪ್ರಸ್ತಾವಿತ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ, ಇದು ಪ್ರಸ್ತುತ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಟ್ಟಿದೆ. ಕಾರ್ಬೆವಾಕ್ಸ್ ಎಂಬುದು ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದ್ದು, ಕೋವ್ಯಾಕ್ಸಿನ್‌ನಂತಹ ನಿಷ್ಕ್ರಿಯಗೊಂಡ ಸಂಪೂರ್ಣ-ಸೆಲ್‌ ಲಸಿಕೆಗಳನ್ನು ಹೋಲುತ್ತದೆ ಮತ್ತು ವೈರಸ್‌ನ ನೇರ ಘಟಕಗಳನ್ನು ಹೊಂದಿರುವುದಿಲ್ಲ.


  ಕಾರ್ಬೆವಾಕ್ಸ್‌ನ 30 ಕೋಟಿ ಡೋಸ್‌ಗಳನ್ನು ಕಾಯ್ದಿರಿಸಲು ಬಯೋಲಾಜಿಕಲ್‌ ಇ ಗೆ 1,500 ಕೋಟಿ ರೂ.ಗಳ ಮುಂಗಡ ಪಾವತಿ ಮಾಡುವುದಾಗಿ ಸರ್ಕಾರ ಗುರುವಾರ ತಿಳಿಸಿದೆ.

  ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಮೂವತ್ತು ಕೋಟಿ ಡೋಸ್ ಕಾರ್ಬೆವಾಕ್ಸ್ ಅನ್ನು ಹೊರತರುವ ನಿರೀಕ್ಷೆಯಿದೆ. ಈ ಪೈಕಿ ಕನಿಷ್ಠ 7.5 ಕೋಟಿ ಡೋಸ್ ಸೆಪ್ಟೆಂಬರ್ ವೇಳೆಗೆ ಲಭ್ಯವಿರುತ್ತದೆ.

  PTX-COVID19-B
  ಹೆಚ್ಚುವರಿಯಾಗಿ, ಬಯೋಲಾಜಿಕಲ್‌ ಇ mRNA ಲಸಿಕೆಯನ್ನೂ ತಯಾರಿಸುತ್ತಿದೆ. ಕೆನಡಾದ ಕಂಪನಿಯ ಎಂಆರ್‌ಎನ್‌ಎ ಕೋವಿಡ್ -19 ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಕಂಪನಿಯು ಪ್ರಾವಿಡೆನ್ಸ್ ಥೆರಪೂಟಿಕ್ಸ್ ಹೋಲ್ಡಿಂಗ್ಸ್‌ನೊಂದಿಗೆ ಪರವಾನಗಿ ಒಪ್ಪಂದ ಮಾಡಿಕೊಂಡಿದೆ.

  PTX-COVID19-B ಹೆಸರಿನ ಈ ಲಸಿಕೆ ಸದ್ಯ ಕೆನಡಾದಲ್ಲಿ ಅಭಿವೃದ್ಧಿಯ ಹಂತದಲ್ಲಿದೆ.


  ಜಾನ್ಸೆನ್

  ಬಯೋಲಾಜಿಕಲ್‌ ಇ ಜಾನ್ಸನ್ ಅಂಡ್‌ ಜಾನ್ಸನ್‌ನ ಕೋವಿಡ್ -19 ಲಸಿಕೆಯನ್ನು ಭಾರತಕ್ಕೆ ತರುತ್ತಿದೆ. ಭಾರತೀಯ ಕಂಪನಿಯು ಜಾನ್ಸೆನ್ ಎಂಬ ಹೆಸರಿನ ಲಸಿಕೆಯನ್ನು ಸುಮಾರು 600 ಮಿಲಿಯನ್ ಡೋಸ್ ಉತ್ಪಾದಿಸುವ ಒಪ್ಪಂದವನ್ನು ಹೊಂದಿದೆ.

  ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್, ಥೈಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಜಾನ್ಸೆನ್ ಅನ್ನು ಈಗಾಗಲೇ ಅನುಮೋದಿಸಲಾಗಿದೆ.


  SPUTNIK V


  ಭಾರತದಲ್ಲಿ, ಆರು ಕಂಪನಿಗಳು ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಅನ್ನು ಉತ್ಪಾದಿಸುತ್ತವೆ. ಕೋವಿಶೀಲ್ಡ್, ಕೋವ್ಯಾಕ್ಸಿನ್‌ ಹೊರತುಪಡಿಸಿ, ಸ್ಪುಟ್ನಿಕ್‌ ಭಾರತದಲ್ಲಿ ಹೆಚ್ಚು ಬಳಕೆಯಾಗುವ ನಿರೀಕ್ಷೆಯಿದೆ,


  ವಿದೇಶಿ ವ್ಯಾಕ್ಸಿನ್‌ಗಳು


  ಭಾರತೀಯ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ತಂತ್ರಜ್ಞಾನ ವರ್ಗಾವಣೆಯ ಮೂಲಕ ವಿದೇಶಿ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ನೋಡುತ್ತಿವೆ.


  ಸಿಪ್ಲಾ ಭಾರತದಲ್ಲಿ ಮಾಡರ್ನಾ ಅವರ ಬೂಸ್ಟರ್ ಲಸಿಕೆಗಾಗಿ ಒಂದು ಬಿಲಿಯನ್ ಡಾಲರ್ ಹಣವನ್ನು ಮುಂಚಿತವಾಗಿ ಪಾವತಿ ಮಾಡಲಿದೆ ಎನ್ನಲಾಗಿದೆ. ಭಾರತದಲ್ಲಿ ಎರಡು ಬಿಲಿಯನ್ ಡೋಸ್‌ಗಳನ್ನು ತಯಾರಿಸುವ ಸಲುವಾಗಿ ಕೋವಿಡ್ -19 ಲಸಿಕೆಗಳ ತಂತ್ರಜ್ಞಾನ ವರ್ಗಾವಣೆಯನ್ನು ಪಡೆಯಲು ಉದ್ದೇಶಿಸಿದೆ ಎಂದು ವೊಕ್‌ಹಾರ್ಡ್ ಸಹ ಹೇಳಿದೆ.
  ಭಾರತದಲ್ಲಿ ಸದ್ಯ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಚುಚ್ಚುಮದ್ದು ಮಾಡುವ ಸಲುವಾಗಿ ವ್ಯಾಕ್ಸಿನೇಷನ್ ಸಾಮರ್ಥ್ಯವನ್ನು ಹೆಚ್ಚಿಸುವ ರಾಷ್ಟ್ರದ ಯೋಜನೆ ಜಾರಿಯಲ್ಲಿದೆ. ಆದರೂ, ಹೊಸ ರೂಪಾಂತರಗಳು, ಮಕ್ಕಳ ದುರ್ಬಲತೆ ಮತ್ತು ಮುಂತಾದವುಗಳ ಸವಾಲುಗಳಿಗೆ ದೇಶ ಸಿದ್ಧವಾಗಬೇಕಿದೆ.

  Published by:Latha CG
  First published: