ಸಿಡುಬು, ಪೋಲಿಯೋದಂಥ ಪಿಡುಗನ್ನೇ ಹತ್ತಿಕ್ಕಿದ ಭಾರತ ಕೊರೋನಾ ಎದುರಿಸಲು ಸಮರ್ಥ: ವಿಶ್ವ ಆರೋಗ್ಯ ಸಂಸ್ಥೆ
ಸಿಡುಬು, ಪೋಲಿಯೋ ರೋಗ ನಿರ್ಮೂಲನೆ ಮಾಡಿದ ಅನುಭವ ಇರುವ ಭಾರತ, ಕೊರೋನಾ ರೋಗ ವಿರುದ್ಧದ ಹೋರಾಟದಲ್ಲಿ ವಿಶ್ವಕ್ಕೆ ಮುಂದಾಳತ್ವ ವಹಿಸಬಲ್ಲುದು ಎಂಬುದು ಡಬ್ಲ್ಯೂಎಚ್ಒ ಅಭಿಪ್ರಾಯ.

ಪ್ರಾತಿನಿಧಿಕ ಚಿತ್ರ
- News18
- Last Updated: March 24, 2020, 2:07 PM IST
ಜಿನಿವಾ(ಮಾ. 24): ಕೊರೋನಾ ವೈರಸ್ ಸೋಂಕಿಗೆ ಇಟಲಿಯಂಥ ಇಟಲಿ ದೇಶವೇ ತತ್ತರಿಸುತ್ತಿದೆ. ಇನ್ನು, ಭಾರತದಂಥ ಗಲೀಜು ದೇಶದ ಕಥೆ ಏನಪ್ಪಾ ಎಂದು ಹಲವು ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ. ಕಾಯಿಲೆ ವಿಚಾರದಲ್ಲಿ ಭಾರತದ ಹೋರಾಟದ ದಾಖಲೆಗಳು ಬಹಳಷ್ಟು ಜನರಿಗೆ ನೆನಪಾಗಿರುವುದಿಲ್ಲ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಮರೆತಿಲ್ಲ. ಕೊರೋನಾ ವೈರಸ್ ನಿಗ್ರಹ ಮಾಡುವ ಕಾರ್ಯದಲ್ಲಿ ಡಬ್ಲ್ಯೂಎಚ್ಒ ಉತ್ತೇಜಕ ಮಾತುಗಳನ್ನಾಡಿದೆ. ಸಿಡುಬು, ಪೋಲಿಯೋದಂಥ ಸೈಲೆಂಟ್ ಕಿಲ್ಲರ್ ರೋಗಗಳನ್ನೇ ಭಾರತ ಸೋಲಿಸಿದೆ. ಕೊರೋನಾಗೆ ಭಾರತ ಸೋಲೊಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ಧಾರೆ.
ಸಿಡುಬು (ಸ್ಮಾಲ್ ಪಾಕ್ಸ್) ಮತ್ತು ಪೋಲಿಯೋ ರೋಗಗಳನ್ನ ವಿವಿಧ ಕ್ರಮಗಳ ಮೂಲಕ ನಿರ್ಮೂಲನೆ ಮಾಡಿದ ಅನುಭವ ಭಾರತಕ್ಕಿದೆ. ಕೊರೋನಾ ವೈರಸ್ ರೋಗವನ್ನೂ ನಿರ್ಮೂಲನೆ ಮಾಡುವ ಶಕ್ತಿ ಭಾರತಕ್ಕೆ ಇದೆ ಎಂದು ಡಬ್ಲ್ಯೂಎಚ್ಒ ಕಾರ್ಯವಾಹಕ ನಿರ್ದೇಶಕ ಮೈಕೇಲ್ ರಯಾನ್ ತಿಳಿಸಿದ್ಧಾರೆ. ಇದನ್ನೂ ಓದಿ: ಕೊರೋನಾ ಭೀತಿ ಹಿನ್ನೆಲೆ; ಶಾಹೀನ್ಬಾಗ್ನಲ್ಲಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದ ಪೊಲೀಸರು
“ಇಡೀ ವಿಶ್ವವನ್ನೇ ಬಾಧಿಸುತ್ತಿದ್ದ ಸಿಡುಬು ಮತ್ತು ಪೋಲಿಯೋ ಈ ಎರಡು ಸೈಲೆಂಟ್ ಕಿಲ್ಲರ್ಗಳನ್ನು ನಿರ್ಮೂಲನೆ ಮಾಡುವ ಕಾರ್ಯದಲ್ಲಿ ಇಡೀ ವಿಶ್ವಕ್ಕೆ ಭಾರತವೇ ಮುಂದಾಳತ್ವ ವಹಿಸಿತ್ತು. ನಿರ್ದಿಷ್ಟ ಸಾರ್ವಜನಿಕ ಕ್ರಮಗಳ ಮೂಲಕ ಈ ಎರಡು ರೋಗಗಳನ್ನ ನಿವಾರಿಸಿ ವಿಶ್ವಕ್ಕೆ ಒಳ್ಳೆಯ ಕೊಡುಗೆ ನೀಡಿದೆ. ಭಾರತದಂಥ ದೇಶಗಳು ಇಡೀ ವಿಶ್ವಕ್ಕೆ ದಾರಿ ತೋರಿಸುವುದು ನಿಜಕ್ಕೂ ಅದ್ಭುತ” ಎಂದು ಮೈಕ್ ರಯಾನ್ ಪ್ರಶಂಸೆ ಮಾಡಿದ್ಧಾರೆ.
ಈಗ ಕೊರೋನಾ ಪಿಡುಗನ್ನೂ ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕಾರ್ಯ ನಿರೀಕ್ಷಿಸಿದಷ್ಟು ಸುಲಭವಲ್ಲ ಎಂಬುದನ್ನು ಡಬ್ಲ್ಯೂಎಚ್ಒ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.
ಡಬ್ಲ್ಯೂಎಚ್ಒ ಮಹಾನಿರ್ದೇಶಕ ಡಾ. ಟೆಡ್ರೋಸ್ ಪ್ರಕಾರ, ಸರಿಯಾದ ಕ್ರಮಗಳನ್ನು ಸರಿಯಾ ಸಂದರ್ಭದಲ್ಲಿ ಕೈಗೊಳ್ಳದಿದ್ದರೆ ಕೊರೋನಾ ವೈರಸ್ ಸೋಂಕು ಹರಡು ವೇಗ ದಿನಗಳೆದಂತೆ ದ್ವಿಗುಣಗೊಳ್ಳುತ್ತಲೇ ಹೋಗುತ್ತದೆಯಂತೆ. ಅದನ್ನ ಅವರು ಅಂಕಿಅಂಶಗಳ ಮೂಲಕವೇ ಎಚ್ಚರಿಸಿದ್ಧಾರೆ.
ಇದನ್ನೂ ಓದಿ: ರಾಜಸ್ಥಾನದ ಈ ಪಟ್ಟಣದ ಪ್ರತಿಯೊಬ್ಬರಿಗೂ ಕೊರೋನಾ ಪರೀಕ್ಷೆ; ನಾಳೆ ನಿಮ್ಮೂರಿಗೂ ಇಂಥ ಸ್ಥಿತಿ ಬಂದೀತು ಜೋಕೆಚೀನಾದಲ್ಲಿ ಡಿಸೆಂಬರ್ನಲ್ಲಿ ಮೊದಲು ವೈರಸ್ ಸೋಂಕು ಕಾಣಿಸಿಕೊಂಡಿತು. ಆ ಸೋಂಕು 1 ಲಕ್ಷ ಜನರಿಗೆ ಹರಡಲು 67 ದಿನಗಳು ಬೇಕಾದವು. ಇನ್ನಷ್ಟು 1 ಲಕ್ಷ ಜನರಿಗೆ ಸೋಂಕು ತಗುಲಲು 11 ದಿನವಷ್ಟೇ ಹಿಡಿಯಿತು. ಅದಾಗಿ ಕೇವಲ 4 ದಿನಕ್ಕೆ ಇನ್ನೂ 1 ಲಕ್ಷ ಜನರಿಗೆ ಸೋಂಕು ತಗುಲಿತು. ಇದನ್ನು ಸರ್ಕಾರಗಳು ಗಮನಿಸಲೇಬೇಕು ಎಂದು ಟೆಡ್ರೋಸ್ ಹೇಳಿದ್ಧಾರೆ.
ಕೊರೋನಾ ವೈರಸ್ ಅಥವಾ ಕೋವಿಡ್-19 ರೋಗದಿಂದ ಈವರೆಗೆ ಸತ್ತವರ ಸಂಖ್ಯೆ 16 ಸಾವಿರ ದಾಟಿದೆ. ಒಟ್ಟಾರೆ ಸೋಂಕು ತಗುಲಿದವರ ಸಂಖ್ಯೆ 4 ಲಕ್ಷ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 500 ದಾಟಿದೆ.
ಪಿಟಿಐ ಸುದ್ದಿ ಸಂಸ್ಥೆ ವರದಿ
ಸಿಡುಬು (ಸ್ಮಾಲ್ ಪಾಕ್ಸ್) ಮತ್ತು ಪೋಲಿಯೋ ರೋಗಗಳನ್ನ ವಿವಿಧ ಕ್ರಮಗಳ ಮೂಲಕ ನಿರ್ಮೂಲನೆ ಮಾಡಿದ ಅನುಭವ ಭಾರತಕ್ಕಿದೆ. ಕೊರೋನಾ ವೈರಸ್ ರೋಗವನ್ನೂ ನಿರ್ಮೂಲನೆ ಮಾಡುವ ಶಕ್ತಿ ಭಾರತಕ್ಕೆ ಇದೆ ಎಂದು ಡಬ್ಲ್ಯೂಎಚ್ಒ ಕಾರ್ಯವಾಹಕ ನಿರ್ದೇಶಕ ಮೈಕೇಲ್ ರಯಾನ್ ತಿಳಿಸಿದ್ಧಾರೆ.